ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪುಸ್ತಕ ವಿಮರ್ಶೆ : ಭಾವ ಬಯಲು ಆಧುನಿಕ ವಚನಗಳು.

ಕವಿ : ಶ್ರೀ ಬಸವರಾಜ ಉಪ್ಪಿನ.
ಪ್ರಕಾಶಕರು : ಮನ್ವಿತಾ ಪ್ರಕಾಶನ. ಬೆಣಕಲ್.583232.
ತಾ. ಕುಕನೂರ, ಜಿ. ಕೊಪ್ಪಳ.
ಮುದ್ರಣ. 2026.
ಪುಟಗಳು. 120.
ಬೆಲೆ. 150 ರೂ.

ಶುದ್ಧ ಸಮಾಜ ನಿರ್ಮಿಸುವ ಆಶಯದ ಪರಿಪಕ್ವ ಆಧುನಿಕ ವಚನಗಳ ‘ಭಾವ ಬಯಲು’
ವಚನಗಳ ಸಂಕಲನ.

ಬಸವರಾಜ ಉಪ್ಪಿನ ಅವರು ಮೂಲತಃ ಕೊಪ್ಪಳ ಜಿಲ್ಲೆಯ, ಕುಕನೂರ ತಾಲೂಕಿನ ಬೆಣಕಲ್ ಗ್ರಾಮದವರು, ಈ ಗ್ರಾಮದ
ಶರಣ ದಂಪತಿಳಾದ ಶ್ರೀ ಅಂದಾನಪ್ಪ ಉಪ್ಪಿನ ಮತ್ತು ಶ್ರೀಮತಿ ಸುಲೋಚನಾ ಅವರ ಸುಪುತ್ರರಾಗಿ ಜನಿಸಿದರು.
ವೃತ್ತಿಯಿಂದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಉಳ್ಳವರಾಗಿ, ಕಥೆ, ಕವನ, ರುಬಾಯಿ, ಹಾಯ್ಕು, ಹನಿಗವನ, ವಚನಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುತ್ತಾ ಸಾಹಿತ್ಯದ ಪ್ರತಿನಿಧಿಯಾಗಿ ತಮ್ಮನ್ನು ತೊಡಗಿಸಿಕೊಂಡಿರುವುದಕ್ಕೆ ಇದೀಗ ಪ್ರಕಟವಾಗಿರುವ ಅವರ ಆಧುನಿಕ ವಚನಗಳ ಸಂಕಲನ ಭಾವ ಬಯಲು, ಸಾಕ್ಷಿಯಾಗಿದೆ. ಇದರ ಅವಲೋಕನವೇ ಈ ಬರಹ.

ಶಿಕ್ಷಕ ವೃತ್ತಿಯಲ್ಲಿರುವವರು ಸಾಮಾನ್ಯವಾಗಿ ಸಾಹಿತ್ಯ, ಸಂಗೀತ, ಚಿತ್ರ ಕಲೆಗಳಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತರಾಗಿರುತ್ತಾರೆ, ಈ ಮಾತಿಗೆ ಉಪ್ಪಿನ ಅವರೂ ಹೊರತಾಗಿಲ್ಲ.
ಸಾಹಿತ್ಯ ಕ್ಷೇತ್ರದಲ್ಲಿ, ವಚನ ಸಾಹಿತ್ಯ ವು ಜಗತ್ತಿಗೆ ನೀಡಿದ ಕೊಡುಗೆ ಅಪಾರ, ಅಮೋಘ. ಬಸವಾದಿ ಪ್ರಮಥರು ತಮ್ಮ ವಚನಗಳ ಮೂಲಕ, ನಡೆ ನುಡಿಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿ, ಸಮಾಜ ಸುಧಾರಣೆಯಲ್ಲಿ ವಿಶೇಷ ಪಾತ್ರ ವಹಿಸಿದ್ದು ಈಗ ಇತಿಹಾಸ, ಬಸವಣ್ಣನವರ
ವಚನಗಳು, ಬಹುತೇಕರ ಗಮನ ಸೆಳೆದು ಅವರ ಮೇಲೆ ಗಾಢವಾದ ಪರಿಣಾಮ ಬೀರಿದ್ದೂ ಉಂಟು. ಅಂತಹ ಗಾಢವಾದ ಪ್ರಭಾವ, ಆಧುನಿಕ ವಚನಕಾರರಾಗಿರುವ ಬಸವರಾಜ ಉಪ್ಪಿನ ಅವರ ಮೇಲೂ ಆಗಿರುವುದು, ಅವರ ವಚಗಳನ್ನು ಅವಲೋಕನ ಮಾಡಿದಾಗ ಗೊತ್ತಾಗುತ್ತದೆ. ಭಾವ ಬಯಲು ಅಂತಹ ಒಂದು ನೂರಾ ಹತ್ತು (110) ವಚನಗಳನ್ನು ಒಳಗೊಂಡ ವಚನ ಸಂಕಲನ.
ಬೆನ್ನುಡಿ ಬರೆದು ಬೆನ್ನು ತಟ್ಟಿದ ಅರ್ಥಶಾಸ್ತ್ರ ವಿಷಯ
ಬೋಧಿಸುವ ಪ್ರಾಧ್ಯಾಪಕರಾದ ಪ್ರೊ. ಶರಣಬಸಪ್ಪ ಬಿಳಿಯಲಿ ಅವರು ಬೆನ್ನುಡಿಯನ್ನು ಬರೆಯುವಾಗ, “ವಚನಗಳು ಕನ್ನಡ ಸಾಹಿತ್ಯದ ತವನಿಧಿಗಳು” ಎಂದು ಉಲ್ಲೇಖಿಸಿದ ಈ ಮಾತು ನೂರಕ್ಕೆ ನೂರು ಸತ್ಯವಾಗಿದೆ. ಇದು ಆಧುನಿಕ ವಚನಕಾರಾಗಿರುವ ಬಸವರಾಜ ಉಪ್ಪಿನ ಅವರಿಗೂ ಅನ್ವಯಿಸುತ್ತದೆ ಎಂದು ಹೇಳಿದರೆ ಬಹುಶಃ ತಪ್ಪಾಗದೇನೋ…

