ಮಾವಿನ ಹಣ್ಣಿನ ಉದರದಿ ಅಡಗಿದ್ದ ಓಟೆ
ನೋಡುತಲಿ ಮಿಡಿಯಿತು ಕ್ರಿಯಾಶೀಲದ ಮೂಟೆ
ದಿನದ ಕಟ್ಟೆಯಲಿ ಎಂದಿನಂತೆ ಜೋಡಿಸಲು
ಒಂದು ಬದಿಯಲಿ ಹಸಿರ ಗರಿಗಳ ಸೇರಿಸಲು
ಮತ್ತೊಂದೆಡೆ ಕೆಂಪು ಮೊಗ್ಗುಗಳ ಸುತ್ತಲಿರಿಸಲು
ಪುಟ್ಟ ಶ್ವೇತ ತುಂಬೆ ಪುಷ್ಪಗಳಲಿ ಅಲಂಕರಿಸಲು
ಮೂಡಿರುವ ಕಾವ್ಯ ಚಿತ್ತಾರದ ಶುಭ ಹೊನಲು
ಆಸ್ವಾಸುವ ಅಭಿಮಾನಿಗಳಿಗಿದು ಮೀಸಲು
- ಲಲಿತಾ ಕೆ ಆಚಾರ್, ಬೆಂಗಳೂರು




















