
ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮ.
ಕೊರಟಗೆರೆ: ಕನ್ನಡ ಕನ್ನಡ ಕನ್ನಡ ಕರ್ನಾಟಕದ ಕನ್ನಡ ರಾಜ್ಯೋತ್ಸವದ ಸಂಭ್ರಮವು ನಾಡಿನಲ್ಲಡೆ ಮನೆ ಮಾಡಿದ್ದು ಕರ್ನಾಟಕ ರಾಜ್ಯದ ಅಸ್ಮಿತೆಯಾಗಿರುವ ಕನ್ನಡ ಬಾವುಟವು ಕನ್ನಡಿಗರ ಮನದಲ್ಲೂ ನಾಡಲ್ಲು ರಾರಾಜಿಸುತ್ತಿದ್ದು ಇಂದು ನಮ್ಮ ತಾಲೂಕಿನಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಅದ್ದೂರಿ ರಾಜ್ಯೋತ್ಸವ. ಭಾಷೆಯ ಶ್ರೀಮಂತ ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಹಾಗೂ ಕನ್ನಡ ನಾಡಿನ ಏಕೀಕರಣಕ್ಕಾಗಿ ನಡೆದ ಹೋರಾಟದ ಮಹತ್ವವನ್ನು ಪ್ರತಿಯೊಬ್ಬರು ತಿಳಿಯಬೇಕಿದೆ ಎಂದು ತಹಸೀಲ್ದಾರ್ ಶರತ್ಕುಮಾರ್ ತಿಳಿಸಿದರು.
ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ೭೧ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಮ್ಮ ರಾಜ್ಯ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು ನುಡಿಗೆ ಹೆಸರುವಾಸಿಯಾದ ರಾಜ್ಯ. ಸಾಮಾಜ್ಯ ಕಟ್ಟಿದ ಮಹರಾಜರು ಹುಟ್ಟಿದಂತ ನಾಡು ನಮ್ಮದು, ಇಲ್ಲಿ ಕನ್ನಡ ಭಾಷೆಯ ಶ್ರೀಮಂತ ಇತಿಹಾಸ ಹೊಂದಿದ್ದು, ಸಾಹಿತ್ಯ, ಸಂಸ್ಕೃತಿ, ಪರಂಪರೆ ಹಾಗೂ ಕನ್ನಡ ನಾಡಿನ ಏಕೀಕರಣಕ್ಕಾಗಿ ನಡೆದ ಹೋರಾಟದ ಮಹತ್ವವನ್ನು ಅರಿಯಬೇಕಿದ್ದು, ಕನ್ನಡ ಭಾಷೆಯನ್ನು ಕೇವಲ ಸಂವಹನದ ಮಾಧ್ಯಮವಾಗಿ ನೋಡದೆ, ನಮ್ಮ ಬದುಕಿನ ಅಸ್ಮಿತೆಯಾಗಿ ಗೌರವಿಸಬೇಕು. ಮುಂದಿನ ಪೀಳಿಗೆಗೂ ಕನ್ನಡದ ಮಹತ್ವವನ್ನು ತಿಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು. ರಾಜ್ಯೋತ್ಸವದ ಸಂಭ್ರಮವನ್ನು ಕನ್ನಡ ಸೇನಾನಿಗಳು ಟೌನಿನ ಪ್ರತಿ ಕಂಬಗಳಿಗೂ ಕನ್ನಡಾಂಬೆಯ ಬಾವುಟಗಳನ್ನು ಸಾಂಕೇತಿಕವಾಗಿ ಕಟ್ಟಿ ರಾಜ್ಯೋತ್ಸವಕ್ಕೆ ವಿಶೇಷ ಮೆರವು ನೀಡಿದ್ದಾರೆ. ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಕರವೇ ಕಾರ್ಯಕರ್ತರು ಕನ್ನಡದ ಹಳದಿ ಕೆಂಪು ಧ್ವಜ ಹಾಗೂ ಶಾಲುಗಳನ್ನು ಧರಿಸಿ ಜೈ ಭುವನೇಶ್ವರಿ ಕನ್ನಡ ಮಾತೆ ಭುವನೇಶ್ವರಿಗೆ ಜಯವಾಗಲಿ ನಾಡು ನುಡಿ ಕನ್ನಡವಾಗಲಿ ಎಂಬ ಘೋಷಣೆಗಳನ್ನು ಕೂಗುತ್ತಾ ಸರ್ಕಾರಿ ಕಾಲೇಜು ಮೈದಾನದವರೆಗೂ ಸಡಗರದಿಂದ ರಾಜ್ಯೋತ್ಸವಕ್ಕೆ ಸ್ವಾಗತಿಸಿರುವುದು ಅದ್ಭುತ ಎಂದರು.
