ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀರಾಮುಲು ಸಮತೆಯ ಹಣತೆ ಹಚ್ಚಿದ ಸ್ವಾಭಿಮಾನಿ -ಶರಣು ನಾಯಕ

ರಾಯಚೂರು:ಬಿ.ಶ್ರೀರಾಮುಲು ಯುವ ಪಡೆ (ರಿ.) ಮಸ್ಕಿ ವತಿಯಿಂದ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಮಾಜಿ ಸಚಿವರಾದ ಬಿ.ಶ್ರೀರಾಮುಲು ಅವರ 52ನೇ ವರ್ಷದ ಹುಟ್ಟುಹಬ್ಬ ಸಮಾರಂಭ ಕಾರ್ಯಕ್ರಮವನ್ನು ಆಶ್ರಮದಲ್ಲಿ ಮಹಾಪ್ರಸಾದ ಸೇವೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ನೆರವೇರಿಸಿದರು.ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮದ ಆಶ್ರಯದಾತರುಗಳ ವತಿಯಿಂದ ಕೇಕ್ ಕತ್ತರಿಸಲಾಯಿತು ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬಿ ಶ್ರೀರಾಮುಲು ಯುವ ಪಡೆಯ ರಾಜ್ಯ ಉಪಾಧ್ಯಕ್ಷರಾದ ಶರಣು ನಾಯಕ ಅವರನ್ನು ಆಶ್ರಮದ ವತಿಯಿಂದ ಸನ್ಮಾನಿಸಲಾಯಿತು ಸನ್ಮಾನ ಸ್ವೀಕರಿಸಿ ಶರಣು ನಾಯಕ ಮಾತನಾಡಿ ಶ್ರೀರಾಮುಲು ಸಮತೆಯ ಹಣತೆ ಹಚ್ಚಿದ ಸ್ವಾಭಿಮಾನಿ ದೇಶ ಕಂಡ ಮಹಾನ್ ನಾಯಕ ಬಡ ಜನರ ಕಷ್ಟಗಳನ್ನು ನೇರವಾಗಿ ಸ್ವೀಕರಿಸಿ ಪರಿಹಾರ ಮಾಡುವಂತಹ ನಾಯಕರು ಯಾರಾದರೂ ಇದ್ದರೆ ಅದು ನಮ್ಮ ಅಣ್ಣ ಶ್ರೀರಾಮುಲು ರಾಜಕಾರಣದಲ್ಲಿ ತಮ್ಮದೇ ಆದಂತಹ ವರ್ಚಸ್ಸನ್ನು ಕರುಣೆಯ ಮೂಲಕ ಪಡೆದುಕೊಂಡಂತಹ ಅಭಿವ್ಯಕ್ತಿ ನಾಡಿನ ಎಲ್ಲಾ ಸಮಾಜದ ಪ್ರೀತಿ ವಿಶ್ವಾಸ ಗಳಿಸಿ ಪ್ರತಿ ವರ್ಷವೂ ಕೂಡಾ ಸಾಮೂಹಿಕ ವಿವಾಹದ ಮೂಲಕ ಬಡವರಿಗೆ ಬಾಳಲು ಅವಕಾಶ ಮಾಡಿಕೊಟ್ಟ ಭಗವಂತ ನಾವು ಪ್ರತಿ ವರ್ಷವೂ ಕೂಡಾ ನಮ್ಮ ಯುವಪಡೆಯಿಂದ ಕಾರುಣ್ಯಆಶ್ರಮದಲ್ಲಿ ನಮ್ಮ ಶ್ರೀರಾಮುಲು ಅವರ ಹುಟ್ಟುಹಬ್ಬ ಆಚರಿಸುತ್ತೇವೆ ಕಾರುಣ್ಯ ಆಶ್ರಮದ ಬಗ್ಗೆ ಪ್ರೀತಿ ಅಭಿಮಾನ ಗೌರವ ಇಟ್ಟುಕೊಂಡಿರುವ ಶ್ರೀರಾಮುಲು ಅವರನ್ನು ಕಾರುಣ್ಯ ಆಶ್ರಮದಲ್ಲಿ ಒಂದು ದಿನ ಕಳೆಯುವಂತೆ ಮನವಿ ಮಾಡಿಕೊಂಡಿದ್ದೇವೆ ಅದಕ್ಕೆ ಒಪ್ಪಿಗೆ ನೀಡಿದ ಅವರು ಇನ್ನು ಕೆಲವೇ ದಿನಗಳಲ್ಲಿ ಆಶ್ರಮಕ್ಕೆ ಭೇಟಿ ನೀಡಿ ಈ ಎಲ್ಲಾ ಹಿರಿಯರ ಆಶೀರ್ವಾದವನ್ನು ತೆಗೆದುಕೊಳ್ಳಲಿದ್ದಾರೆ ಈ ಹಿರಿಯರ ಆಶೀರ್ವಾದ ಸದಾವಕಾಲ ಅಣ್ಣನ ಮೇಲಿರಲಿ ಕಾರುಣ್ಯ ಆಶ್ರಮದ ಜೊತೆ ನಮ್ಮ ಬಿ.ಶ್ರೀರಾಮುಲು ಯುವ ಪಡೆ ಪ್ರತಿಯೊಂದು ಸೇವೆಯಲ್ಲಿಯೂ ಕೂಡಾ ಹೆಜ್ಜೆ ಹಾಕುತ್ತದೆ ಮತ್ತು ಶ್ರೀರಾಮುಲು ಅಭಿಮಾನ ಬಳಗ ಕಾರುಣ್ಯ ಕುಟುಂಬದೊಂದಿಗೆ ಇರುತ್ತದೆ ಎಂದು ಮಾತನಾಡಿದರು ಈ ಕಾರ್ಯಕ್ರಮದಲ್ಲಿ ವಿಡಿಯೋದ ಮೂಲಕ ಕಾರುಣ್ಯ ಆಶ್ರಮದಲ್ಲಿನ ಆಶ್ರಯದಾತರುಗಳು ಬಿ.ಶ್ರೀರಾಮುಲು ಅವರಿಗೆ ಶುಭ ಹಾರೈಸಿ ಆಶೀರ್ವದಿಸಿದರು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೌನೇಶ ಕಣ್ಣೂರು ಉಪನ್ಯಾಸಕರು.ಬಸವರಾಜ ನಾಯಕ,ಸೋಮನಾಥ ನಾಯಕ,ಮಲ್ಲಿಕಾರ್ಜುನ ಮಲ್ಲಾಪುರ,ನಿರುಪಾದಿ ನಾಯಕ,ಕನಕರಾಯಪ್ಪ,ರಫೀ ಹವಾಲ್ದಾರ್, ಬಸವರಾಜ ಕುರುಕುಂದ,ಮಹಾವೀರ ಹಾಗೂ ಆಶ್ರಮದ ಸಿಬ್ಬಂದಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ,ಇಂದುಮತಿ,ಏಕನಾಥ,ಗೀತಾಕುಲಕರ್ಣಿ,
ಶರಣಮ್ಮ,ಮರಿಯಪ್ಪ ಅನೇಕರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!