ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಭೀಮಾಂಬಿಕಾದೇವಿ ಮಠದಲ್ಲಿ 388 ನೆ ಶಿವಾನುಭವ

” ಖಡ್ಗಕಿಂತ ಹರಿತವಾದದು ಲೇಖನಿ ” ಚಿಂತನಗೋಷ್ಠಿ

ಕೊಪ್ಪಳ/ ಯಲಬುರ್ಗಾ: ಶಿಕ್ಷಣದಿಂದ ಉನ್ನತ ಸ್ಥಾನಮಾನದೊಂದಿಗೆ ಪ್ರಗತಿ ಸಾಧಿಸಲು ಸಾಧ್ಯವಾಗಿ, ಶಿಕ್ಷಣದಿಂದ ಶ್ರೇಷ್ಠ ವ್ಯಕ್ತಿಯಾಗಿ, ನಾಗರಿಕನಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಶಿವರಾಜ ಗುರಿಕಾರ ಅವರು ಮಣ್ಣೆತ್ತಿನಾಮವಾಸ್ಯೆಯ ಚತುರ್ದಶಿ ಅಂಗವಾಗಿ ದಮ್ಮೂರು ಗ್ರಾಮದ ಶ್ರೀ ಭೀಮಾಂಬಿಕಾ ದೇವಿಯ ಮಠದಲ್ಲಿ 388 ನೇ ಶಿವಾನುಭವ ಗೋಷ್ಠಿಯಲ್ಲಿ ” ಖಡ್ಗಕ್ಕಿಂತ ಹರಿತವಾದದು ಲೇಖನಿ ” ಚಿಂತನ ಗೋಷ್ಠಿಯಲ್ಲಿ ಮಾತನಾಡಿದರು. ಖಡ್ಗವು ನಮ್ಮ ದೇಹವನ್ನು ಗಾಯಗೊಳಿಸಿದರೆ, ಶಿಕ್ಷಣವು ವ್ಯಕ್ತಿಯ ಮನಸ್ಸನ್ನು ಪರಿವರ್ತನೆ ಮಾಡಿ,ಅಜ್ಞಾನವನ್ನು ಹೊಗಲಾಡಿಸುತ್ತದೆ ಎಂದು ಮಲ್ಲಿಕಾರ್ಜುನ ಶಾಸ್ತ್ರೀ ನಿಟ್ಟಾಲಿ ಅವರು ಮಾತನಾಡಿದರು. ನಮ್ಮ ಜೀವನ ಕತ್ತಲದಿಂದ ಬೇಳಕಿನಡೆ ಬರಲು ಶಿಕ್ಷಣ ಅವಶ್ಯ, ಶಿಕ್ಷಣ ಎಂದರೆ ಹುಲಿಯ ಹಾಲು ಇದ್ದಂತೆ ಶಿಕ್ಷಣದ ರಸದೂಟವನ್ನು ಸವಿದವರು ಹುಲಿಯಂತೆ ಅರ್ಭಟದಿಂದ ಗುಡುಗಿ ಗರ್ಜಿಸಲು ಸಾದ್ಯವಾಗುತ್ತದೆ ಎಂದು ಶ್ರೀ ಭೀಮಾಂಭಿಕಾದೇವಿ ಶಿವಾನುಭವ ಸೇವಾ ಸಮಿತಿ ಅದ್ಯಕ್ಷ ಶರಣಬಸಪ್ಪ ದಾನಕೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಠದ ಒಡೆಯರಾದ ಹನುಮಂತಪ್ಪಜ್ಜ ಧರ್ಮರ, ಹಾಗೂ ಶರಣಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು.
ಶ್ರೀ ಮಠವು ನಡೆದು ಬಂದಿರುವ ಬಗ್ಗೆ ಪ್ರಾಸ್ತಾವಿಕವಾಗಿ ಗುರುಮೂರ್ತಿ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಭಟಪನಹಳ್ಳಿಯ ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶರಣಪ್ಪ ಹಾದಿಮನಿ, ಕೆ.ಎಸ್.ಆರ್.ಟಿ.ಸಿ ನೌಕರ ಮಾರುತಿ ದೇವರಳ್ಳಿ, ನರೇಗಲ್ಲ ಗ್ರಾಮದ ಶ್ರೀ ಮತಿ ಅಕ್ಕಮಹಾದೇವಿ ಗುರಿಕಾರ, ಹಿರಿಯರಾದ ಈರಪ್ಪ ರಾವಣಕಿ, ಹಿರೇ ಪರಪ್ಪ ಅಂಗಡಿ, ಭೀಮಣ್ಣ ಜರಕುಂಟಿ ಗಣೇಶಗೌಡ ನಿಡಗುಂದಿ,ರಮೇಶ ಚಿಕ್ಕಗೌಡ್ರ, ಶರಣಗೌಡ ದ್ಯಾಮನಗೌಡ್ರ, ಬಸವರಾಜ ಮರಗಪ್ಪನವರ ,ಮಂಜುನಾಥ ಭೂನಕೊಪ್ಪ ಸೇರಿದಂತೆ ಇತರರು ಇದ್ದರು.
ಕಳಕಪ್ಪ ಹಡಪದ,ಯಮನೂರಪ್ಪ ಹಳ್ಳಿಕೇರಿ ಸಂಗೀತ ಸೇವೆ ನೀಡಿದರು. ಬಳಿಕ ಅನ್ನ ಸಂತರ್ಪಣೆ ಜರುಗಿತು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!