ಕಂಪ್ಲಿ : ಎಮ್ಮಿಗನೂರು ವಲಯದ ಸ್ವಾವಲಂಬಿ ಹಾಗೂ ಗೌರವದ ಬದುಕನ್ನು ಕಟ್ಟಿಕೊಳ್ಳಲು ಮಹಿಳೆಯರಿಗೆ ಹೊಲಿಗೆ ತರಬೇತಿಯು ಅತ್ಯಂತ ಸಹಕಾರಿಯಾಗಿದೆ ಎಂದು ಅಕ್ಕನ ಬಳಗದ ಪುಷ್ಪ ಅವರು ತಿಳಿಸಿದರು.
ವಲಯದ ಕೊಟ್ಟಲ್ ಕಾರ್ಯಕ್ಷೇತ್ರದ ಸೀತಾರಾಮ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ಹೊಲಿಗೆ ತರಬೇತಿ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಂತರ ಮಾತನಾಡಿದ ತಾಲೂಕು ಯೋಜನಾಧಿಕಾರಿ ಎಲ್. ರಾಘವೇಂದ್ರ ಅವರು, “ಹೊಲಿಗೆ ತರಬೇತಿಯು ಮಹಿಳೆಯರು ಮನೆಯಲ್ಲೇ ಸಣ್ಣಪುಟ್ಟ ಸ್ವ-ಉದ್ಯೋಗ ಆರಂಭಿಸಲು ಪೂರಕವಾದ ಮಾರ್ಗವಾಗಿದೆ. ಇದು ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢರನ್ನಾಗಿ ಮಾಡಲು ಹಾಗೂ ಅವರ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಜ್ಞಾನವಿಕಾಸ ಸಮನ್ವಯ ಅಧಿಕಾರಿ ಮಂಜುಳಾ, ವಲಯ ಮೇಲ್ವಿಚಾರಕ ಹನುಮಂತ ಪ್ರಮುಖರಾದ ಶಿವಗಂಗಮ್ಮ, ಸುಜಾತ, ಹೊಲಿಗೆ ತರಬೇತಿ ಶಿಕ್ಷಕಿ, ಕೇಂದ್ರದ ಅಧ್ಯಕ್ಷೆ ಜ್ಯೋತಿ ಹಾಗೂ ಸ್ಥಳೀಯ ಸೇವಾ ಪ್ರತಿನಿಧಿಗಳು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್


















