ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದೀನ ದಲಿತ ದಮನಿತ ವರ್ಗಗಳಿಗೆ ಆಶಾಕಿರಣವಾಗಿ, ಹಿಂದುಳಿದವರ ಬದುಕಿಗೆ ಹೊಸ ದಾರಿಯಾದವರು ಅರಸುರವರು ರೈತರ ಪಾಲಿನ ಮಹಾನ್ ನಾಯಕ : ಜೂಗಲ್ ಮಂಜುನಾಯಕ

ಬಳ್ಳಾರಿ / ಕಂಪ್ಲಿ : ರಾಜ್ಯದ ಶೋಷಿತರು, ಹಿಂದುಳಿದವರು, ದಲಿತರು, ಬಡವರು, ರೈತರು ಹಾಗೂ ಅವಕಾಶಗಳಿಂದ ವಂಚಿತವಾದ ಸಮುದಾಯಗಳಿಗೆ ಸಮಾನತೆ ಮತ್ತು ನ್ಯಾಯದ ಮರ‍್ಗ ತೋರಿದ ಮಹಾನ್ ನಾಯಕ ಡಿ.ದೇವರಾಜು ಅರಸು ಆಗಿದ್ದರು ಎಂದು ತಹಸೀಲ್ದಾರ್ ಜೂಗಲ್ ಮಂಜುನಾಯಕ ತಿಳಿಸಿದರು.
ಅವರು ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಏರ್ಪಡಿಸಿದ ಸಮಾನತೆಯ ಹರಿಕಾರ ದಿ. ಡಿ.ದೇವರಾಜು ಅರಸು ಅವರ ಜಯಂತಿ ಕಾರ‍್ಯಕ್ರಮದಲ್ಲಿ ದೇವರಾಜು ಅರಸು ಅವರ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ, ಪುಷ್ಪರ‍್ಪಣೆ ಮಾಡಿ ಮಾತನಾಡಿದರು.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಅರಳಿದ ಹೂವು ಕರುನಾಡಿಗೆ ಬೆಳಕಾಗಿ ದಲಿತ, ದಮನಿತ ವರ್ಗಗಳಿಗೆ ಆಶಾಕಿರಣವಾಗಿ, ಹಿಂದುಳಿದವರ ಬದುಕಿಗೆ ಹೊಸ ದಾರಿಯಾದವರು ಅರಸು. ರೈತರ ಪಾಲಿನ ಹಕ್ಕಿನ ಧ್ವನಿಯಾಗಿ, ಅಭಿವೃದ್ಧಿಯ ಹೆಜ್ಜೆ ಗುರತು ಮೂಡಿಸಿದವರು ಎನ್ನುವುದಕ್ಕೆ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸದಲ್ಲಿ ದಾಖಲಾಗಿರುವ ಅವರ ಕೊಡುಗೆಗಳೇ ಸಾಕ್ಷಿಯಾಗಿವೆ.
1972ರಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಅರಸು ಅವರು ರಾಜ್ಯದ ಆಡಳಿತಕ್ಕೆ ಹೊಸ ಸಾಮಾಜಿಕ ದೃಷ್ಟಿಕೋನ ನೀಡಿದವರು. ಅವರ ಆಡಳಿತಾವಧಿಯಲ್ಲಿ ಕರ್ನಾಟಕದ ಸಾಮಾಜಿಕ ಹಾಗೂ ಆರ್ಥಿಕ, ಇತಿಹಾಸದಲ್ಲಿ ಮಹತ್ತರ ತಿರುವಾಗಿ ಗುರುತಿಸಲ್ಪಟ್ಟಿದೆ. ಆಡಳಿತದ ಕೇಂದ್ರ ಬಿಂದುವಿನಲ್ಲಿ ಸಾಮಾನ್ಯ ನಾಗರೀಕನನ್ನು ಇರಿಸಿ ದಶಕಗಳ ಕಾಲ ಅವಕಾಶಗಳಿಂದ ದೂರವಿದ್ದ ಸಮದುಆಯಗಳಿಗೆ ಶಿಕ್ಷಣ, ಉದ್ಯೋಗ, ಭೂಮಿ ಹಾಗೂ ಸಾಮಾಜಿಕ ಗೌರವದೊರಕಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದಾರೆ.
