ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೊಡವ ಸಂಸ್ಕೃತಿಯ ಜೀವಂತಿಕೆಗೆ ಕೃಷಿಯೇ ಮೂಲ : ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮಹೇಶ್ ನಾಚಯ್ಯ

ಗೋಣಿಕೊಪ್ಪ : ಕೊಡವರು ಮೂಲತಃ ಕೃಷಿಕರಾಗಿದ್ದು, ಕೃಷಿಯೇ ಜೀವನಧಾರ, ಕೃಷಿಯೇ ಸಂಸ್ಕೃತಿಗೆ ಮೂಲವಾಗಿದ್ದು, ಕೈಲ್-ಪೊವ್, ಕಾವೇರಿ ಚಂಗ್ರಾಂದಿ ಹಾಗೂ ಪುತ್ತರಿ ಹಬ್ಬಗಳು ಕೃಷಿಯಾಧಾರಿತವಾಗಿದೆ. ಕೊಡವರ ಮದುವೆಗಳಲ್ಲಿ ‘ಸಮ್ಮಂದ ಅಡ್ಕುವ’ ಪದ್ಧತಿಗೆ ಬಹಳ ಪ್ರಾಮಖ್ಯತೆ ಹಾಗೂ ಪ್ರಶಸ್ತ್ಯವಿದೆ. ಇದರಲ್ಲಿ ಬರುವ ಪದ ಸಾಲುಗಳೆಲ್ಲವೂ ಕೃಷಿಯನ್ನು ಉಲ್ಲೇಖಿಸುತ್ತದೆ. ‘ಕೊಡದೇಶ’ದ ಆರಂಭವೇ ಕೃಷಿಗೆ ಹೊಂದಿಕೊಂಡಿದ್ದು, ಆ ಯಗದ ಕೊಡವ ಹಿರಿಯರು ಸ್ವತಃ ಕೈಯಾರೆ ಭೂಮಿಯನ್ನು ಉಳುಮೆ ಮಾಡಿ ಕೃಷಿಗೆ ತಕ್ಕಂತೆ ಹದಗೊಳಿಸಿದ್ದು ಉಲ್ಲೇಖವಾಗಿದೆ. ಹೀಗಿರುವಾಗ ಕೊಡವ ಸಂಸ್ಕೃತಿಗೆ ಕೃಷಿಯೇ ಜೀವಂತಿಕೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಗೋಣಿಕೊಪ್ಪ ಶ್ರೀ ಇಗ್ಗುತಪ್ಪ ಕೊಡವ ಅಸೋಸಿಯೇಷನ್‌ನಲ್ಲಿ ಅಕಾಡೆಮಿಯ 21ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಸಂಘದ ವಾರ್ಷಿಕ ಕೈಲ್-ಪೊವ್ ಕ್ರೀಡಾಕೂಟದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಇವರು,
ಕೊಡಗಿನ ಕೃಷಿಭೂಮಿಗಳು ಇತ್ತೀಚಿನ ವರ್ಷಗಳಲ್ಲಿ
ಪರಭಾರೆಯೊಳ್ಳುತ್ತಿರುವುದು ಆತಂಕ ಮೂಡಿಸುತ್ತಿದ್ದು,
ಇಲ್ಲಿನ ನೆಲ-ಜಲ, ಸಾಮಾಜಿಕ ಸ್ಥಿತಿಗತಿ, ಸಾಂಸ್ಕøತಿಕ
ವೈಭವಗಳು ತನ್ನತನವನ್ನು ಕಳೆದುಕೊಳ್ಳುವ
ಭೀತಿಯುಂಟಾಗುತ್ತಿದೆ. ತಾನು ಸ್ವತಃ ಸಂಪಾದಿಸಿದ
ಆಸ್ತಿಯನ್ನು ಮಾತ್ರ ಪರರಿಗೆ ಮಾರಬಹುದಲ್ಲದೆ
ಪಿತೃಾರ್ಜಿತ ಆಸ್ತಿಯನ್ನು ಮಾರುವ ನೈತಿಕತೆ ಇಲ್ಲವೆಂದು
ಪ್ರತಿಪಾದಿಸಿದರು. ಕೊಡವ ಪುಸ್ತಕ ಪತ್ತಾಯವನ್ನು
ಸಂಘ-ಸಂಸ್ಥೆ, ಸಮಾಜಗಳಲ್ಲಿ ಸ್ಥಾಪಿಸುವ
ಉದ್ದೇಶವೆಂದರೆ ಈ ಮಣ್ಣಿನ ಹಿರಿತನ, ಸಾಂಸ್ಕøತಿಕ
ಸಿರಿತನವನ್ನು ಸಾಹಿತ್ಯಗಳ ಮೂಲಕ
ತಿಳಿದುಕೊಳ್ಳುವುದಾಗಿದೆ. ಹೀಗಿರುವಾಗ ಆಯಾಯ
ಜಾಗದಲ್ಲಿ ಸ್ಥಾಪಿಸಿರುವ ಪುಸ್ತಕ ಪತ್ತಾಯದಿಂದ
ಪುಸ್ತಕಗಳನ್ನು ಪಡೆದುಕೊಂಡು ಓದುವುದರ ಮೂಲಕ
ನಾಡಿನ ಸಾಂಸ್ಕøತಿಕ ಪ್ರಜ್ಞೆಯನ್ನು
ಬೆಳೆಸಿಕೊಳ್ಳುವುದಾಗಿದೆ ಎಂದರು.