ಒಂದು ನೂರಾ ಹತ್ತು ವಚನಗಳನ್ನೊಳಗೊಂಡ ಈ
ವಚನ ಸಂಕಲನದ ಬಹುತೇಕ ವಚನಗಳು ವಾಸ್ತವ ಪ್ರಪಂಚದ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿವೆ, ಅಂತಹ ಕೆಲವು ವಚನಗಳನ್ನು ಅವಲೋಕನ ಮಾಡೋಣ.

” ಗಳಿಸಿದ ಹಣವು ಸ್ಥಿರವಲ್ಲ,
ಪಡೆದ ಅಧಿಕಾರ ಸ್ಥಿರವಲ್ಲ
ಏರಿದ ಅಂತಸ್ತು ಶಾಶ್ವತವಲ್ಲ
ಪಡೆದ ಸವಿ ಸಂತಸ ಅನಂತ
ಎಂದ ಎನ್ನ ಬಸವ, “
ಈ ವಚನದಲ್ಲಿ ಇಲ್ಲಿ ಯಾವುದೂ ಶಾಶ್ವತವಲ್ಲ, ಆದರೆ ಅನುಭವಿಸುವ, ಅವಕಾಶ ಪಡೆಯುವ ಸುಖವೊಂದೇ ಶಾಶ್ವತ, ಎಂದು ಹೇಳಿರುವುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ.
ಕಸ ತುಂಬಿದ ಮನದಿ ಬಯಸಿದರೇನು ಫಲ,
ಬರಿ ಧಾನ್ಯ, ಜಪ ತಪದಿ ಮುಳುಗಿದರೇನು ಫಲ,
ಕನಸಿನ ಸ್ವರ್ಗ ಬಂದು ನಮ್ಮ ಹತ್ತಿರ ಸುಳಿದೀತೆ,
ಶೃದ್ಧೆಯ ಸಂಗದಿ ಒಳ್ಳೆಯ ಕೆಲಸವ ಮಾಡಿದೊಡೆ ಎಮಗೆ ಸ್ವರ್ಗಕ್ಕಿಂತ ಮಿಗಿಲಾದ ಸುಖವು ಸಿಕ್ಕಿತು
ಎನ್ನ ಬಸವ.”
ಈ ವಚನದಲ್ಲಿ ಮನಸಿನಲ್ಲಿ ಕೆಟ್ಟ ವಿಚಾರಗಳನ್ನಿಟ್ಟುಕೊಂಡು
ಮೇಲ್ನೋಟದಲ್ಲಿ ಜಪ, ತಪ,
ಧ್ಯಾನ ಮಾಡಿದರೆ ಯಾವ ಫಲವೂ ಸಿಗಲಾರದು, ಎಂದು ಹೇಳುತ್ತಾ ಸನ್ಮಾರ್ಗ, ಸುವಿಚಾರಗಳಿಂದ ನಡೆದರೆ ಸ್ವರ್ಗ ಸುಖ ಕಾಣಬಹುದು, ಎಂದಿರುವ ಈ ಮಾತಲ್ಲೂ ವಾಸ್ತವಿಕತೆ ಇದೆ. ಈ ವಚನದಲ್ಲಿ ಧ್ಯಾನ ಎಂದು ಪ್ರಕಟವಾಗಬೇಕಾದ ಜಾಗದಲ್ಲಿ ಧಾನ್ಯ ಎಂದು ಸಿಕ್ಕೀತು, ಎಂಬ ಜಾಗದಲ್ಲಿ
ಸಿಕ್ಕಿತು ಎಂದು ಪ್ರಕಟವಾಗಿದೆ, ಇದು ಅಕ್ಷರ ದೋಷವೇ ಹೊರತು ವಚನಕಾರರ ತಪ್ಪಲ್ಲ,
ಮನುಷ್ಯ ತನ್ನ ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕೆಂದರೆ ಅವನ ಸುತ್ತಲಿನ ಜನ ಅವನನ್ನು ಹೀಯಾಳಿಸಿ ಟೀಕಿಸಿ ಮಾತಾಡುವಂತಿದ್ದರೆ
