ಯಾದಗಿರಿ: ಶಹಾಪುರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕರಾದ ಗುರು ಪಾಟೀಲ್ ಶಿರವಾಳ ಅವರ ಅಪ್ಪಟ ಅಭಿಮಾನಿ ಚುನಾವಣೆಯಲ್ಲಿ ಜಯಶಾಲಿ ಆಗಲೆಂದು,ಗೊಡ್ರಳ ಗ್ರಾಮದಿಂದ ಅಂಬರೀಷ್ ತಂದೆ ಮಡಿವಾಳಪ್ಪ ಮತ್ತು ಅವನ ಸ್ನೇಹಿತರೊಂದಿಗೆ ಮಾಜಿ ಶಾಸಕರ ಮೇಲೆ ಇರುವ ಪ್ರೀತಿ ಹಾಗೂ ನಂಬಿಕೆಯಿಂದ 2023 ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಆರಿಸಿ (ಜಯಶಾಲಿ) ಆಗಿ ಬರಬೇಕೆಂದು ಗೋಡ್ರಾಳ ಗ್ರಾಮದಿಂದ ಇಬ್ರಾಹಿಂಪುರ ದರ್ಗಾದ ಕೆರೆವರೆಗೆ ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಇಂದು ವನದುರ್ಗ ಗ್ರಾಮದ ಮೂಲಕ ಹೊರಟಿರುವುದರಿಂದ ವನದುರ್ಗ ಗ್ರಾಮದೊಳಗೆ ಜೆಡಿಎಸ್ ಮುಖಂಡರು ಬರಮಾಡಿಕೊಂಡರು.ಈ ಸಂದರ್ಭದಲ್ಲಿ ರಾಜಾ ಶ್ರೀ ರಾಮ ನಾಯಕ್,ಶಿವರಾಜ್ ಕಾಶಿರಾಜ,ಶ್ರೀನಿವಾಸ್ ನಾಯಕ್, ಪ್ರವೀಣ್ ಕುಮಾರ್ ,ವೆಂಕಟೇಶ ,ಮತ್ತು ಅನೇಕ ಜೆಡಿಎಸ್ ನ ಯುವಕರು ಸೇರಿ ಅಂಬರೀಶ್ ಅವರಿಗೆ ಸನ್ಮಾನಿಸಿ ಮುಂದೆ ಹೋಗಲು ಹಾರೈಸಿದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ



















