ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ

ಬೈಲಹೊಂಗಲ: ರಾಜ್ಯದ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಪರಿಹಾರ ಹಾಗೂ ಕೃಷಿಕರ ಅಭಿವೃದ್ಧಿಗಾಗಿ ಆಗ್ರಹಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಭಾರತೀಯ ಕೃಷಿಕ ಸಮಾಜ (ನವದೆಹಲಿ) ರಾಜ್ಯಾಧ್ಯಕ್ಷ ಮಹಾಂತೇಶ ಕಮತ ನೇತೃತ್ವದಲ್ಲಿ ಗುರುವಾರ ಸುವರ್ಣ ವಿಧಾನಸೌಧದಲ್ಲಿ ಮನವಿ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಮಹಾಂತೇಶ ಕಮತ ಮಾತನಾಡಿ, ರಾಜ್ಯದಲ್ಲಿ ಕೆಲಕಡೆ ಅತಿವೃಷ್ಟಿ, ಕೆಲವು ಕಡೆಯಲ್ಲಿ ಅನಾವೃಷ್ಠಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಕ್ರಿಯಾಶೀಲ ಮುಖ್ಯಮಂತ್ರಿಯಾಗಿರುವ ತಾವು ರಾಜ್ಯದ ರೈತರ ಸಂಪೂರ್ಣವಾಗಿ ಒಂದು ಬಾರಿ ಸಾಲ ಮನ್ನಾ ಮಾಡಿ ಅನ್ನ ನೀಡುವ ರೈತರನ್ನು ಋಣಮುಕ್ತರನ್ನಾಗಿ ಮಾಡಬೇಕು, ಬೆಳೆ ಬಿತ್ತಿ ಹಾನಿಗೊಳಾಗದ ಹಾಗೂ ಇನ್ನು ಬಿತ್ತನೆ ಮಾಡದ ರೈತರಿಗೆ ಪರಿಹಾರ ರೂಪದಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ರೈತರು ಬೆಳೆದ ಬೆಳಗಳನ್ನು ಬೆಂಬಲ (MSP) ಬೆಲೆಯಲ್ಲಿ ಖರೀದಿಸಲು APMC ಗಳಲ್ಲಿ ಶಾಶ್ವತ ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯದ ನೀರಾವರಿಗೆ ಆಧ್ಯತೆ ನೀಡುವ ನಿಟ್ಟಿನಲ್ಲಿ ಮಲಪ್ರಭಾ, ಕೃಷ್ಣ, ತುಂಗಾ, ಕಾವೇರಿ ನದಿಗಳ ಹೋಳು ತಗೆಯುವದು, ಕಳಸಾ ಬಂಡೂರಿ ನಾಲಾ ಜೋಡನೆ, ಮಹಾದಾಯಿ ನದಿ ಮಲಪ್ರಭಾ ನದಿ ಜೋಡನೆಯ ತೊಂದರೆಗಳನ್ನು ನಿವಾರಿಸಿ ಯೋಜನೆ ಜಾರಿ ತರಬೇಕು. ಮಲಪ್ರಭಾ ನದಿ ದಡದಲ್ಲಿರುವ ಜಾಕವೆಲ್ ಗಳು 20 ವರ್ಷದಿಂದ ದುರಸ್ತಿಯಾಗಿಲ್ಲ ಇವುಗಳ ದುರಸ್ತಿಗೆ ಕ್ರಮ ಹಾಗೂ ನಯನಗರ ಹತ್ತಿರ ಹೊಸ ಜಾಕವೆಲ್ ತೆರೆದು ಬೆಳವಡಿ-ಬುಡರಕಟ್ಟಿ ಏತ ನೀರಾವರಿ ಪ್ರಾರಂಭಿಸಬೇಕು.
VB-G-RAMG ಯೋಜನೇಯಲ್ಲಿ ರೈತರಿಗೆ ಪ್ರತಿ ಏಕರೆಗೆ ಪ್ರತಿ ವರ್ಷ 15-20 ಕೂಲಿಗಳನ್ನು ಅಳವಡಿಸಿ ಕೃಷಿಗೆ ಉತ್ತೆಜನ ನೀಡಬೇಕು.
