ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂದಗಲ್ಲ-ರಾಮತ್ನಾಳ ರಸ್ತೆಯಲ್ಲಿ ಗುಂಡಿಗಳದ್ದೆ ದರ್ಬಾರ

ತೆಗ್ಗು ಗುಂಡಿಗಳಿಂದ ತುಂಬಿರುವ ಕಂದಗಲ್ಲ – ರಾಮತ್ನಾಳ ರಸ್ತೆ ಇಲಕಲ್ಲ : ಬಾಗಲಕೋಟೆ ಜಿಲ್ಲೆಯ, ಇಳಕಲ್ ತಾಲೂಕಿನ ಕಂದಗಲ್ಲ ಗ್ರಾಮದಿಂದ ರಾಯಚೂರು, ಕೊಪ್ಪಳ ಜಿಲ್ಲೆಯ ಗಡಿ ಗ್ರಾಮ ಪಟ್ಟಣ ಗಳಿಗೆ ಕೇವಲ ನಾಲೈದು ಕಿಲೋಮೀಟರ್ ಅಂತರದಲ್ಲಿ ಸಂಪರ್ಕ ಕಲ್ಪಿಸುವ ಕಂದಗಲ್ಲ- ರಾಮತ್ನಾಳ ರಸ್ತೆ ಪ್ರಾಣ ಒತ್ತೆ ಇಟ್ಟು ಓಡಾಡುವ ರಸ್ತೆಯಾಗಿ ಮಾರ್ಪಟ್ಟಿದೆ.

ಮೂರು ಜಿಲ್ಲೆಯ ಗಡಿ ಗ್ರಾಮಗಳ ರಸ್ತೆಯಲ್ಲಿ ಜನ ತಮ್ಮ ಹಲವಾರು ಕೆಲಸಗಳಿಗೆ ಈ ರಸ್ತೆಯನ್ನೇ ಲವಲಂಬಿಸಿದ್ದಾರೆ ರಸ್ತೆಯಲ್ಲಿ ಸಂಚರಿಸಬೇಕೆಂದರೆ ಜೀವಕ್ಕೆ ಕುತ್ತು ಇದ್ದೆ ಇದೆ. ಅಷ್ಟೊಂದು ಹದೆಗೆಟ್ಟು ಹೋಗಿದೆ.

ರಸ್ತೆ ತುಂಬೆಲ್ಲಾ ಗುಂಡಿಗಳು ಬಿದ್ದು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಈ ರಸ್ತೆಯಲ್ಲಿ ಮೊದಲು ಬಳ್ಳಾರಿ ಘಟಕದ ಬಳ್ಳಾರಿ ಕೊಡಲಸಂಗಮ, ಬಳ್ಳಾರಿ, ಬಸವಸಾಗರ, ಬಸ್ಸುಗಳು ಸಂಚರಿಸುತ್ತಿದ್ದವು ಸರಿಯಾದ ರಸ್ತೆ ಇರಲಾರದ್ದಕ್ಕೆ ಬಂದಾಗಿವೆ. ಈಗ ಇಲಕಲ್ಲ ಘಟಕದ ಇಲಕಲ್ಲ ತಾವರಗೇರಾ, ಸುಕ್ಷೇತ್ರ ಅಂಕಲಿಮಠ, ಲಿಂಗಸುಗೂರ ಘಟಕದ ಮುದಗಲ್ಲ ಕಂದಗಲ್ಲ ಇಲಕಲ್ಲ ಬಸ್ಸುಗಳು ಸಂಚರಿಸುತ್ತಿದ್ದು ವಾಹನ ಚಾಲಕರು ಈ ರಸ್ತೆ ಯಾವಾಗ ಸರಿಯಾಗುವದೋ ತಿಳಿಯದಾಗಿದೆ ಎನ್ನುತ್ತಾರೆ.

ಕಂದಗಲ್ಲ ಸೇರಿದಂತೆ ಸುತ್ತಮುತ್ತಲಿನ 15 ಕ್ಯಾ ಹೆಚ್ಚು ಗ್ರಾಮಗಳು ಈ ರಸ್ತೆಯನ್ನು ಅವಲಂಬಿಸಿವೆ. ಮಕ್ಕಳು ರೈತರು ಕೊಲೀಕಾರರು. ಮಹಿಳೆಯರು. ಈ ರಸ್ತೆಯ ಪರಿಸ್ಥಿತಿ ಕಂಡು ಭಯ ಪಡುತ್ತಿದ್ದಾರೆ ಸರಕಾರಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಸರಕಾರ ಗ್ಯಾರಂಟಿ ಯೋಜನೆ ಗಳಿಗೆ ಗಮನ ಕೊಟ್ಟಂತೆ ಈ ರಸ್ತೆಗೆ ಡಾಂಬರಿಕರಣದ ಗ್ಯಾರಂಟಿ ಕೊಟ್ಟು ರಸ್ತೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕಾಗಿದೆ.
ಆದರೆ…ಇದು ಯಾವಾಗ ಎನ್ನುತ್ತಾರೆ ಸಾರ್ವಜನಿಕರು. ಮೂರ್ನಾಲ್ಕು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕಂದಗಲ್ಲ ರಾಮತ್ನಾಳ ರಸ್ತೆ ಮೊರ್ನಾಲ್ಕು ವರ್ಷಗಳಿಂದ ಹದೆಗೆಟ್ಟು ಹೋಗಿದೆ ನಿತ್ಯವು ಸಂಕಷ್ಟದಲ್ಲಿ ಪ್ರಯಾಣಿಸಬೇಕಿದೆ ನಮ್ಮ ಬಾಗಲಕೋಟ ಜಿಲ್ಲೆಗೆ ಸಂಬಂಧಿಸಿದ ರಸ್ತೆ ಪರಿಸ್ಥಿತಿ ಇದು. ರಾಯಚೂರು ಜಿಲ್ಲೆಗೆ ಸಂಬಂಧಿಸಿದ ರಸ್ತೆ ಇದ್ದುದರಲ್ಲಿ ಸುಧಾರಣೆಯಾಗಿದ್ದು ಅವರು ದಿನoಪ್ರತಿ ನಮ್ಮ ಭಾಗದ ಜನರಿಗೆ ಕೇಳುವ ಪ್ರಶ್ನೆ ನಿಮ್ಮ ಭಾಗದ ರಸ್ತೆ ಸುಧಾರಿಸುವ ಯಾವಾಗ? ಎಂದು.

ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸಿ ಈ ರಸ್ತೆಯನ್ನು ಸಂಪೂರ್ಣ ಡಾಂಬರೀಕರಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!