ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ಲೇಯರ್ ಆಗಿದ್ದೆ, ಈಗ ಆಂಪೈರ್-ಜಡ್ಜ್ ಆಗಿದ್ದೇನೆ – ಸಭಾಪತಿ ಸಲೀಂ ಅಹಮದ್

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತ ವೇದಿಕೆ (SDMF) ವತಿಯಿಂದ ನಗರದ ಇಲ್ಯಾಸ್ ನಗರದ ಫಾರೂಕಿಯಾ ಶಾದಿ ಮಹಲ್ ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕೀಸ್ ಬಾನು ಮಾತನಾಡಿ, ವಿಧಾನ ಪರಿಷತ್ ಸಭಾಪತಿ ಸ್ಥಾನ ಅತ್ಯಂತ ಗೌರವದ, ಉನ್ನತ ಸ್ಥಾನ. ಜವಾಬ್ದಾರಿ ನಿಭಾಯಿಸುವಲ್ಲಿ ಸಾಹೇಬರು ಕಟ್ಟುನಿಟ್ಟು. 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಉರ್ದು ಶಿಕ್ಷಕರೇ ಇರಲಿಲ್ಲ. ಕೂಡಲೇ ಸಲೀಂ ಅಹಮದ್ ಅವರ ಗಮನಕ್ಕೆ ತಂದೆ. ಮುಸ್ಲಿಮರಿಗೆ ಆಗುತ್ತಿರುವ ಅನ್ಯಾಯವನ್ನು ತಕ್ಷಣ ನೋಟಿಫಿಕೇಶನ್ ಮಾಡುವಂತೆ ಆದೇಶಿಸುವಂತೆ ಮಾಡಿದರಲ್ಲದೆ ಸಭಾಪತಿ ಸ್ಥಾನವನ್ನು ಜಾತ್ಯಾತೀತವಾಗಿ ನಿಭಾಯಿಸುವ ಚಾಣಕ್ಯತೆ ಹೊಂದಿರುವುದು ಸಂತಸ ತಂದಿದೆ ಎಂದರಲ್ಲದೆ ತಮ್ಮ 35 ವರ್ಷಗಳ ರಾಜಕಾರಣದಲ್ಲಿ ಎಷ್ಟೇ ಪ್ರಭಾವಿತರಾಗಿದ್ದರೂ ಅಧಿಕಾರಿ ವ್ಯವಸ್ಥೆ ಹಾದಿ ತಪ್ಪಿಸಿದಾಗ ವ್ಯವಸ್ಥೆ ಸರಿಪಡಿಸಿ, ಉತ್ತಮ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಅಭಿನಂದಿಸಿದರು.

ಸಭಾಪತಿ ಸಲೀಂ ಅಹಮದ್ ಮಾತನಾಡಿ, ಶೇರ್ ಹೇಳುವ ಮೂಲಕ ಮಾತು ಆರಂಭಿಸಿದರು. ಸಭಾಪತಿ ಆದ ಬಳಿಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಬಹಳ ಮುಖ್ಯ. ಗಾಂಧೀಜಿ ಜೊತೆ ಮೌಲಾನಾ ಆಜಾದ್ ಇದ್ದರು. ಅವಶ್ಯಕತೆ ಇದ್ದರೆ ಮುಸಲ್ಮಾನರು ದೇಶಕ್ಕೆ ಜೀವ ಕೊಡಲು ಹಿಂದೆ ಮುಂದೆ ಯೋಚಿಸದೆ ಎದ್ದು ನಿಲ್ಲುತ್ತಾರೆ. ರಾಜ್ಯದಲ್ಲಿ ಕೋಮು ಸೌಹಾರ್ದತೆಯ ಅವಶ್ಯಕತೆ ಇದೆ. ಸರ್ವಜನಾಂಗದ ಶಾಂತಿಯ ತೋಟ ಇದಾಗಬೇಕು. ನಾನೀಗ ಪಕ್ಷಾತೀತ. ಪಕ್ಷಗಳ ಬಗ್ಗೆ ರಾಜಕಾರಣ ಮಾತನಾಡಲು ಸಾಧ್ಯವಿಲ್ಲ. ನಮ್ಮ ಜವಾಬ್ದಾರಿ ಒಟ್ಟಾಗಿ ಬಾಳುವ, ಬದುಕುವ ವ್ಯವಸ್ಥೆ ಮಾಡುವುದೇ ಆಗಿದೆ ಎಂದರು.

