ಸಂಬಾಳಿಸಲರಿತರೆ ಬರೀ ಪ್ರೀತಿ ಪ್ರೇಮವೆಲ್ಲವು
ಪ್ರೀತಿ ಪ್ರೇಮ ಮೃದು ಮಧುರ ಭಾವನೆಗಳೆಲ್ಲವು
ಭಾವನೆಗಳು ಸರಿಯಿರಲದುವೆ ವಿಶ್ವಾಸವೆಲ್ಲವು
ವಿಶ್ವಾಸವದು ದೂರವಾಗೆ ಮನಕೆ ನಿಶ್ವಾಸವು
ನಿಶ್ವಾಸವಾಗೆ ಮಧುರಾತಿ ಭಾವಗಳು ನಾಶವು
ನಾಶವಾದ ಭಾವದಲಿ ಆರೋಗ್ಯವೇ ಭಾರವು.
ಭಾರದ ಮನಗಳಲಿ ಸ್ನೇಹ ಪ್ರೀತಿ ಮಾಯವು
ಮಾಯವಾದ ಸ್ನೇಹ ಪ್ರೀತಿ ಕ್ರೋಧ ಕಾರಕವು
ಕ್ರೋಧ ಕಾವ ಹೊತ್ತ ತನುವು ತೇರು ಕ್ಷೀಣವು.
ಕ್ಷೀಣ ಮನ ಕಾಂತಿ ಮಾಯವಾಗಿ ಬುದ್ದಿ ನಾಶವು
ಬುದ್ದಿ ನಾಶವಾಗಿರೆ ವ್ಯಕ್ತಿತ್ವವದು ಸರ್ವ ನಾಶವು
ವ್ಯಕ್ತಿತ್ವವು ನಾಶವಾಗೆ ಮನುಜಾ ನಿನ್ನ ಮರಣವೆ.
ಅದಕೆ ಮನುಜನ ಸಹಜ ಗುಣಕೆ ಬೆಲೆಯಿಲ್ಲವು
ಸಂಬಾಳಿಕೆಯಿಲ್ಲದಿರೆ ಸ್ನೇಹ ಸಂಬಂಧಗಳಿಲ್ಲವು
ಎಲ್ಲಿ ಹೇಗೇ ನೋಡಿದರೂ ಸಂಬಾಳಿಕೆಯೆಲ್ಲವು.
ವೆಂಕಣ್ಣ
(ವೈ.ಪಿ.ವೆಂಕಟಪತಿ)
ಕೃಷ್ಣಾಪುರ




















