ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕನ್ನಡದಲ್ಲಿ ಸಮೃದ್ಧ ಹಾಸ್ಯ ಸಾಹಿತ್ಯಗಳು ಇವೆ- ಪ್ರೊ. ಭುವನೇಶ್ವರಿ ಹೆಗಡೆ

ಮಂಗಳೂರು : ನಗರದ ಮೆಸ್ಕಾಂ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜರುಗಿದ ಆಪ್ತವಾದ ಸಾಹಿತ್ಯಕೂಟದಲ್ಲಿ ಖ್ಯಾತ ವಾಗ್ಮಿ, ಲೇಖಕಿ ಪ್ರೊಫೆಸರ್ ಭುವನೇಶ್ವರಿ ಹೆಗಡೆಯವರು ಕನ್ನಡ ಸಾಹಿತ್ಯ ಲೋಕದಲ್ಲಿ ಹಾಸ್ಯ ಸಾಹಿತ್ಯದ ಸ್ಥಾನ ಹಾಗೂ ಹಿನ್ನೆಲೆ ಏನು ಎಂಬುದನ್ನು ಎಂದಿನ ತಮ್ಮ ಹಾಸ್ಯಭರಿತ ಉಪನ್ಯಾಸದಲ್ಲಿ ತಿಳಿಸಿಕೊಟ್ಟರು.

ಮುಂದುವರಿದ ಅವರು ಹಾಸ್ಯ ಸಾಹಿತ್ಯವನ್ನು ಏಕೆ ಆರಿಸಿಕೊಂಡರು,ಅವರು ಅರ್ಥಶಾಸ್ತ್ರ ಪ್ರೊಫೆಸರ್ ಆದರೂ ಹಾಸ್ಯ ಯಾಕೆ ಆರಿಸಿಕೊಂಡರು ಎಂಬುದನ್ನು ತಿಳಿಸಿದರು. ಕನ್ನಡ ಸಮೃದ್ಧ ಹಾಸ್ಯಗಳಿಂದ ತುಂಬಿದೆ, ಅವು ಹೇಗೆ, ಎಲ್ಲಿ ವ್ಯಕ್ತವಾಗಿದೆ ಎಂಬುದನ್ನು ಸುಮಾರು ಒಂದು ಗಂಟೆಗಳ ಕಾಲ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ವಿವರಿಸಿದರು.

ಬದಲಾಗುತ್ತಿರುವ ಕಾಲಘಟ್ಟದಲ್ಲಿ ವಿವಿಧ ಮಾಧ್ಯಮಗಳ ಹಾಸ್ಯದ ಪರಿಕಲ್ಪನೆ ವಿವರಿಸಿ, ಯುವ ಬರಹಗಾರರಿಗೆ ಹಿತನುಡಿಗಳನ್ನು ಹೇಳಿದರು. ಕನ್ನಡ ಹಬ್ಬದ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು. ಮುಖ್ಯ ಆರ್ಥಿಕ ಅಧಿಕಾರಿ ಮುರಳೀಧರ ನಾಯಕ ಗೌರವ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕವಿಮಂ ಲೆಕ್ಕಾಧಿಕಾರಿಗಳ ಸಂಘದ ಉಮೇಶ್ ಎ, ನವೀನ ಕುಮಾರ್, ವಲ್ಸ ಪಿ ಟಿ, ವಸಂತ ಶೆಟ್ಟಿ, ರಘುರಾಮ ಶೆಟ್ಟಿ, ಪರಮೇಶ್ವರ ಹೆಗಡೆ, ಸತೀಶ ,ಪಿಯುಶ ಡಿಸೋಜ, ನೆಲ್ಸನ್ ಡಿಸೋಜ ಹಾಗೂ ದೀಪಕ್, ಆಕಾಶ್, ಸಂದೀಪ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ವರದಿ: ಕೊಡಕ್ಕಲ್ ಶಿವಪ್ರಸಾದ್ ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!