ರಾಜ್ಯದಲ್ಲಿ ಬರ, ರೈತರ ಸಮಸ್ಯೆ ಇದೆ. ಅಲ್ಪಸಂಖ್ಯಾತರು ಬಹಳ ಬೇಡಿಕೆ ಇಟ್ಟಿದ್ದಾರೆ. ಅದನ್ನು ಪಕ್ಷಗಳ ಗಮನಕ್ಕೆ ತರುತ್ತೇನೆ. ನಾನು ಪ್ಲೇಯರ್ ಆಗಿದ್ದೆ, ಈಗ ಆಂಪೈರ್ ಆಗಿದ್ದೇನೆ, ಜಡ್ಜ್ ಆಗಿದ್ದೇನೆ. ವಿಧಾನಸಭೆ, ವಿಧಾನ ಪರಿಷತ್ ಎರಡನ್ನೂ ಗಮನಿಸುತ್ತಿರುತ್ತಾರೆ. ರಾಜ್ಯದ ಏಳು ಕೋಟಿ ಜನರಲ್ಲಿ ಕೇವಲ 300 ಜನಕ್ಕೆ ಮಾತ್ರ ಅಲ್ಲಿ ಅವಕಾಶವಿದೆ. ಆ ಜವಾಬ್ದಾರಿ ಸ್ಥಾನದಲ್ಲಿ ಕೂರಲು ಜನರ ಆಶೀರ್ವಾದವೇ ಕಾರಣ. ಸದನಗಳಲ್ಲಿ ಮುಖ್ಯವಾಗಿ ಜನರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ನಾನು ಪಕ್ಷಗಳ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ. ಜನರು ಲಿಖಿತವಾಗಿ ನೀಡಿರುವ ಬೇಡಿಕೆಗಳನ್ನು ಸಂಬಂಧಪಟ್ಟವರಿಗೆ ತಲುಪಿಸಿ ಸಮಸ್ಯೆ ಬಗೆಹರಿಸುವೆ ಎಂದರು.

ಕಾರ್ಯಕ್ರಮದಲ್ಲಿ ಕಿರಾತ್ ಅನ್ನು ಮೌಲಾನಾ ಹಾಫಿಜ್ ಮುಸಾವಿರ್ ಸಾಬ್ ನೆರವೇರಿಸಿದರು. ಮೊಹಮದ್ ಮುಹೀಬ್ ಉಲ್ಲಾ, ಆಸಿಫ್ ಷರೀಫ್ ಸ್ವಾಗತಿಸಿದರು. ಮೌಲಾನಾ ಹಮೀದ್ ಉಮ್ರಿ ಸಾಬ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಜರತ್ ಸೈಯದ್ ಶಾ ಹೈದರ್ ವಲಿ ಸಜ್ಜಾದ ನಶೀನ್, ಮುಕ್ತಿಯಾರ್ ಅಹಮದ್ ಸಾಬ್, ಸೈಯದ್ ವಾಹಿದ್ ಅದ್ದು, ರಿಯಾಜ್ ಅಹಮದ್, ಮುಷ್ತಿಯಾರ್ ಅಹಮದ್, ಅಫ್ತಾಬ್ ಪರ್ವೇಜ್ ಶಿ ಜು ಪಾಶ ಸೇರಿದಂತೆ ಹಲವರು ಉಪಸ್ಥಿತರಿದ್ದರು. ರಿಯಾಜ್ ಅಹಮದ್ ಸಾಬ್ ವಂದಿಸಿದರು.

ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಮೈಸೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!