ಅರಸುವರ ಆಡಳಿತದ ಅತ್ಯಂತ ಗಮನರ‍್ಹ ಕೊಡುಗೆಗಳಲ್ಲಿ ಭೂಸುಧಾರಣೆ ಅತ್ಯಂತ ಪ್ರಮುಖವಾದದ್ದು. ಉಳುವವನೇ ಒಡೆಯ ಎನ್ನುವ ಆಶಯವನ್ನು ಕಾರ್ಯ ರೂಪಕ್ಕೆ ತರುವ ಮೂಲಕ ಗ್ರಾಮೀಣ ಸಮಾಜದ ಸ್ವರೂಪವನ್ನೇ ಬದಲಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದವು. ಇದರಿಂದ ಭೂಮಿಯನ್ನು ಉಳುಮೆ ಮಾಡುತ್ತಿದ್ದರೂ ಮಾಲೀಕತ್ವ ಹೊಂದಿರದ ಅನೇಕ ಗೇಣಿದಾರ ಕುಟುಂಬಗಳಿಗೆ ಹಕ್ಕಿನ ಭರವಸೆ ದೊರಕಿತು.
ಎಲ್.ಜಿ.ಹಾವನೂರು ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿದರು. ವಿವಿಧ ಸಮುದಾಯಗಳ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಶಿಫಾರಸ್ಸುಗಳನ್ನು ನೀಡಿದ ಹಾವನೂರು ಆಯೋಗದ ವರದಿ ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಹೊಸ ಆಯಾಮ ನೀಡಿತು ಹಾಗೂ ಪ್ರಾತಿನಿಧ್ಯ ಮತ್ತು ಮೀಸಲಾತಿ ಕುರಿತ ನೀತಿಗಳ ಬೆಳವಣಿಗೆಗೆ ಇದು ಪ್ರಮುಖ ಆಧಾರವಾಯಿತೆಂದು ವಿವರಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ನಿಲಯ ಪಾಲಕ ಗಾದಿಲಿಂಗಪ್ಪ ಮಾತನಾಡಿ ದಲಿತರು ಹಿಂದುಳಿದವರು ಹಾಗೂ ಆರ್ಥಿಕವಾಗಿ ದರ‍್ಬಲ ಸಮುದಾಯಗಳ ಬದುಕಿನಲ್ಲಿ ಶೋಷಣೆಯನ್ನು ಕಡಿಮೆ ಮಾಡುವ ಪ್ರಯತ್ನವೂ ಆರಸು ಅವರ ಆಡಳಿತದ ಪ್ರಮುಖ ವೈಶಿಷ್ಟವಾಗಿತ್ತು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವದಿಂದ ಬದುಕುವ ಹಕ್ಕಿದೆ ಎನ್ನುವ ಮಾನವೀಯ ನಿಲುವು ಅವರದ್ದಾಗಿತ್ತೆಂದು ವಿವರಿಸಿದ ಅವರು ಇಂತಹ ಮಹಾನ್ ನಾಯಕನನ್ನು ಕೇವಲ ರಾಜಕಾರಣಿಯಾಗಿ ನೋಡುವುದಕ್ಕಿಂತ ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ ನೋಡುವು ಸೂಕ್ತವೆಂದು ಅಭಿಪ್ರಾಯ ಪಟ್ಟರು.
ಕಾರ‍್ಯಕ್ರಮದಲ್ಲಿ ಶಿರಸ್ತೇದಾರ ಎಸ್.ಕೆ.ರಮೇಶ್, ಸಮಾಜ ಕಲ್ಯಾಣ ಇಲಾಖೆಯ ವಿರೂಪಾಕ್ಷಪ್ಪ, ಕಂದಾಯ, ಪುರಸಭೆ, ತಾ.ಪಂ. ಆರೋಗ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!