ನೆಲದ ಮಣ್ಣಿನ ರಕ್ಷಣೆಗಾಗಿ
ನಮ್ಮ ಹೊಲದ ಜಲಕ್ಕಾಗಿ
ಬಯಲು ಅಂಗಳದ ಹಸಿರಿಗಾಗಿ
ಶ್ರಮಿಸಿದವರು ನಮ್ಮ ಸ್ವಾಮೀಜಿ ನಾಡಿಗಾಗಿ
ಹಳ್ಳಗಳ ಕೊಳೆಯ ನಿರ್ಮೂಲನಕ್ಕಾಗಿ
ಹಳ್ಳಿಗಳ ಭಕ್ತರ ಕಾಳಜಿಗಾಗಿ
ಹಗಲಿರುಳು ದಣಿವೆನ್ನದೆ ಪರಿವರ್ತನೆಗಾಗಿ
ಶ್ರಮಿಸಿದವರು ನಮ್ಮ ಸ್ವಾಮೀಜಿ ನಾಡಿಗಾಗಿ
ಅಕ್ಷರಗಳ ಬಿತ್ತಿ ಬೆಳಕಾಗುವುದಕ್ಕಾಗಿ
ಮನಸುಗಳನು ಪರಿವರ್ತಿಸಿ ಕಲಿಕೆಗಾಗಿ
ಅನ್ನ ಅಕ್ಷರಗಳ ದಾಸೋಹ ಯೋಗಿಯಾಗಿ
ಶ್ರಮಿಸಿದವರು ನಮ್ಮ ಸ್ವಾಮೀಜಿ ನಾಡಿಗಾಗಿ
ಸೌಹಾರ್ದತೆಯ ಗಂಧ ಪರಿಮಳಿಸುವುದಕ್ಕಾಗಿ
ಪ್ರತಿಭಾವಂತರ ಪ್ರತಿಭೆಯ ಅನಾವರಣಕ್ಕಾಗಿ
ಸಂಸ್ಕೃತಿ ಸಂಸ್ಕಾರದ ಏಳಿಗೆಗಾಗಿ
ಶ್ರಮಿಸಿದವರು ನಮ್ಮ ಸ್ವಾಮೀಜಿ ನಾಡಿಗಾಗಿ
ಕಲ್ಲುಗಳಿಗೆ ಜೀವತುಂಬಿ ಮಾತನಾಡುವುದಕ್ಕಾಗಿ
ಭಕ್ತರ ಕೋಟೆ ಕಟ್ಟಿ ಹೃದಯವಂತಿಕೆಗಾಗಿ
ಭಕ್ತರೇ ಸಂಪತ್ತೆಂದು ಮುಕ್ತಿಗಾಗಿ
ಶ್ರಮಿಸಿದವರು ನಮ್ಮ ಸ್ವಾಮೀಜಿ ನಾಡಿಗಾಗಿ
- ಕಲ್ಲಪ್ಪ ಕವಳಕೇರಿ ಮಂಗಳೂರು✍️
( ಕೊಪ್ಪಳ ಜಿಲ್ಲೆ )



















