ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವಣರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಜರುಗಿತು.ಡಣಾಪೂರ ಗ್ರಾಂ ಪಂ ಪಂಚಾಯತಿಯ ಉಪಾದ್ಯಕ್ಷರಾದ ಅಯ್ಯಮ್ಮ ಉದ್ಘಾಟಿಸಿದರು.ಸದಸ್ಯರಾದ ಆನಂದ ರಾಠೋಡ ಹಾಗೂ ಹನುಮೇಶ ಡೊಳ್ಳು ಅವರು 5 ವರ್ಷದ ಒಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಮಂಜುಳಾ ಮೇಡಂ ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರಾದ ಅಂಜನಮ್ಮ ಆಶಾ ಕಾರ್ಯಕರ್ತೆಯರಾದ ಕಂತೆಮ್ಮ,ಕಮಲಮ್ಮ,ಯಂಕಮ್ಮ ಹಾಗೂ ಅಂಗನವಾಡಿ ಸಹಾಯಕರು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ-ಹನುಮೇಶ ಭಾವಿಕಟ್ಟಿ




















