ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಾಗೂ ಪಟ್ಟಣದ ಅತಿ ದೊಡ್ಡ ದಳವಾಯಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ದ್ವಿಭಾಷಾ ಶಾಲೆಯಲ್ಲಿ ರಾಜ್ಯ ಸರಕಾರದಿಂದ ಎಲ್ಲಾ ಶಾಲೆಗಳಿಗೆ ನೀಡುವ ಎರಡನೇ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ ನೆರವೇರಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಡ್ತಿ ಮುಖ್ಯ ಶಿಕ್ಷಕಿ ಶ್ರೀಮತಿ ಲೀಲಾವತಿಯವರು ಸರಕಾರವು ಶಾಲೆಗಳಿಗೆ ಹಾಗೂ ಮಕ್ಕಳಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಉಚಿತ ಪಠ್ಯ ಪುಸ್ತಕ, ಉಚಿತ ಸಮವಸ್ತ್ರ, ಉಚಿತ ಶೂ, ಉಚಿತ ಮಧ್ಯಾಹ್ನದ ಬಿಸಿ ಊಟ, ಹಾಲು ಮೊಟ್ಟೆ, ಬಾಳೆಹಣ್ಣು ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಮಕ್ಕಳು ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಪ್ರತಿನಿತ್ಯ ಶಾಲೆಗೆ ತಪ್ಪದಂತೆ ಹಾಜರಾಗಬೇಕೆಂದರು. ಸಮವಸ್ತ್ರವನ್ನು ಪ್ರತಿದಿನ ಧರಿಸಿ ಸ್ವಚ್ಛತೆಯಿಂದ ಶಿಸ್ತುಬದ್ಧವಾಗಿ ಬರಬೇಕೆಂದು ಮಕ್ಕಳಲ್ಲಿ ಮನವಿ ಮಾಡಿದರು.
ಈ ಸರಳ ಸುಂದರ ಸಮಾರಂಭದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಹ ಶಿಕ್ಷಕರು, ಶಿಕ್ಷಕಿಯರು ಹಾಜರಿದ್ದರು.




















