ಕನಕಗಿರಿ : ಇಂದು ದಿನಾಂಕ : 4/9/2026 ರ ಶುಕ್ರವಾರದಂದು ಪಟ್ಟಣದ ಶ್ರೀ ಸಾಯಿ ಪಬ್ಲಿಕ್ ಸ್ಕೂಲ್ ನಲ್ಲಿ ” ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ನಿಮಿತ್ತ ಮಕ್ಕಳಿಗೆ ಹಬ್ಬದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ಮಕ್ಕಳ ಉತ್ಸಾಹದ ಮೇರೆಗೆ ” ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಲೆಯ ಮುದ್ದು ಮಕ್ಕಳು ಶ್ರೀಕೃಷ್ಣ , ರಾಧೆ , ರುಕ್ಮಿಣಿ ಯರ ವೇಷದಲ್ಲಿ ಮಿಂಚಿದರು.
ಶಿಕ್ಷಕಿಯರು ಉತ್ಸುಕತೆಯಿಂದ ಶ್ರೀಕೃಷ್ಣ ಭಾವಚಿತ್ರಕ್ಕೆ ವಿವಿಧ ಶ್ಲೋಕಗಳನ್ನು ಪಠಿಸುವುದರ ಮೂಲಕ ಪೂಜೆ ಸಲ್ಲಿಸಿದರು.
ಶಿಕ್ಷಕಿ ರಿಯಾನಾ ಬೇಗಂ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡು ತೊಟ್ಟಿಲು, ನಂದಗೋಕುಲ ಮುಂತಾದ ಸಲಕರಣೆಗಳನ್ನು ತಯಾರಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಮಕ್ಕಳಿಂದ ಶ್ರೀಕೃಷ್ಣನ ಉವಾಚಗಳನ್ನು ಹೇಳಿಸಲಾಯಿತು. ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಶಾಲೆಯ ಮುಸ್ಲೀಂ ಸಮಾಜದ ಪಾಲಕರು ಕಾರ್ಯಕ್ರಮಕ್ಕೆ ಆಗಮಿಸಿ ಮಕ್ಕಳ ಜೊತೆ ಬೆರೆಯುವುದರ ಮೂಲಕ ಸರ್ವ ಧರ್ಮ ಸಹಿಷ್ಣುತೆಯನ್ನು ಎತ್ತಿ ತೋರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಶ್ರೀ ಹರೀಶ ನಾಯಕ, ಸಹ ಶಿಕ್ಷಕರಾದ ಮಂಜುನಾಥ ಮಿಟ್ಲಕೋಡ , ಸಹ ಶಿಕ್ಷಕಿಯರಾದ ಬೀಬಿ ಫಾತಿಮಾ ಗಡಾದ್, ಶ್ರೀಮತಿ ತ್ರಿವೇಣಿ ರಾಮ್ ಜಿ , ಶಾಲೆಯ ಅಕೌಂಟೆಂಟ್ ಶ್ರೀ ವೆಂಕಟೇಶ ಕಂಠಿ, ಸಹಶಿಕ್ಷಕಿಯರಾದ ರಿಯಾನಾ ಬೇಗಂ , ಶ್ರೀಮತಿ ನೀಲಾ ಚಿತ್ರಗಾರ, ಪದ್ಮಾವತಿ ಚಿತ್ರಗಾರ, ಪ್ರಿಯಾಂಕ ಚವ್ಹಾಣ ಸಹಶಿಕ್ಷಕಿ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಉತ್ತಮವಾಗಿ ನಿರ್ವಹಿಸಿದರು.
ಇನ್ನುಳಿದ ಸಹಶಿಕ್ಷಕಿಯರಾದ ಅಕ್ಷತಾ ಬೋಂದಾಡೆ , ಶಶಿಕಲಾ ಕನಕಗಿರಿ, ರೋಜಾ ಕನಕಗಿರಿ ಹಾಗೂ ಶಾಲೆಯ ಬೋಧಕೇತರ ಸಿಬ್ಬಂದಿಯಾದ ಶ್ರೀ ವೆಂಕಟೇಶ ಕಲಿಕೇರಿ, ಶ್ರೀಮತಿ ಜುಬೇದಾ ಬೇಗಂ,
ವಾಹನ ಚಾಲಕರಾದ ಜಡೇಶ್.ವಿ, ಭೀಮೇಶ್ ಕಲಿಕೇರಿ, ಹನುಮೇಶ ತಿಪ್ಪನಾಳ ಮತ್ತು ಶಾಲೆಯ ಪಾಲಕರು ಹಾಜರಿದ್ದರು.
ವರದಿ ಹನುಮಂತಪ್ಪ ನಾಯಕ




















