ಭದ್ರಾವತಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಲಪ್ಪ ವೃತ್ತದಲ್ಲಿ ದಾಸಶ್ರೇಷ್ಠ ಕನಕದಾಸರ 535ನೇ ಜಯಂತೋತ್ಸವವನ್ನು ಸರಳವಾಗಿ ಆಚರಿಸಲಾಯಿತು.
ಕನಕದಾಸರ ಕೀರ್ತನೆಗಳನ್ನು ಮಕ್ಕಳಿಗೆ ಹೇಳಿಕೊಟ್ಟು ಅದರ ಅರ್ಥವನ್ನು ತಿಳಿಸಲಾಯಿತು. ನಾವು ಸಮಾಜವನ್ನು ಬದಲಿಸುವಂತಹ ನಿಟ್ಟಿನಲ್ಲಿ ಯೋಚಿಸೋಣ ಪ್ರಯತ್ನಿಸೋಣ ಎಂಬ ಅನೇಕ ವಿಚಾರಗಳನ್ನು ಹಂಚಿಕೊಳ್ಳಲಾಯಿತು. ಸಮಾರಂಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಗೂ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
ವರದಿ : ಕೆ ಆರ್ ಶಂಕರ್ ಭದ್ರಾವತಿ




