ಅವನಲ್ಲಿ ಛಲ, ಆತ್ಮ ವಿಶ್ವಾಸಗಳು ಮೂಡಿ, ಅವನು ಮುಂದೆ ಬರಲು ಸಾಧ್ಯವಾಗುತ್ತದೆ. ಅದಕ್ಕೆ
ಈ ವಚನ ಸಾಕ್ಷಿಯಾಗಿದೆ.
“ಟೀಕಿಸುವ ಸ್ನೇಹಿತರು ಇರಬೇಕು, ಹೀಯಾಳಿಸುವ ಸಂಬಂಧಿಕರು ಇರಬೇಕು,
ಈ ಈರ್ವರಿಗೆ ಗೊತ್ತು ನಮ್ಮ ಸಾಮರ್ಥ್ಯ, ಅವರೇ ನಮ್ಮನ್ನು ಸದಾ ಕಾಲ ಜಾಗೃತವಾಗಿಸುವ ಕಾವಲುಗಾರು ಎಂದ ಎನ್ನ ಬಸವ.
ಉಪ್ಪಿನವರ ಈ ವಚನವನ್ನು ಓದಿದಾಗ, ನಮ್ಮ ಸಮಾಜ ಶುದ್ಧವಾಗಲು, “ನಿಂದಕರಿರಬೇಕು ಜಗದಲ್ಲಿ
ಹಂದಿಗಳಿರುವಂತೆ” ಎಂಬ ಪುರಂದರ ದಾಸರ ಕೀರ್ತನೆ
ನೆನಪಾಗುತ್ತದೆ.
ಬೇರೆಯವರಿಗೆ ಒಳ್ಳೆಯ ವಿಚಾರಗಳನ್ನು ತಿಳಿಸಲು ಪದವಿಗಳ ಅಗತ್ಯವಿಲ್ಲ, ಅವರ ಅನುಭವದ ಮಾತುಗಳು, ಇತರರಿಗೆ ಪ್ರೇರಕ, ಮಾರ್ಗದರ್ಶಕವಾಗಿದ್ದರೆ ಅದೇ ಜ್ಞಾನದ ಸಂಕೇತ, ಎಂದು ಈ ಕೆಳಗಿನ ವಚನದಲ್ಲಿ ಹೇಳಿದ್ದಾರೆ.
“ಅನುಭಾವ ಹೇಳಲು ಪದವಿಯೇ ಬೇಕಿಲ್ಲ,
ಸೇವೆಯ ಗೈಯಲು ಅಧಿಕಾರವೇ ಬೇಕಿಲ್ಲ,
ಮಾಡುವ ಮನವೊಂದಿದ್ದರೆ ಸಾಕು, ಸಕಲ ಕಾರ್ಯ ಸಿದ್ದಿಗೆ, ಎಂದ ಎನ್ನ ಬಸವ “
ಹೀಗೆ ವಚನ ಸಂಕಲನದುದ್ದಕ್ಕೂ ನವ ಸಮಾಜ ನಿರ್ಮಾಣದ ಆಶಯವನ್ನು ಹೊಂದಿದ ಹಲವು ವಚನಗಳು ಗಮನ ಸೆಳೆಯುತ್ತವೆ, ಒಟ್ಟಾರೆಯಾಗಿ ಆಧುನಿಕ ವಚನಕಾರಾಗಿ ಗುರುತಿಸಿಕೊಂಡಿರುವ ಬಸವರಾಜ ಉಪ್ಪಿನ ಅವರ ವಚನಗಳು ಕನ್ನಡ ಸಾರಸ್ವತ ಪ್ರಪಂಚದಲ್ಲಿ ಯಶಸ್ಸಿನ ಮೆಟ್ಟಿಲುಗಳಾಗಲಿ ಎಂದು ಆಶಿಸುತ್ತಾ ನನ್ನೀ ಬರಹಕ್ಕೆ ವಿರಾಮ ಹೇಳುವೆ.

  • ಶಿವಪ್ರಸಾದ್ ಹಾದಿಮನಿ.
    ಕನ್ನಡ ಉಪನ್ಯಾಸಕರು.
    ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!