
ವಿರಾಜಪೇಟೆ : ಕೊಡಗು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ- ವಿರಾಜಪೇಟೆ ತಾಲ್ಲೂಕು ವತಿಯಿಂದ ಆಚರಿಸಿದ, ಶಿಕ್ಷಕರ ದಿನಾಚರಣೆ-2026 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ ಶುಭ ಕೋರಿದರು.
ವಿರಾಜಪೇಟೆಯ ಸಂತ ಅನ್ನಮ್ಮನ ಪ್ರೌಢಶಾಲೆ ಸಭಾಂಗಣದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯ ಶಾಸಕರು, ಕಳೆದ ಸಾಲಿನ ಫಲಿತಾಂಶದಲ್ಲಿ ನಮ್ಮ ನಾಡಿನ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಗೊಂಡಿದ್ದಾರೆ. ಇದು ಗುಣಮಟ್ಟದ ಶಿಕ್ಷಣ ನೀಡಿದರ ಪ್ರತಿಫಲವಾಗಿದ್ದು, ಇದರ ಸಂಪೂರ್ಣ ಶ್ರೇಯಸ್ಸು ಪ್ರಾಧ್ಯಾಪಕರಿಗೆ ಸೇರಿದ್ದಾಗಿದೆ. ಅಧ್ಯಾಪಕರು ತಮ್ಮ ಜವಾಬ್ದಾರಿಯನ್ನು ಅರಿತು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಸಮಾಜದಲ್ಲಿ ಬದುಕುವ ರೀತಿಯನ್ನು ಸಹ ಹೇಳಿಕೊಟ್ಟು, ದೇಶದ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕೆಂಬ ಕರೆ ನೀಡಿದರು. ಅತ್ಯಂತ ಜವಾಬ್ದಾರಿಯುತ ಹಾಗೂ ಪೂಜ್ಯನೀಯ ಸ್ಥಾನದಲ್ಲಿ ಇರುವಂತಹ ಶಿಕ್ಷಕರು ಪ್ರತಿದಿನವೂ ತಮ್ಮ ಸಮಯವನ್ನು ಮಕ್ಕಳೊಂದಿಗೆ ಬೆರೆತು ಅವರನ್ನು ಉತ್ತಮ ದಾರಿಗೆ ಕೊಂಡೊಯ್ಯುವಲ್ಲಿ ಪ್ರಯತ್ನ ಪಡುತ್ತಿರುವುದು ಶ್ಲಾಘನೀಯ. ಸಮಾಜಕ್ಕೆ ಶಿಕ್ಷಕರ ಸೇವೆ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪ್ಪುಡೀರ ಅರುಣ್ ಮಾಚಯ್ಯ, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ರೆವರೆಂಡ್ ಫಾಧರ್ ಜೇಮ್ಸ್ ಡೋಮಿನಿಕ್, ವ್ಯವಸ್ಥಾಪಕರು ಸಂತ ಅನ್ನಮ್ಮ ಶಾಲೆ, ವಿರಾಜಪೇಟೆ, ಶಿಕ್ಷಕರ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಮಾದಂಡ ತಿಮ್ಮಯ್ಯ, ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಕಾಳಿಮಾಡ ಪ್ರಶಾಂತ್,ವಿರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಜಾನ್ಸನ್, ಪೊನ್ನಂಪೇಟೆ ತಾಲೂಕು ಬಗರ್ ಹುಕುಂ ಅಧ್ಯಕ್ಷರಾದ ಅಣ್ಣಳ್ಳಮಾಡ ಲಾಲಾ ಅಪ್ಪಣ್ಣ, ಶ್ರೀ ಅಬ್ದುಲ್ ಸಲಾಂ ಆರ್.ಕೆ. ಅಧ್ಯಕ್ಷರು ಬಗರ್ ಹುಕಂ ಸಕ್ರಮೀಕರಣ ಸಮಿತಿ, ವಿರಾಜಪೇಟೆ ತಾಲ್ಲೂಕು,ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲೂಕು ಇ ಓ ರಾಜೇಶ್, ಕ್ಷೇತ್ರದ ಶಿಕ್ಷಣ ಅಧಿಕಾರಿಗಳು ಮಹೇಶ್, ಶ್ರೀ ತಿಮ್ಮಯ್ಯ ಕೋಟ್ರಂಗಡ ಅಧ್ಯಕ್ಷರು, ಅನುದಾನ ರಹಿತ ಆಡಳಿತ ಮಂಡಳಿಯ ಸಂಘ, ಕೊಡಗು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ವರದಿ : ಪ್ರಿತುನ್ ಪೂವಣ್ಣ




