ಕನ್ನಡ ರಾಜ್ಯೋತ್ಸವದಲ್ಲಿ ಮಕ್ಕಳ ನೃತ್ಯಕ್ಕೆ ಮನಸೋತ ಗಣ್ಯರು
ಜೂನಿಯರ್ ಕಾಲೇಜು ಮೈದಾನದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನವನ್ನು ಏರ್ಪಡಿಲಾಗಿತ್ತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕನ್ನಡದ ನಾಡು-ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಹಾಡುಗಳಿಗೆ ಅಕರ್ಷಕ ನೃತ್ಯ ಪ್ರದರ್ಶಿಸಿ ನೆರೆದಿದ್ದವರ ಗಮನ ಸೆಳೆದರು. ಮಕ್ಕಳ ಪ್ರತಿಭೆಯನ್ನು ಕಂಡು ಅಧಿಕಾರಿಗಳು ಗಣ್ಯ ಹಾಗೂ ಸಾರ್ವಜನಿಕರು ಸಂಭ್ರಮದಿಂದ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ೨೦ ಜನ ಗಣ್ಯರಿಗೆ ಸನ್ಮಾನಿಸಿ ಗೌರವಿಸಿದರು. ಇದರ ಜೊತೆಗೆ ನೃತ್ಯದಲ್ಲಿ ಪ್ರಥಮ ಬಹುಮಾನ ಸರ್ಕಾರಿ ಬಾಲಕಿಯರ ಶಾಲೆಯ ಲಿಖಿತ, ಚೈತ್ರ, ಲಹರಿ ಹಾಗೂ ಗೌತಮಿಗೆ ಪ್ರಥಮ ಸ್ಥಾನ, ದ್ವಿತೀಯ ಬಹುಮಾನ ತೆರೆಸಾ ಶಾಲೆಯ ವಿದ್ಯಾರ್ಥಿಗಳು, ತೃತೀಯ ಸ್ಥಾನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಉಳಿದ ಶಾಲೆಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ಮಕ್ಕಳ ನೃತ್ಯಕ್ಕೆ ಮನಸೋತ ಅಧಿಕಾರಿಗಳು, ಗಣ್ಯರು
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರದರ್ಶನ. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕನ್ನಡದ ನಾಡು-ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಹಾಡುಗಳಿಗೆ ಅತ್ಯಾಕರ್ಷಕ ನೃತ್ಯ ಪ್ರದರ್ಶಿಸಿ ನೆರೆದಿದ್ದವರ ಗಮನ ಸೆಳೆದರು. ಮಕ್ಕಳ ಪ್ರತಿಭೆಯನ್ನು ಕಂಡು ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಂಭ್ರಮದಿಂದ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ತಾಲೂಕು ಆಡಳಿತವು ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ನಗದು ರೂಪದಲ್ಲಿ ವಿತರಿಸಿತು. ಮಕ್ಕಳ ಅದ್ಭುತ ಪ್ರದರ್ಶನಕ್ಕೆ ಮನಸೋತ ಗಣ್ಯರು ಕೂಡ ವೈಯಕ್ತಿಕವಾಗಿ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ನೃತ್ಯದಲ್ಲಿ ಮಿಂಚಿದ ಪುಟ್ಟ ಪ್ರತಿಭೆಗಳು : ಸರ್ಕಾರಿ ಬಾಲಕಿಯರ ಶಾಲೆಗೆ ಪ್ರಥಮ ಬಹುಮಾನ!
ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅತ್ಯುತ್ತಮ ನೃತ್ಯ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದ ಪಟ್ಟಣದ ಸರ್ಕಾರಿ ಬಾಲಕಿಯರ ಶಾಲೆಯ ವಿದ್ಯಾರ್ಥಿನಿಯರಾದ ಲಿಖಿತ, ಚೈತ್ರ, ಲಹರಿ ಹಾಗೂ ಗೌತಮಿ ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡರು.
ಪ್ರಥಮ ಬಹುಮಾನ ಸರ್ಕಾರಿ ಬಾಲಕಿಯರ ಶಾಲೆ, ಕೊರಟಗೆರೆ: ಲಿಖಿತ, ಚೈತ್ರ, ಲಹರಿ ಹಾಗೂ ಗೌತಮಿ.
ದ್ವಿತೀಯ ಬಹುಮಾನ ತೆರೆಸ ಶಾಲೆಯ ವಿದ್ಯಾರ್ಥಿಗಳು: ಆಕರ್ಷಕ ನೃತ್ಯ ಪ್ರದರ್ಶನದ ಮೂಲಕ ದ್ವಿತೀಯ ಸ್ಥಾನ ಪಡೆದರು.
