ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಭಿವೃದ್ಧಿ ಕಾರ್ಯ ನೋಡಿ ಮತ ನೀಡಿ- ಯಶವಂತರಾಯಗೌಡ ಪಾಟೀಲ್

ಇಂಡಿ:೨೦೧೩ ರಿಂದ ೨೦೨೩ ರ ವರೆಗೆ ಇಂಡಿ ಮತಕ್ಷೇತ್ರದಲ್ಲಿ ೩೫೦೦ ಕೋಟಿ ರೂ ಅನುದಾನ ತಂದು ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದು ನನ್ನ ಅಭಿವೃದ್ದಿ ಕಾರ್ಯ ನೋಡಿ ಮತ ನೀಡಿ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಹೇಳಿದರು.

ಅವರು ಪಟ್ಟಣದ ಬೀರಪ್ಪ ನಗರದ ಲಾಯನ್ಸ ಪ್ರೌಢಶಾಲೆಯ ಆವರಣದಲ್ಲಿ ನಡೆದ ಬೃಹತ್ ಜನಸ್ತೋಮ ಉದ್ದೇಶಿಸಿ ಮಾತನಾಡುತ್ತಿದ್ದರು.
ಕಳೆದ ಹತ್ತು ವರ್ಷಗಳಲ್ಲಿ ಭೀಮಾಶಂಕರ ಕಾರ್ಖಾನೆ, ಇಂಡಿ ಪಟ್ಟಣಕ್ಕೆ ೨೪x೭ ಕುಡಿಯುವ ನೀರು, ತಾಲೂಕಿಗೆ ಆರು ವಿದ್ಯುತ್ ವಿತರಣಾ ಕೇಂದ್ರಗಳು,ಇಂಡಿಯಲ್ಲಿ ನಿಂಬೆ ಅಭಿವೃದ್ದಿ ಮಂಢಳಿ ರಾಜ್ಯ ಕಚೇರಿ, ಇಂಡಿಯ ನಿಂಬೆಗೆ ಜಿಐ ಟ್ಯಾಗ, ಇಂಡಿ ಮತ್ತು ಝಳಕಿಯಲ್ಲಿ ಶೈಕ್ಷಣ ಕ ಕೇಂದ್ರಗಳು ಸೇರಿದಂತೆ ಅನೇಕ ಅಬಿವೃದ್ದಿ ಕಾರ್ಯಗಳನ್ನು ಮಾಡಿ ನಾನು ಮಾಡಿದ ಕೆಲಸಕ್ಕೆ ಕೂಲಿಯ ರೂಪದಲ್ಲಿ ಮತ ನೀಡಬೇಕೆಂದರು.