ಕೊಡವ ಪುಸ್ತಕ ಪತ್ತಾಯವನ್ನು ಶ್ರೀ ಇಗ್ಗುತಪ್ಪ ಕೊಡವ ಸಂಘದ ಅಧ್ಯಕ್ಷರಾದ ಅಜ್ಜಿಕುಟ್ಟಿರ ಸಿ. ದೇವಯ್ಯ ಅವರು ಅನಾವರಣಗೊಳಿಸಿ, ಮಾತನಾಡಿದ ಅವರು, ಪುಸ್ತಕ ಓದುವ ಅಭ್ಯಾಸ ಮರುಕಳಿಸುವಂತಾಗಬೇಕು. ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಇಂತಹ ಸಾಹಿತ್ಯಪರ ಕಾರ್ಯಕ್ರಮಗಳು ನಡೆಯುತ್ತಿರುವುದು ಪುಸ್ತಕ
ಪ್ರೇಮಿಗಳಿಗೆ ಅನುಕೂಲಕರವಾಗಿದೆ ಎಂದರು. ಶ್ರೀ
ಇಗ್ಗುತಪ್ಪ ಕೊಡವ ಸಂಘದಲ್ಲಿ ಸ್ಥಾಪಿಸಿರುವ ಪುಸ್ತಕ
ಪತ್ತಾಯದ ನೋಂದಣಿ ಬಾಪು ರೂ. ಹತ್ತು ಸಾವಿರದ
ಚೆಕ್ಕನ್ನು ಅಕಾಡೆಮಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಅಕಾಡೆಮಿ ವತಿಯಿಂದ ನೋಂದಣಿ ಪತ್ರವನ್ನು
ಸಂಘದ ಅಧ್ಯಕ್ಷರಿಗೆ ನೀಡಲಾಯಿತು. ನಂತರ ಶ್ರೀ
ಇಗ್ಗುತಪ್ಪ ಕೊಡವ ಸಂಘ ಹಾಗೂ ಚೋಡುಮಾಡ
ಕುಟುಂಬಸ್ಥರಿಗೆ ಅಕಾಡೆಮಿ ವತಿಯಿಂದ ದುಡಿ
ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ
ಬಹುತೇಕ ಸದಸ್ಯರು, ಉಪಾಧ್ಯಕ್ಷ ಮೂಕಳಮಾಡ
ಸುಬ್ರಮಣಿ, ಖಜಾಂಚಿ ಅಯ್ಯಂಡ ಪೂವಯ್ಯ,
ನಿರ್ದೇಶಕರುಗಳಾದ ಮಾಳೇಟಿರ ಗಣಪತಿ,
ಚೋಡುಮಾಡ ರಾಜ ಅಯ್ಯಣ್ಣ, ಚೊಟ್ಟೆಯಂಡಮಾಡ
ಅರುಣ್, ಚೋನಿರ ಮಂಜು ಮುತ್ತಣ್ಣ, ಮಲ್ಲಂಡ
ಸುರೇಶ್, ನೆಲ್ಲಮಕ್ಕಡ ಪ್ರೇಮ, ಬೆರಿಯಪಂಡ ಲತ
ಪೂಣಚ್ಚ, ಮೇಕೇರಿರ ಖಾನ, ಕುಪ್ಪಂಡ ಗಣೇಶ ಇದ್ದರು.
ವೇದಿಕೆಯಲ್ಲಿ ಅಕಾಡೆಮಿ ಸದಸ್ಯರಾದ ನಾಯಂದಿರ
ಆರ್.ಶಿವಾಜಿ, ಪೊನ್ನಿರ ಯು.ಗಗನ್ ಉಪಸ್ಥಿತರಿದ್ದರು.

ವರದಿ : ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!