ತೃತೀಯ ಬಹುಮಾನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ತೃತೀಯ ಬಹುಮಾನ ಗಳಿಸಿದರು.
ಸಮಾಧಾನಕರ ಬಹುಮಾನ: ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಳಿದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಯಿತು.
ವಿಶೇಷ ಆಕರ್ಷಣೆ
ತಾಲೂಕಿನ ಗೊಲ್ಲ ಸಮುದಾಯದ ಹಿರಿಯರ ಕೋಲಾಟ ನೃತ್ಯ ಎಲ್ಲರ ಮನಸೂರೆಗೊಂಡಿತ್ತು. ಹಿರಿಯರು ಲಯಬದ್ದ ಕೋಲಾಟ ಪ್ರೇಕ್ಷರರ ಮನಸೋತರೂ ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯ ಯಮುನಾ ಹಾಗೂ ಕಸಾಪ ಅಧ್ಯಕ್ಷ ಈರಣ್ಣ ಈ ಕೋಲಾಟಕ್ಕೆ ಹೆಜ್ಜೆ ಹಾಕಿ ಎಲ್ಲರನ್ನು ಸಂಭ್ರಮಿಸುವoತೆ ಮಾಡಿದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ : ಕನ್ನಡಾಭಿಮಾನ ಮೆರೆದ ಆಟೋ ಚಾಲಕರು !
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಮಾಜ ಸೇವೆ Dr. ನರಸಿಂಹಮೂರ್ತಿ ವಿಕೆ, ಗಂಗರಾಜು ಕೇಬಲ, ಶ್ರೀನಿವಾಸ (ಕರವೇ), ವೀರಭದ್ರಯ್ಯ, ವರದರಾಜು, ಕೃಷ್ಣ ನಾಯ್ಕ, ಸಾಧಕರನ್ನು ಗುರುತಿಸಿ ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮತ್ತೊಂದೆಡೆ, ಪಟ್ಟಣದ ಆಟೋ ಚಾಲಕರು ತಮ್ಮ ವಾಹನಗಳಿಗೆ ಕೆಂಪು-ಹಳದಿ ಕನ್ನಡ ಬಾವುಟಗಳನ್ನು ಕಟ್ಟಿ ರಾಜ್ಯೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು.
ಕನ್ನಡದ ಧ್ವಜಾರೋಹಣ, ಕನ್ನಡದ ಜ್ಯೋತಿ ಬೆಳಗಿಸುವ ಕಾರ್ಯಕ್ರಮ, ಸಾಂಸ್ಕೃತಿಕ ವೈಭವ, ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಹಾಗೂ ಸಾಧಕರಿಗೆ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂತು.
ಒಟ್ಟಾರೆ, ಈ ಬಾರಿಯ ರಾಜ್ಯೋತ್ಸವದಲ್ಲಿ ಕೇವಲ ಆಚರಣೆಗೆ ಸೀಮಿತವಾಗದೆ, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ತಾಲೂಕು ಆಡಳಿತ ವಿಶೇಷ ಗಮನ ಸೆಳೆಯಿತು. ಕನ್ನಡದ ಮೇಲಿನ ಅಭಿಮಾನ ಮುಂದಿನ ಪೀಳಿಗೆಯಲ್ಲೂ ಬೆಳೆಯಬೇಕು ಎಂಬ ಸಂದೇಶದೊoದಿಗೆ ಕೊರಟಗೆರೆಯಲ್ಲಿ ೭೧ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಿoದ ನೆರವೇರಿತು.
ಕಾರ್ಯಕ್ರಮದಲ್ಲಿ ತಾ. ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಪೂರ್ವ ಅನಂತರಾಮು, ಎಡಿಎ ಗುರುಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಉಮೇಶ್ ಕೆ ಎಸ್, ಸಿಪಿಐ ಪುರುಷೋತ್ತಮ್, ಪಿಎಸ್ ಐ ತೀರ್ಥೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯಮುನಾ, ಬಿಇಒ ಫೈರೋಜ್ ಬೇಗಂ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ನಿವೃತ್ತ ಸೈನಿಕ ಕೃಷ್ಣ ನಾಯಕ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಅಧ್ಯಕ್ಷ ಓಬಳರಾಜು, ಕಸಾಪ ಅಧ್ಯಕ್ಷ ಈರಣ್ಣ ಮುಖಂಡರಾದ ದಾಡಿ ವೆಂಕಟೇಶ್, ಪುಟ್ಟಣ್ಣ, ಗಂಗರಾಜು ಸೇರಿದಂತೆ ಇತರರು ಇದ್ದರು.
ವರದಿ .ಪ್ರಸನ್ನ ಕುಮಾರ್ ಎಸ್ ಕೊರಟಗೆರೆ.


















