ಯಾದಗಿರಿ: ಶಹಾಪುರ ಪೋಲಿಸ್ ಇನ್ಸ್ಪೆಕ್ಟರ್ ಚೆನ್ನಯ್ಯ ಹೀರೆಮಠ ಅಕ್ರಂ ಮರಳು ಸಾಗಾಣಿಕೆ ಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಶಹಾಪುರ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದರು ಠಾಣೆಯ ಅಧಿಕಾರಿಗೆ ವಿಚಾರಣೆ ನಿರ್ದೇಶನ ನೀಡಿದರು ಸಹ ಎಫ್ಐಆರ್ ದಾಖಲಿಸಿದೆ ವಿಳಂಬ ನೀತಿ ಅನುಸರಿಸಿ ಲಂಚದ ಬೇಡಿಕೆ ಇಡುತ್ತಾರೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕಯ ಸಂಚಾಲಕ ಚಂದ್ರಶೇಖರ ಗುತ್ತಿಗೆದಾರ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರ ದಾಖಲಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಪೋಲಿಸ್ ಠಾಣೆಯ ಸಿಸಿಟಿವಿ ಬಂದ್ ಮಾಡಿರುತ್ತಾರೆ.
ಕ್ರಿಕೆಟ್ ಬೆಟ್ಟಿಂಗ್ ಹಾವಳಿ ನಡೆಯುತ್ತಿದ್ದರೂ ಶಹಾಪುರ ಪೋಲಿಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಚೆನ್ನಯ್ಯ ಹೀರೆಮಠ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚಂದ್ರಶೇಖರ ಗುತ್ತಿಗೆದಾರ್ ನೇರವಾಗಿ ಆರೋಪ ಮಾಡಿದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