ಬಾಗಲಕೋಟೆ : ಮಹಾಲಿಂಗಪುರದಲ್ಲಿ ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಸೇವಾ ಸಂಘ, ಮಹಾಲಿಂಗಪುರ ಇವರ ವತಿಯಿಂದ ಮಹಾಲಿಂಗಪುರ ಪುರಸಭೆಯ ಮುಖ್ಯಾಧಿಕಾರಿ ಶ್ರೀ ನಾಮದೇವ ಲಮಾಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಹಾಲಿಂಗಪುರ ಪುರಸಭೆ ವ್ಯಾಪ್ತಿಯಲ್ಲಿ ಹೋರಾಟಗಾರಾದ ಸ್ವತಂತ್ರ ಸೇನಾನಿ ಬೆಳವಡಿ ವಡ್ಡರ ಯಲ್ಲಣ್ಣ ಅವರ ಹೆಸರಿನಲ್ಲಿ ವೃತ್ತ ನಿರ್ಮಾಣ ಮಾಡುವ ಉದ್ದೇಶದಿಂದ ಜಾಗವನ್ನು ಗುರುತಿಸಿ, ಮುಂದಿನ ಕ್ರಮಕ್ಕಾಗಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಹೋರಾಟಗಾರ ಸ್ವತಂತ್ರ ಸೇನಾನಿ ಬೆಳವಡಿ ವಡ್ಡರ ಯಲ್ಲಣ್ಣ ಅವರ ಸೇವೆ ಹಾಗೂ ಹೋರಾಟವನ್ನು ಗೌರವಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶಿವಲಿಂಗ ಜಿ. ಟಿರಕಿ, ಕಾರ್ಮಿಕ ಸಂಘದ ಅಧ್ಯಕ್ಷರು ಅರ್ಜುನ ಬಂಡಿವಡ್ಡರ, ತಿಪ್ಪಣ್ಣ ಬಂಡಿವಡ್ಡರ, ಯಂಕಪ್ಪ ಬಂಡಿವಡ್ಡರ, ರಾಜು ಬಂಡಿವಡ್ಡರ, ಸುರೇಶ ಬಂಡಿವಡ್ಡರ, ಸುನಿಲ ಬಂಡಿವಡ್ಡರ, ಅಶೋಕ ಬಂಡಿವಡ್ಡರ, ರಾಮು ಪಾತ್ರೋಟ, ವಕೀಲರಾದ ಶಶಿಕಾಂತ ಪಾತ್ರೋಟ, ರಾಮು ಬಂಡಿವಡ್ಡರ, ಹಸನ ನದಾಫ ಸೇರಿದಂತೆ ಸಂಘದ ಮುಖಂಡರು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.
ಸ್ವತಂತ್ರ ಸೇನಾನಿ ಬೆಳವಡಿ ವಡ್ಡರ ಯಲ್ಲಣ್ಣ ಅವರ ಹೋರಾಟಕ್ಕೆ ಗೌರವ – ವೃತ್ತ ನಿರ್ಮಾಣಕ್ಕೆ ಠರಾವ ಪಾಸ್ ಮಾಡಿದ್ದು ಮುನ್ನಡೆ.




















