ಬಳ್ಳಾರಿ / ಕಂಪ್ಲಿ : ಪಟ್ಟಣದ ಹೊಸ ಬಸ್ ನಿಲ್ದಾಣದ ಮುದ್ದಾಪುರ ಅಗಸಿಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಆವರಣದಲ್ಲಿ 47ನೇ ವಾರ್ಷಿಕ ಮಹಾಜನ ಸಭೆ ಶುಕ್ರವಾರ ನಡೆಯಿತು.
ನಂತರ ಮುಖ್ಯ ಕಾರ್ಯನಿರ್ವಾಹಕ ಹೆಚ್.ಈರಣ್ಣ ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಂಘವು 4068 ಜನ ಸದಸ್ಯರಿದ್ದು, ಇದರಲ್ಲಿ ಸುಮಾರು 1 ಕೋಟಿ 32 ಲಕ್ಷ 85ಸಾವಿರ 200 ರೂ.ಗಳ ಶೇರು ಬಂಡವಾಳ ಹೊಂದಿದೆ.
7 ಕೋಟಿ 19 ಲಕ್ಷ 84ಸಾವಿರ ಕೆಸಿಸಿ ಅಲ್ಪಾವಧಿ ಸಾಲ, 1 ಕೋಟಿ 69 ಲಕ್ಷ 98 ಸಾವಿರ ಬಿಡಿಪಿ ಸಾಲ,
10 ಜನರಿಗೆ 36 ಲಕ್ಷ ಪಂಪ್ಸೆಟ್ ಸಾಲ,
5 ಲಕ್ಷ ಸ್ವಸಹಾಯಕ ಗುಂಪಿಗೆ ಸಾಲ,2025-26ನೇ ಸಾಲಿನಲ್ಲಿ ಸಂಘವು ಆಡಿಟ್ ವರ್ಗೀಕರಣದಲ್ಲಿ “ಎ”ಗ್ರೇಡ್ ಸಾಧನೆ ಮಾಡಿದೆ.
ಸುಮಾರು 1 ಕೋಟಿ 47 ಲಕ್ಷ 64 ಸಾವಿರ 799 ರೂ.ಗಳ ರಸಗೊಬ್ಬರ ವ್ಯವಹಾರ ನಡೆಸಿ,
24 ಲಕ್ಷ 16 ಸಾವಿರ 656 ರೂ.ಗಳ ವ್ಯಾಪಾರಿ ಲಾಭಗಳಿಸಿದೆ. ಸಂಘದಲ್ಲಿ 2,84,64,722 ರೂ.ಗಳ ಠೇವಣಿ ಇರುತ್ತದೆ.
2025-26ನೇ ಸಾಲಿನಲ್ಲಿ ಸಂಘವು 12 ಲಕ್ಷ 40 ಸಾವಿರ 374 ನಿವ್ವಳ ಲಾಭ ಹೊಂದಿದೆ. ಸಂಘದ ಅಭಿವೃದ್ಧಿಗೆ ಪ್ರತಿಯೊಂದು ಹಂತದಲ್ಲಿ ಸಂಘದ ಆಡಳಿತ ಮಂಡಳಿಯವರು, ರೈತರು, ಮುಖಂಡರು ಸಹಕಾರ ನೀಡುತ್ತಾ ಬಂದಿದ್ದು, ಇದೇ ತೆರನಾಗಿ ಸಹಕರಿಸಿ, ಮತ್ತಷ್ಟು ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಸಂಘದ ಅಧ್ಯಕ್ಷ ಬಿ. ಬಸವರಾಜ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಗಂಗಣ್ಣ ತಳವಾರ, ನಿರ್ದೇಶಕರಾದ ಕಟ್ಟೆ ಸಣ್ಣ ದುರುಗಪ್ಪ, ಅಳ್ಳಿ ನಾಗರಾಜ, ಈರಪ್ಪ ಜೋಳಮಾರ, ಬಳೆ ಮಲ್ಲಿಕಾರ್ಜುನ, ಟಿ.ನಿರಂಜನಯ್ಯ, ಸಣ್ಣಪ್ಪ ಎಸ್, ರಾಜೇಶ ಶೆರೆಗಾರ, ಕೃಷ್ಣ ಕೆ, ವಿಶಾಲಾಕ್ಷಿ ಬಿ.ಎಂ, ಕೆ. ನಾಗಮ್ಮ, ವಿ. ರಾಮಚಂದ್ರ(ಕ್ಷೇತ್ರ ಅಧಿಕಾರಿ), ಸಿಬ್ಬಂದಿಗಳಾದ ಕೆ.ಪ್ರಕಾಶ, ಹೆಚ್.ಪರಶುರಾಮ, ಎನ್.ಮಂಜುನಾಥ, ಕೆ.ಭರತ್, ಯು.ಮಂಜುನಾಥ, ಹೆಚ್.ಸಿದ್ದೇಶ, ಪಣಿ ಸೋಮಪ್ಪ ಸೇರಿದಂತೆ ಮುಖಂಡರು, ರೈತರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















