ಭದ್ರಾವತಿ: ನಗರಸಭೆ 2023-24ನೇ ಸಾಲಿನ ಆಸ್ತಿ ತೆರಿಗೆ ಏ.30ರೊಳಗೆ ಪಾವತಿಸಿದ್ದಲ್ಲಿ ಶೇ.5ರಷ್ಟು ರಿಯಾಯಿತಿ ನೀಡಲಾಗುವುದು. ತೆರಿಗೆ ಪಾವತಿಗಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರಸಭೆ ಕಛೇರಿ ಆವರಣದಲ್ಲಿ ಎರಡು ಹೆಚ್ಚಿನ ಕೌಂಟರ್ಗಳನ್ನು ತೆರೆಯಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ.
ಏ.30ರವರೆಗೆ ಮಾತ್ರ ಶೇ.೫ರಷ್ಟು ರಿಯಾಯಿತಿ ಇದ್ದು, ಉಳಿದಂತೆ ಮೇ.1 ರಿಂದ ಜೂ.30ರವರೆಗೆ ಯಾವುದೇ ರಿಯಾಯಿತಿ ಅಥವಾ ದಂಡ ಇರುವುದಿಲ್ಲ. ಜು.1ರ ನಂತರ ಪಾವತಿಸಿದ್ದಲ್ಲಿ ಶೇ.2ರಷ್ಟು ದಂಡ ವಿಧಿಸಲಾಗುವುದು.
ಬಾಕಿ ಇರುವ ಆಸ್ತಿ ತೆರಿಗೆ, ನೀರಿನ ತೆರಿಗೆ, ವಾಣಿಜ್ಯ ಮಳಿಗೆ ಬಾಡಿಗೆ ಮತ್ತು ಉದ್ದಿಮೆ ಪರವಾನಿಗೆಯನ್ನು ಏ.30ರೊಳಗೆ ಪಾವತಿಸುವ ಮೂಲಕ ಸಹಕರಿಸುವಂತೆ ಕೋರಲಾಗಿದೆ.ಪೋನ್ ಪೇ, ಪೇ ಟಿಎಂ, ಗೂಗಲ್ ಪೇ ಮೂಲಕ ಸಹ ತೆರಿಗೆ ಪಾವತಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.




















