ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗೊಲ್ಲರಹಳ್ಳಿ ಗ್ರಾಮದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

ಲ್

ಕೊಟ್ಟೂರು : ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಡಿ ವಾಯ್ಸ್ ಆಫ್ ವಿಶ್ವಕರ್ಮ ಹಾಗೂ ಯೂತ್ಸ್ ಆಫ್ ವಿಶ್ವಕರ್ಮ ಬಳಗದಿಂದ ವಿಶ್ವಕರ್ಮನ ಫೋಟೋ ಇಟ್ಟು ದೀಪ ಹಚ್ಚಿ, ಪ್ರಾರ್ಥನೆ ಮಾಡಿ ಅದ್ಧೂರಿಯಾಗಿ ಗುರುವಾರ ಪೂಜೆ ಸಲ್ಲಿಸಿ. ವಿಶ್ವಕರ್ಮ ಜಯಂತಿ ಆಚರಣೆ ಮಾಡಲಾಯಿತು.

ವಿಶ್ವಕರ್ಮ ಜಯಂತಿಯನ್ನು ಕನ್ಯಾ ಸಂಕ್ರಮಣದ ದಿನದಂದು ಆಚರಿಸಲಾಗುತ್ತದೆ. ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ದಿನಾಂಕ ಯಾವಾಗಲೂ ಸೆಪ್ಟೆಂಬರ್ 17ಕ್ಕೆ ಬರುತ್ತದೆ. ಭಗವಾನ್ ವಿಶ್ವಕರ್ಮರು ಬ್ರಹ್ಮದೇವರ ಮಾನಸ ಪುತ್ರ. ಅವರನ್ನು ದೇವತೆಗಳ ವಾಸ್ತುಶಿಲ್ಪಿ ಬ್ರಹ್ಮಾಂಡದ ಮೊದಲ ಇಂಜಿನಿಯರ್ ಎಂದು ಕರೆಯಲಾಗುತ್ತದೆ. ಇದು ಕೇವಲ ಪೂಜೆ ಅಲ್ಲ, ಇದು ಶ್ರಮದ ಸನ್ಮಾನ, ಶಿವನ ತ್ರಿಶೂಲ, ವಿಷ್ಣುವಿನ ಸುದರ್ಶನ ಚಕ್ರ, ಇಂದ್ರನ ವಜ್ರಾಯುಧ, ಕುಬೇರನ ಪುಷ್ಪಕ ವಿಮಾನ – ಇವೆಲ್ಲವನ್ನೂ ವಿಶ್ವಕರ್ಮರೇ ಮಾಡಿದರು ಅಂತ ನಂಬಿಕೆ ಇದೆ ಎಂದು ಗಣೇಶ್ ಬಡಿಗೇರ ವಿಶ್ವಕರ್ಮ ಜಯಂತಿ ಮಹತ್ವ ಕುರಿತು ಹೇಳಿದರು.

ಕೊಟ್ಟೂರು ತಾಲೂಕಿನ ಗೊಲ್ಲರಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ವಿಶ್ವಕರ್ಮ ಸಂಘಟನಾತ್ಮಕ ಯುವಕರು ಮತ್ತು ಮಹಿಳಾ ವಿಶ್ವಕರ್ಮ ಬಳಗದವರು ಹಾಗೂ ಶಾಲಾ ವಿದ್ಯಾರ್ಥಿಗಳು ಗ್ರಾಮದ ಪ್ರಮುಖರೊಂದಿಗೆ ವಾದ್ಯಮೇಳಗಳೊಂದಿ ಮೆರವಣಿಗೆ ಮಾಡುವ ಮೂಲಕ ಅದ್ಧೂರಿಯಾಗಿ ವಿಶ್ವಕರ್ಮ ಜಯಂತಿ ಆಚರಿಸಿ ಕಾಳಿಕಾಂಬ ದೇವಸ್ಥಾನ ನಿರ್ಮಾಣಕ್ಕೂ ತೀರ್ಮಾನ ಕೈಗೊಳ್ಳಲಾಯಿತು.

ವಿಶ್ವಕರ್ಮ ಜಯಂತಿ ಸಂದರ್ಭದಲ್ಲಿ ಅಕ್ಷಾಲಿ ಧನುಷ್ ವಿಶ್ವಕರ್ಮ ವೇಷ ಧರಿಸಿದರೆ ಮತ್ತು ಕಮ್ಮಾರ್ ಪವಿತ್ರ ಕುಲದೇವತೆ ಕಾಳಿಕಾಂಬವೇಷ ಧರಿಸಿ ಸಮುದಾಯದ ಜನರ ಗಮನ ಸೇಳದರು. ಮೆರವಣಿಗೆಯಲ್ಲಿ ಷಣ್ಮುಖ ಚಾರಿ ಧೋತ್ರಾಚಾರಿ ಕೃಷ್ಣ ಚಾರಿ ಅಕ್ಷಾಲಿ ಬಸವರಾಜ್ ಬಡಿಗೇರ್ ಕಾಳಾಚಾರಿ ಬಡಿಗೇರ್ ಗಣೇಶ್ ಬಡಿಗೇರಿ ರೇವಣಸಿದ್ದಾಚಾರಿ ಎ ಮೌನಾಚಾರಿ ಶಿವರುದ್ರ ಚಾರಿ ಕೊಟ್ರೇಶ ಚಾರಿ ಕೆ ರುದ್ರಚಾರಿ ಬಿ ಕಾಳಿಂಗ ಚಾರಿ ಬಿ ಮಂಜುನಾಥ ನಾಗರಾಜ್ ಸೊಸೈಟಿ ಕೆ ರುದ್ರಚಾರಿ ಕೊಟ್ರೇಶ್ ಬಿ ವೀರೇಶ್ ಪ್ರಶಾಂತ್ ರವಿ ಬಿ ಮಲ್ಲೇಶಿ ಕೊಟ್ರೇಶಿ ಪ್ರಮುಖರು ಭಾಗವಹಿಸಿದ್ದರು.
ಊರಿನ ಯುವಕರು ಹುಲಮನೆ ಗೋಣೆಪ್ಪ ಮೂಲಿ ಕೊಟ್ರೇಶ್ ಮಾರುತಿ ಪ್ರತಾಪ್ ಗೌಡ ಸುತ್ತಮುತ್ತಲಿನ ವಿಶ್ವಕರ್ಮ ಬಾಂಧವರು ಹಾಗೂ ಇತರರು ಭಾಗವಹಿಸಿದ್ದರು.

ವರದಿ:ಕೆ. ಗೋಣೆಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!