ಇಂದು ನಾನು ಸಲ್ಲಿಸುತ್ತಿರುವದು ಏಳನೆಯ ನಾಮಪತ್ರ. ಈಗಾಗಲೇ ಮೂರು ಜಿ.ಪಂ ಗೆ ಮತ್ತು ಮೂರು ವಿಧಾನಸಭೆಗೆ ನಾಮ ಪತ್ರ ಸಲ್ಲಿಸಿದ್ದು ಈ ಬಾರಿ ವಿಧಾನಸಭೆಯ ಮೂರನೆಯ ಮಹಡಿಯಲ್ಲಿ ಕಾಂಗ್ರೆಸ್ ಬಾವುಟ್ ಹಾರಿಸಬೇಕಾಗಿದೆ. ಮತ್ತು ಮತ ಕ್ಷೇತ್ರದ ನೀರಾವರಿಗೆ ಆಧ್ಯತೆ ನೀಡಿ ಪೂರ್ಣ ಗೊಳಿಸುವ ಜೊತೆಗೆ ಇಂಡಿಯನ್ನು ಜಿಲ್ಲೆ ಮಾಡುವ ಕನಸು ಮತ್ತು ಗುರಿ ಇದೆ ಎಂದರು.
ಸಿ.ಎಂ ಹುದ್ದೆಗಾಗಿ ಕಮಲ ಪಾಳೆಯದಲ್ಲಿ ಆರಂಭವಾದ ಒಳ ರಾಜಕೀಯ ಬಿಜೆಪಿಯಿಂದ ಚುನಾವಣೆಗೂ ಮುನ್ನವೇ ಸೈಡಲೈನಿಗೆ ಸರಿಸುವ ಕಾರ್ಯ ನಡೆದಿದೆ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಜೆಪಿ ಈಶ್ವರಪ್ಪ, ಲಕ್ಷ್ಮಣ್ ಸವದಿ, ಜಗದೀಶ ಶೆಟ್ಟರ ಅವರಂತ ವಿಧಾನಸಭಾ ಪಟುಗಳ ಹೆಸರುಗಳನ್ನು ಬಿಟ್ಟಿರುವದು ರಾಜಕಾರಣದ ಒಳ ಸುಳಿಗಳು ಹೇಗಲ್ಲ ಇರುತ್ತದೆ . ಅನ್ನಿಸಿ ದಿಗ್ಬ್ರಮೆ ಯಾಗುತ್ತದೆ ಎಂದರು.
ಪಕ್ಷದ ಎಸ್.ಎಂ.ಪಾಟೀಲ ಗಣ ಯಾರ, ಗುರನಗೌಡ ಪಾಟೀಲ,ಜಿ.ಪಂ ಮಾಜಿ ಉಪಾಧ್ಯಕ್ಷ ಬಾಬು ಸಾವಕಾರ ಮೇತ್ರಿ,ಮಲ್ಲಿಕಾರ್ಜುನ ಲೋಣ ,ಎಂ.ಆರ್.ಪಾಟೀಲ, ತಮ್ಮಣ್ಣ ಪೂಜಾರಿ, ಇಲಿಯಾಸ ಬೋರಾಮಣ , ಜಾವೇದ ಮೊಮಿನ ಮಾತನಾಡಿದರು.
ವೇದಿಕೆಯ ಮೇಲೆ ಸೋಲಾಪುರದ ಕಾಂಗ್ರೆಸ್‌ಪಕ್ಷದ ಜಿಲ್ಲಾ ಅಧ್ಯಕ್ಷ ಡಾ|| ದವಳಸಿಂಗ್ ಮೊಹಿತೆ ಪಾಟೀಲ, ಮಾಜಿ ಅಧ್ಯಕ್ಷ ರಾಜಶೇಖರ ಶಿವಧಾರೆ,ಮಾಜಿ ಅಧ್ಯಕ್ಷ ಬಾಳಾಸಾಹೇಬ ಸೆಳಕೆ,ಭೀಮರಾವ ಬಾಳಗೆ,ಸುಧೀರ ಲಾಂಡೆ,ಅಣ್ಣಾ ಇನಾಮದಾರ, ಸತ್ತಾರ ಬಾಗವಾನ,ಬಿ.ಎಂ.ಕೋರಿ,ರಶೀದ ಅರಬ,ಶ್ರೀಕಾಂತ ಕೂಡಿಗನೂರ,ಪ್ರಶಾಂತ ಕಾಳೆ,ನೀಲಕಂಠಗೌಡ ಪಾಟೀಲ, ಅರವಿಂದ ಕುಲಕರ್ಣಿ ಅಣ್ಣಪ್ಪ ಬಿದರಕೋಟಿ, ಶಿವಕುಮಾರ ಬಿಸನಾಳ,ಅವಿನಾಶ ಬಗಲಿ ಮತ್ತಿತರಿದ್ದರು.
ಇದಕ್ಕೂ ಮುನ್ನ ಭೀರಪ್ಪ ದೇವರಿಗೆ ಪೂಜೆ ಸಲ್ಲಿಸಿದರು.ಮೆರವಣೆಗೆಯಲ್ಲಿ ಪಕ್ಷದ ಮಂಡಲ ಅಧ್ಯಕ್ಷರು,ಮಂಡಲ ಸಮಿತಿ ಎಲ್ಲ ಪದಾಧಿಕಾರಿಗಳು,ವಿವಿಧ ಮೋರ್ಚಾ ಅಧ್ಯಕ್ಷರುಗಳು,ಪ್ರಧಾನ ಕಾರ್ಯದರ್ಶಿಗಳು, ಜಿ.ಪಂ, ತಾ.ಪಂ ಮಾಜಿ ಅಧ್ಯಕ್ಷರು,ಸದಸ್ಯರು,ಗ್ರಾ.ಪಂ ಸದಸ್ಯರು ಸೇರಿದಂತೆ ಬೃಹತ್ ಪ್ರಮಾಣದಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕoದಾಯ ಉಪವಿಬಾಗಾಧಿಕಾರಿಗಳು ಮತ್ತು ಚುನಾವಣೆ ಅಧಿಕಾರಿ ರಾಮಚಂದ್ರ ಗಡದೆ ಇವರಿಗೆ ಬಿ ಫಾರಮ ಜೊತೆಗೆ ನಾಮಪತ್ರ ಸಲ್ಲಿಸಿದರು..
ವರದಿ. ಅರವಿಂದ್ ಕಾಂಬಳೆ ಇಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