ಬಳ್ಳಾರಿ / ಕಂಪ್ಲಿ : ಬಡವರ ಹಾಗೂ ಸಮ ಸಮಾಜ ನಿರ್ಮಾಣದ ಪರವಾಗಿ ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ತೀರ್ಮಾನಿಸಲಾಗಿದೆ’ ಎಂದು ನಟ ಚೇತನ್ ಹೇಳಿದರು.
ಪಟ್ಟಣಕ್ಕೆ ಸೋಮವಾರ ಸಂಜೆ ಭೇಟಿ ನೀಡಿ, ಇಲ್ಲಿನ ಸಣಾಪುರ ರಸ್ತೆಯ ಅಂಬೇಡ್ಕರ್ ಕಾಲೋನಿ ಬಳಿಯ ಮುಖ್ಯರಸ್ತೆ ಬದಿಯಲ್ಲಿರುವ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್, ಡಾ.ಬಾಬು ಜಗಜೀವನ್ ರಾಮ್ ಪುತ್ಥಳಿಗೆ ಮಾಲಾರ್ಪಣೆ ಅರ್ಪಿಸಿದ ನಂತರ ಅಂಬೇಡ್ಕರ್ ಸಂಘದ ಅಧ್ಯಕ್ಷ ಎಸ್.ರುದ್ರಮುನಿ ನೇತೃತ್ವದಲ್ಲಿ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಜ್ಯದಲ್ಲಿ ಜನರ ಸಮಸ್ಯೆಗಳ ನಿವಾರಣೆಯಾಗಬೇಕಾದರೆ ಹೊಸ ರಾಜಕೀಯ ಪಕ್ಷದ ಅವಶ್ಯಕತೆ ಇದೆ’. ‘ರಾಜ್ಯದಾದ್ಯಂತ ವಿವಿಧ ಕ್ಷೇತ್ರಗಳಿಗೆ ಪ್ರವಾಸ ಕೈಗೊಂಡು ಹೊಸ ರಾಜಕೀಯ ಪಕ್ಷದ ಸ್ಥಾಪನೆ ಕುರಿತು ಸಮಾನ ಮನಸ್ಕರ ಸಭೆ ನಡೆಸಲಾಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ಸಮಾನತೆ, ಮತದಾನದ ಹಕ್ಕು ಸೇರಿದಂತೆ ನಾಡಿನಲ್ಲಿ ಬಹುಜನರ ನೆಮ್ಮದಿಯ ಬದುಕಿಗೆ ಸ್ವತಂತ್ರ ನೀಡಿದ್ದಾರೆ. ಅವರ ಆದರ್ಶಗಳ ಪರಿಪಾಲಿಸುವ ಮೂಲಕ ಉತ್ತಮ ನಾಗರೀಕರಾಗಿ ಬದುಕು ಕಟ್ಟಿಕೊಳ್ಳೋಣ ಎಂದರು.
ನಂತರ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಎಸ್.ರುದ್ರಮುನಿ ಮಾತನಾಡಿ, ಅಂಬೇಡ್ಕರ್ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಒಂದು ಶಕ್ತಿ. ಶೋಷಿತರ ಧ್ವನಿಯಾಗಿ, ಜ್ಞಾನದ ಸಂಕೇತವಾಗಿ ಬೆಳೆದ ಅವರು ನೀಡಿದ ಕೊಡುಗೆಗಳು ಇಂದಿಗೂ ನಮ್ಮ ಪ್ರಜಾಪ್ರಭುತ್ವದ ಅಡಿಪಾಯವಾಗಿವೆ ಎಂದರು.
ಇಲ್ಲಿನ ಡಾ.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಮ್ ಅವರ ಪುತ್ಥಳಿಗೆ ಹೂವಿನ ಹಾರಗಳನ್ನು ಹಾಕಿ ನಮಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿಜಯಕುಮಾರ, ಹೊನ್ನೂರಪ್ಪ, ತಿಪ್ಪೇಸ್ವಾಮಿ, ಬಾಬು, ಮರಿಸ್ವಾಮಿ, ಯಲ್ಲಪ್ಪ, ಧನಂಜಯ, ರವಿ ಮಣ್ಣೂರು, ಪ್ರಕಾಶ, ಗ್ಯಾಸ್ ರಾಜ, ಮಾರೆಣ್ಣ, ಉಮೇಶ, ಮಂಜು, ರಾಜ, ಸುಂದರ, ಸುದೀಪ್, ಆನಂದ, ವಿದ್ಯ, ದುರುಗೇಶ, ಪುರುಷೋತ್ತಮ, ಕುಬೇರ, ರಾಘವೇಂದ್ರ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