ಕೃಷಿ ಇಲಾಖೆಯಲ್ಲಿ ದೊರೆಯುವ ಬೀಜ, ರಸಗೊಬ್ಬರ, ಪರಿಕರಗಳನ್ನು ಹಾಗೂ ಕ್ರೀಮಿನಾಶಕಗಳನ್ನು ಒಳ್ಳೆಯ ಗುಣಮಟ್ಟದವುಗಳನ್ನು ಖರೀದಿಸಲು ದಿಟ್ಟ ಕ್ರಮ ಕೈಗೊಳ್ಳಬೇಕು. ಬಿಡದಿ ಟೌನ್ ಶಿಪ್ ದಲ್ಲಿ ರೈತರಿಗೆ ಕೊಡುವ ಪರಿಹಾರದ ಹಣದಷ್ಟೆ ಉತ್ತರ ಕರ್ನಾಟಕದ ಯೋಜನೆಗಳಾದ ಗೊವಾ ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಹಾಗೂ ಬೆಳಗಾವಿ ಧಾರವಾಡ ನೇರ ರೈಲ್ವೆ ಯೋಜನೆಯಲ್ಲಿ ಭೂಮಿ ಕಳೆದಕೊಂಡ ರೈತರರಿಗೆ ಕೊಡಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ರೈತರಿಗೆ ಪರಿಹಾರ ಕೊಡಿಸಬೇಕು.
2025-26ನೇ ಸಾಲಿನ ಹಾಗೂ 2024-25ರ ಕೆಲ ಸಾಲಬಾದೆಯಿಂದ ಮೃತರಾದ ಅರ್ಹ ರೈತ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಬೇಕು.
ಪಾದರಸದಂತೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿರುವ ತಾವು, ನಿಷ್ಪಕ್ಷಪಾತವಾಗಿ ಕ್ರೀಯಾಶಿಲವಾಗಿ ಆಡಳಿತಕ್ಕೆ ಚುರುಕು ಮುಟ್ಟಿಸಿರುವ ತಮ್ಮ ಅಧಿಕಾರವಧಿಯಲ್ಲಿ ರಾಜ್ಯ ರಾಮರಾಜ್ಯವಾಗುವ ಭರವಸೆ ರಾಜ್ಯದ ಜನತೆಯಲ್ಲಿ ಮೂಡಿದ್ದು ಅದಕ್ಕಾಗಿ ಎಲ್ಲಾ ಇಲಾಖೆಯಲ್ಲಿರುವ ಬ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ದಕ್ಷ ಪ್ರಾಮಾಣಿಕ ಅಧಿಕಾರಿಗಳನ್ನು ಪ್ರೋತ್ಸಾಹಿಸಬೇಕು ರಾಜ್ಯದ ರೈತರ ಹಿತದೃಷ್ಟಿಯಿಂದ ಈ‌ ಎಲ್ಲಾ ಬೇಡಿಕೆಗಳನ್ನು ಈಡೆರಿಸಬೇಕೆಂದು ಸಮಸ್ತ ರೈತರ ಪರವಾಗಿ ವಿನಂತಿಸಿದರು. ಮುಖ್ಯಮಂತ್ರಿಗಳು ಮನವಿ ಪತ್ರಕ್ಕೆ ಧನಾತ್ಮಕವಾಗಿ ಸ್ಪಂದಿಸಿ ಸರ್ಕಾರ ನಿರ್ಧಾರ ತೆಗದುಕೊಳ್ಳುವದಾಗಿ ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ವೆಂಕನಗೌಡ ಕಂಟೆಪ್ಪಗೊಳ, ರಾಜ್ಯ ಕಾನೂನು ಸಲಹೆಗಾರ ಫಕೀರಗೌಡ ಸಿದ್ದನಗೌಡರ, ಧಾರವಾಡ ಜಿಲ್ಲಾಧ್ಯಕ್ಷ ಈರಪ್ಪ ಕಂಕೊಳ್ಳಿ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಕರ್ಕನ್ನವರ ಇದ್ದರು.

ವರದಿ ಮಂಜು ಎಂ.ಚಿಕ್ಕಣ್ಣವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!