ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪೇಟೆ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ನಾಲ್ಕನೇ ವಾರ್ಷಿಕ ಮಹಾಜನ ಸಭೆ

ಬಳ್ಳಾರಿ / ಕಂಪ್ಲಿ : ಪಟ್ಟಣದ ಎಸ್‌ಎನ್‌ಪೇಟೆಯ ಶ್ರೀ ರಾಘವೇಂದ್ರ ಸ್ವಾಮಿ ಶಾಖಾ ಮಠದ ಭವನದಲ್ಲಿ ಶ್ರೀ ಪೇಟೆ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ನಾಲ್ಕನೇ ವಾರ್ಷಿಕ ಮಹಾಜನ ಸಭೆ ರವಿವಾರ ನಡೆಯಿತು.
ಸಂಘದ ಅಧ್ಯಕ್ಷ ಜಗದೀಶ ಜಿ.ರಾಯ್ಕರ್ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಹಕಾರಿ ಸಂಘವು ಕಂಪ್ಲಿ ಸೇರಿದಂತೆ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳನ್ನು ಒಳಗೊಂಡಿರುತ್ತದೆ. ಸಂಘವು 2073 ಜನ ಸದಸ್ಯರನ್ನು ಹೊಂದಿದೆ. ಶೇರು ಬಂಡವಾಳ ರೂ. ಎರಡು ಕೋಟಿ ಇಪ್ಪತ್ತು ಐದು ಲಕ್ಷ ಒಂಬತ್ತು ಸಾವಿರಗಳು ಇರುತ್ತವೆ. ಸುಮಾರು 50,09,037.46 ಗಳಷ್ಟು ನಿಧಿಗಳನ್ನು ಹೊಂದಿದೆ. ಸುಮಾರು 16ಕೋಟಿ 33ಲಕ್ಷ 10ಸಾವಿರ 758 ರೂಪಾಯಿ ಸಂಗ್ರಹಿಸಿರುತ್ತದೆ. ಜಾಮೀನುಸಾಲ, ಮಾರ್ಟಗೇಜ್ ಸಾಲ, ವಾಹನಸಾಲ, ಬಂಗಾರದ ಮೇಲೆ ಸಾಲ, ಹೈಪಾತಿಕೇಶನ್ ಸಾಲ, ಡಿಪಾಜಿಟ್ ಮೇಲೆ ಸುಮಾರು 16,23,10,974 ರೂ.ಗಳ ಸಾಲ ವಿತರಿಸಲಾಗಿದೆ.ಸಾಲ ರೂಪದಲ್ಲಿ ವಿತರಿಸಲಾಗಿದೆ. ಶೇ.90% ರಷ್ಟು ವಸೂಲಾತಿ ಗುರಿ ಸಾಧಿಸಲಾಗಿದೆ. ಪ್ರಸಕ್ತವಾಗಿ ಸಂಘವು 1ಕೋಟಿ 9 ಲಕ್ಷ 52 ಸಾವಿರ ನಿವ್ವಳ ಲಾಭಗಳಿಸಿದೆ. ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು. ಮುಖ್ಯಕಾರ್ಯನಿರ್ವಾಹಕ ಕೆ.ಎಂ.ಕೃತಿಕ್ ವಾರ್ಷಿಕ ವರದಿ ಮಂಡಿಸಿದರು. ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸಹಕಾರಿ ಸಂಘದ ಆಡಳಿತ ಮಂಡಳಿಯವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಡಾ.ಅಶೋಕ ಬಿ.ಹಂದ್ರಾಳ, ನಿರ್ದೇಶಕರಾದ ಕೆ.ರಮೇಶ ರೆಡ್ಡಿ, ವಿರೇಶ ತಾಂಡೂರು, ಕಟ್ಟೆ ವೆಂಕಟೇಶ, ಕರಿಬಸವನಗೌಡ, ಕೃಷ್ಣ ಎಸ್.ಪೋಳ, ಜಿ.ವೀರಭದ್ರಪ್ಪ, ಮನೋಜ್ ಜಿ.ರಾಯ್ಕರ್, ಕೆ.ಎಂ.ಅನಿತಾ ಸುಧಾಕರ, ಸಂಧ್ಯಾ, ಮಾನಸ, ಪ್ರತ್ಯುಷ, ಹೆಚ್.ಎಂ.ಕುಮಾರಸ್ವಾಮಿ, ಟಿ.ಶಂಕರ, ಪಿ..ಜಿಂದಾವಲಿ, ಎನ್.ಚಿದಾನಂದ, ಸತೀಶ ಭತ್ತದ್, ಕೆ.ಎಂ.ಸುಧಾಕರ, ಬಿ.ಸಂತೋಷ್, ವೈ.ರವಿಶಂಕರ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಮುಖಂಡರಾದ ಎಸ್.ಎಂ.ನಾಗರಾಜ, ಅಳ್ಳಳ್ಳಿ ವಿರೇಶ, ಜಿ.ಲಿಂಗನಗೌಡ ಸೇರಿದಂತೆ ಸಿಬ್ಬಂದಿ ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!