ಮೈಸೂರು: ಅಂತರಾಷ್ಟ್ರೀಯ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ಕೆ ಎಸ್ ಶಿಲ್ಪಾ ಅವರಿಗೆ ಅಖಿಲ ನಾಮಧಾರಿ ಗೌಡ ಸಂಘದ ವತಿಯಿಂದ ಸೆಪ್ಟೆಂಬರ್ 6ರಂದು ಬೆಳಿಗ್ಗೆ 10:00 ಗಂಟೆಗೆ ಕರ್ನಾಟಕ ಮುಕ್ತ ವಿ.ವಿ ಕಾವೇರಿ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಕರುನಾಡ ಕಂದ ಸುದ್ದಿ ನ್ಯೂಸ್ ಗೆ ಸುದ್ದಿ ನೀಡಿದ ಅಖಿಲ ನಾಮಧಾರಿ ಗೌಡ ಸಂಘದ ಅಧ್ಯಕ್ಷರಾದ ಕೆ. ಟಿ. ಗೋವಿಂದರಾಜು ವಿಷಯ ತಿಳಿಸಿ ಈ ಕಾರ್ಯಕ್ರಮವನ್ನು ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಮಾಜಿ ಅಧ್ಯಕ್ಷ ಡಿ. ಸುಂದರ್ ದಾಸ್ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಮುಕ್ತ ವಿವಿ ಕುಲಪತಿ ಪ್ರೊಫೆಸರ್ ಜ್ಞಾನಪ್ರಕಾಶ್, ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಜನಪ್ರಿಯ ಅಧ್ಯಕ್ಷರಾದ ಎಚ್ಎಸ್ ಅಶೋಕ್ ಮೈಸೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಪರಿಮಳ ಶಾನ್ಸುಂದರ್, ನಾಮಧಾರಿ ಗೌಡ ಕೇಂದ್ರದ ಸಂಘದ ಮಾಜಿ ಅಧ್ಯಕ್ಷರಾದ ಕೆ ಜಿ ನಾಗರಾಜು ಇನ್ನಿತರ ಗಣ್ಯರು ಹಾಜರಿರುವರು.
ಈ ವೇಳೆ ಶಿಲ್ಪಾ ಅವರನ್ನು ಗಣ್ಯರು ಅಭಿನಂದಿಸಲಿದ್ದಾರೆ.
ಈ ಸಂದರ್ಭದಲ್ಲಿ ಅಶೋಕ್, ಜಯರಾಮ್, ಟಿ ರಾಧಾ ಕೃಷ್ಣ ಮತ್ತಿತರರು ಹಾಜರಿದ್ದರು.




















