ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಚಿನ ಪದಕ ಗೆದ್ದ ಕುಮಾರಿ ಶಿಲ್ಪ ಕೆಎಸ್ ಅವರಿಗೆ ಅದ್ದೂರಿ ಅಭಿನಂದನಾ ಸಮಾರಂಭ

ಮೈಸೂರು ಜಿಲ್ಲೆಯ ಸರಗೂರು ಪಟ್ಟಣದ ಅಖಿಲ ನಾಮಧಾರಿ ಗೌಡ ಸಂಘ ಇವರ ವತಿಯಿಂದ 2026ರಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ಭಾರತ ದೇಶದ ಮತ್ತು ನಾಮಧಾರಿ ಗೌಡ ಸಮುದಾಯಕ್ಕೆ ಕೀರ್ತಿ ತಂದ ಕುಮಾರಿ ಶಿಲ್ಪ ಕೆಎಸ್ ಅವರಿಗೆ ಅದ್ದೂರಿಯಾಗಿ ಅಭಿನಂದನಾ ಸಮಾರಂಭವನ್ನು ಸಲ್ಲಿಸಲಾಯಿತು.
ಸಮಾರಂಭದ ಮೊದಲಿಗೆ ಪಟ್ಟಣದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬೆಳ್ಳಿರಥದ ಮೆರವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಡೋಲು ಮಂಗಳವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಾಗಿ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಮಕ್ಕಳಿಂದ ಹಾಗೂ ದೊಡ್ಡವರಿಂದ ಪ್ರಾರ್ಥನಾ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರನ್ನು ಮೊದಲಿಗೆ ಸನ್ಮಾನಿಸಿ, ನಂತರ ಮಾಜಿ ಅಧ್ಯಕ್ಷರಾದ ಸುಂದರ್ ದಾಸ್ ಅವರು ವೇದಿಕೆ ಹಾಗೂ ಎಲ್ಲಾ ಸಮುದಾಯದವರನ್ನು ಸಾರ್ವಜನಿಕರನ್ನು ಉದ್ದೇಶಸಿ ಪ್ರಮುಖವಾಗಿ ಭಾಷಣ ಮಾಡಿದರು.

ನಾನು ಇಂಥ ಸಮಾರಂಭವನ್ನು ಎಂದೂ ನೋಡಿರಲಿಲ್ಲ ನಮ್ಮದು ಚಿಕ್ಕ ಸಮುದಾಯ ಈ ಸಮುದಾಯದಲ್ಲಿ ಹುಟ್ಟಿದ ಮಗು ರಾಜ್ಯ ,ರಾಷ್ಟ್ರದಲ್ಲಿ ಪದಕವನ್ನು ಪಡೆದಿರುವುದು ಎಲ್ಲರಿಗೂ ಸಂತೋಷವನ್ನು ತಂದಿದೆ. ನಿಜವಾಗಿ ಇದು ಹೆಮ್ಮೆಯ ವಿಷಯವಾಗಿದೆ. ವಿದ್ಯಾಭ್ಯಾಸ ಹಾಗೂ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ್ದಾಳೆ. ಈ ಮಗು ಸರಕಾರಿ ಶಾಲೆಯಲ್ಲಿ ಓದಿದ ಮಗುವಾಗಿದ್ದಾಳೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಭಾರತಕ್ಕೆ ಕೀರ್ತಿ ತಂದ ಶಿಲ್ಪ ಅವರಿಗೆ ನಮ್ಮ ನಿಮ್ಮೆಲ್ಲರ ಪರವಾಗಿ ತುಂಬು ಹೃದಯದ ಧನ್ಯವಾದಗಳು ತಿಳಿಸುತ್ತೇನೆ. ನಂತರ ಶಿಲ್ಪ ಅವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ಇಂದಿನ ಅಭಿನಂದನಾ ಸಮಾರಂಭ ಖುಷಿ ತಂದಿದೆ. ಎಲ್ಲರೂ ನನಗೆ ಪ್ರೀತಿ ವಿಶ್ವಾಸವನ್ನು ತುಂಬಿದ್ದಾರೆ. ನನಗೆ ಹೇಳಲು ಪದಗಳೆ ಸಾಲುತಿಲ್ಲ ಎಂದರು. ಎಲ್ಲರಿಗೂ ಆಸೆಗಳು ಇರುತ್ತವೆ ಮಕ್ಕಳಿಗೆ ಪ್ರೋತ್ಸಾಹ ನೀಡಿ ಎಂದು ಸಭೆಯಲ್ಲಿ ಘಂಟಾಘೋಷವಾಗಿ ಹೇಳಿದರು.

ಶಿಲ್ಪ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿಯಿತು. ಸಮಾರಂಭದಲ್ಲಿ ರತ್ನಯ್ಯ ಅಧ್ಯಕ್ಷರು, ಪರಿಮಳ ಶಾಮ್ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು, ಚರಣ್ ಅಶೋಕ್, ಗೋವಿಂದರಾಜು, ದೇವದಾಸ್ ಮುಂತಾದ ಹಲವಾರು ಗಣ್ಯರು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!