ಶುಭ ಕಾರ್ಯದಲಿ ಮಿಂಚಿ ಇಳಿಬಿದ್ದ ಪುಷ್ಪಗಳು
ಎಸಳುಗಳ ಹೆಕ್ಕಿ ಜೋಡಿಸಿರುವ ಹೂದಳಗಳು
ನಡು ನಡುವಲಿ ಗರಿಗೆದರಿರುವ ಹಸಿರೆಲೆಗಳು
ಇದುವೇ ಇಂದಿನ ಕಾವ್ಯ ಚಿತ್ತಾರದ ಸೆಲೆಗಳು
ಹೊಂಬೆಳಕಿನಲಿ ಆಸ್ವಾದಿಸುವ ಸುಸಮಯವಿದು
ಕಣ್ತೆರೆಯುವಾಗ ಮೈಮನಗಳ ಅರಳಿಸುವುದು
ಆತ್ಮೀಯರಲ್ಲಿ ಹಂಚಿಕೊಂಡರೆ ಹಗುರಾಗುವುದು
ಪರಸ್ಪರಲ್ಲಿ ವಿಶ್ವಾಸವಿದ್ದರೆ ನಂಬಿಕೆ ಉಳಿಯುವುದು
- ಲಲಿತಾ ಕೆ ಆಚಾರ್, ಬೆಂಗಳೂರು




















