ಕಂಪ್ಲಿ: ‘ವೃತ್ತಿಯಲ್ಲಿ ವಕೀಲರಾಗಿದ್ದರೂ ಪ್ರವೃತ್ತಿಯಲ್ಲಿ ಕವಿ ಹಾಗೂ ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದ ಜಿ. ಪ್ರಕಾಶ್ ಅವರ ಕ್ರಿಯಾಶೀಲತೆ ಯುವಪೀಳಿಗೆಗೆ ಸ್ಫೂರ್ತಿ’ ಎಂದು ಶ್ರೀ ಜಡೆ ಸಿದ್ದೇಶ್ವರ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಎಸ್. ರಾಮಪ್ಪ ಸ್ಮರಿಸಿದರು.
ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಟ್ರಸ್ಟ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಕಂಪ್ಲಿ ಕೋಟೆಯ ಕವಿ ಜಿ. ಪ್ರಕಾಶ್ ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.
‘ಹಿರಿಯರಾಗಿದ್ದರೂ ಯುವಕರಂತೆ ಎಲ್ಲರೊಡನೆ ಬೆರೆಯುವ ಸ್ನೇಹಜೀವಿಯಾಗಿದ್ದರು. ಹಲವು ಸಂಘಟನೆಗಳ ಅಧ್ಯಕ್ಷರಾಗಿ, ಸಾಹಿತ್ಯ ಪ್ರೇಮಿಯಾಗಿ ಹಲವಾರು ಕವನ ಸಂಕಲನಗಳನ್ನು ರಚಿಸಿದ ಮೇರು ವ್ಯಕ್ತಿತ್ವ ಅವರದ್ದಾಗಿತ್ತು’ ಎಂದರು.
ಟ್ರಸ್ಟ್ ಪದಾಧಿಕಾರಿಗಳು, ವಿದ್ಯಾರ್ಥಿಗಳಾದ ಗೌತಮಿ, ಸ್ವಾತಿ, ರಾಜೇಶ್ವರಿ, ವನಿತಾ, ಪ್ರವೀಣ್, ಮಾನ್ಯ, ಸಾಜಿದಾ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















