ಉತ್ತರ ಕನ್ನಡ:ಕದಂಬೋತ್ಸವ ನಿಮಿತ್ತ ಉತ್ತರ ಕನ್ನಡ ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಪ್ರವಾಸೋದ್ಯಮ ಇಲಾಖೆ,ಬನವಾಸಿ ಅಭಿವೃದ್ದಿ ಪ್ರಾಧಿಕಾರ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಕದಂಬ ಜ್ಯೋತಿ ರಥ -2024 ಕ್ಕೆ ಮುಂಡಗೋಡ ದಲ್ಲಿ ಸ್ವಾಗತ ಕೋರಲಾಯಿತು.
“ಕದಂಬ ಜ್ಯೋತಿ ರಥ”ಕ್ಕೆ ಜ್ಯೋತಿ ಬೆಳಗಿ,ಪುಷ್ಪಾರ್ಚನೆ ಮಾಡುವ ಮೂಲಕ ತಹಶೀಲ್ದಾರ್ ಶಂಕರ್ ಗೌಡಿ ತಾಲುಕಾಡಳಿತ ಪರವಾಗಿ ಮುಂಡಗೋಡ ದಲ್ಲಿ ಜ್ಯೋತಿಯನ್ನು ಬರ ಮಾಡಿಕೊಂಡರು.
ರಾಜ್ಯ ಮಟ್ಟದ ಕದಂಬೋತ್ಸವ ಮಾರ್ಚ್ 5 ಹಾಗೂ 6 ರಂದು ತಾಲೂಕಿನ ಬನವಾಸಿಯಲ್ಲಿ ನಡೆಯಲಿದ್ದು,ಮುಖ್ಯಮಂತ್ರಿ ಸಿದ್ದರಾಮಯ್ಯ 5ರ ಸಂಜೆ 6ಕ್ಕೆ ಉದ್ಘಾಟಿಸಲಿದ್ದಾರೆ.
ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸ್ಥಳೀಯ ಪ್ರತಿಭೆಗಳ ಜೊತೆಗೆ ಮೊದಲ ದಿನ ರಘು ದೀಕ್ಷಿತ್ ತಂಡ ಹಾಗೂ ಎರಡನೇ ದಿನ ಹರಿಕೃಷ್ಣ ತಂಡ ಬೆಂಗಳೂರು ಕಾರ್ಯಕ್ರಮ ನೀಡಲಿದ್ದಾರೆ.
ಇದೇ ವೇಳೆ ಪಟ್ಟಣ ಪಂಚಾಯ್ತಿ ಸಿಬ್ಬಂದಿಗಳು,ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.




















