
ಕಂಪ್ಲಿ : ಯೋಗ ಅಭ್ಯಾಸ ಹಾಗೂ ಅದರ ಪ್ರಚಾರ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆ, ಬದ್ಧತೆ ಮತ್ತು ಅತ್ಯುತ್ತಮ ಕೊಡುಗೆಯನ್ನು ಪರಿಗಣಿಸಿ ಕಂಪ್ಲಿ ತಾಲೂಕಿನ ಜೀವಮಾನ ಶ್ರೇಷ್ಠ ಪ್ರಶಸ್ತಿ ಪ್ರಶಸ್ತಿ ಕೆ ನಾಗಪ್ಪ, ಯೋಗ ರತ್ನ ಪ್ರಶಸ್ತಿ ಡಿ. ಮೌನೇಶ, ಯೋಗ ಜ್ಯೋತಿ ಪ್ರಶಸ್ತಿ ಕಲ್ಗುಡಿ ರತ್ನಮ್ಮ ರವರಿಗೆ ನೀಡಿ ಗೌರವಿಸಲಾಗಿದೆ. ಹಾಗೆಯೇ
ಪಟ್ಟಣದ ಕಲಾವಿದರ ಕುಟುಂಬದ ಚಿತ್ರಗಾರ್ ರಾಜಾರಾಮ್ ಅವರಿಗೆ ಪ್ರತಿಷ್ಠಿತ ‘ಯೋಗಶ್ರೀ ಪ್ರಶಸ್ತಿ 2026’ ನೀಡಿ ಗೌರವಿಸಲಾಗಿದೆ.
ರೋಟರಿ ಬೆಂಗಳೂರು ಗ್ಲೋಬಲ್ ಯೋಗ ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಸ್ತಿಯನ್ನು ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಟೌನ್ಹಾಲ್ನಲ್ಲಿ ಅಕ್ಟೋಬರ್ 25ರಂದು ಹಮ್ಮಿಕೊಂಡಿದ್ದ ಭವ್ಯ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಮಾನವನ ಸಮಗ್ರ ಆರೋಗ್ಯ, ನೆಮ್ಮದಿಯ ಜೀವನ ಶೈಲಿ ಹಾಗೂ ಯೋಗದ ನೈಜ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತರಿಸುವ ಮೂಲಕ ಅನೇಕರಿಗೆ ಪ್ರೇರಣೆಯಾಗಿರುವ ಚಿತ್ರಗಾರ್ ರಾಜಾರಾಮ್ ಅವರ ಸಾಧನೆಯನ್ನು ಸಂಸ್ಥೆಯು ಮುಕ್ತಕಂಠದಿಂದ ಶ್ಲಾಘಿಸಿ, ಈ ಗೌರವ ಪತ್ರವನ್ನು ಹಸ್ತಾಂತರಿಸಿತು.
ಈ ಸಂದರ್ಭದಲ್ಲಿ ಅಮೆರಿಕದ ಯೋಗ ವಿಶ್ವವಿದ್ಯಾಲಯದ ಡೀನ್ ಹಾಗೂ ಜಿವೈಎಸ್-2025ರ ಉಪಾಧ್ಯಕ್ಷರಾದ ಡಾ. ಎಸ್.ಎಸ್. ಹಿರೇಮಠ್, ಅಜಂತಾ ಇಂಟರ್ನ್ಯಾಷನಲ್ ಕಲ್ಚರಲ್ ಅಕಾಡೆಮಿಯ ಅಧ್ಯಕ್ಷರಾದ ಡಾ. ವಿಶ್ವಬಂಧು ನಾಗೇಶ್, ರೋಟರಿ ಬೆಂಗಳೂರು ಗ್ಲೋಬಲ್ ಯೋಗದ ಪ್ರಸಕ್ತ ಸಾಲಿನ ಅಧ್ಯಕ್ಷರಾದ ಆರ್.ಟಿ.ಎನ್. ಶರತ್ ಕುಮಾರ್ ಸಿ., ಮತ್ತು ಮಿಯಾಮಿ ಯೋಗ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಆರ್.ಟಿ.ಎನ್. ಡಾ. ಯೋಗಿ ದೇವರಾಜ್, ಮಹಾಮಂಡಲೇಶ್ವರ ಶ್ರೀ ಶ್ರೀ ಡಾ. ಪ್ರಭಾಕರಾನಂದ ಸ್ವಾಮೀಜಿ, ಬಸವರಾಜ್ ಪಾಟೀಲ್ ಸೇಡಂ, ಎಚ್ ಎಂ. ರೇವಣ್ಣ ಸೇರಿದಂತೆ ದೇಶ-ವಿದೇಶಗಳ ಪ್ರಮುಖ ಯೋಗ ತಜ್ಞರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಶ್ರೀ ಚಿತ್ರಗಾರ್ ರಾಜಾರಾಮ್ ಅವರಿಗೆ ಈ ಪ್ರಶಸ್ತಿ ಲಭಿಸಿರುವುದಕ್ಕೆ ಕಂಪ್ಲಿ ತಾಲೂಕಿನ ಸಾರ್ವಜನಿಕರು ಹಾಗೂ ಅವರ ಅಭಿಮಾನಿ ಬಳಗ, ಕುಟುಂಬ, ಸಮಾಜ ಬಾಂಧವರು ಸೇರಿದಂತೆ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















