ಕನಕಗಿರಿಯ ಶ್ರೀ ವೆಂಕಟೇಶ್ವರ ಹಿರಿಯ ಪ್ರಾಥಮಿಕ
ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಅನೇಕ ವಿದ್ಯಾರ್ಥಿನಿಯರು ಕೃಷ್ಣ ಮತ್ತು ರಾಧೆ ವೇಷಭೂಷಣದಲ್ಲಿ ಕಂಗೊಳಿಸಿದರು.
ಜೊತೆಗೆ ಮಣ್ಣಿನ ಮಡಿಕೆ ಹೊಡೆಯುವ ಕಾರ್ಯಕ್ರಮವು ವಿಭಿನ್ನವಾಗಿ ಮತ್ತು ಸಡಗರ ಸಂಭ್ರಮದಿಂದ ಕೂಡಿತ್ತು.
ಈ ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷರಾಗಿರುವ ಶ್ರೀ ನೀಲಕಂಠಗೌಡ ಪೊಲೀಸ್ ಪಾಟೀಲ್, ಶಾಲೆಯ ಮುಖ್ಯ ಗುರುಗಳಾದ ನಾಗೇಶ್ ಮಾಟೂರ್, ಶ್ರೀಮತಿ ಪ್ರಿಯಾಂಕ ರೆಡ್ಡಿ, ಶ್ರೀ ವೆಂಕಟೇಶ್, ಶ್ರೀಮತಿ ರೇಖಾ, ಶ್ರೀಮತಿ ವಿಜಯಲಕ್ಷ್ಮಿ, ಪಾಲಕ ಪೋಷಕರು ಮತ್ತು ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




















