ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೇಕ್ ತಿಂದ ಮಕ್ಕಳು ಅಸ್ವಸ್ಥ !

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಶುಕ್ರವಾರ ಹುಟ್ಟುಹಬ್ಬದ ಕೇಕ್ ತಿಂದ ಕೆಲವು ಮಕ್ಕಳು ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದು ವಿಷಪೂರಿತ ಆಹಾರ ಸೇವನೆಯೇ ಅಸ್ವಸ್ಥತೆಗೆ ಕಾರಣ ಎನ್ನಲಾಗಿದೆ.
ಬಾಗೇಪಲ್ಲಿ ತಾಲೂಕಿನ ಹೊರವಲಯದ ಅರಣ್ಯ ಇಲಾಖೆ ನೌಕರರ ಮಗನ ಹುಟ್ಟುಹಬ್ಬಕ್ಕೆ ಕೇಕ್ ಖರೀದಿಸಿ,ಕೇಕನ್ನು ಎಲ್ಲಾ ಮಕ್ಕಳಿಗೂ ಹಂಚಲಾಗಿತ್ತು ಕೇಕ್ ತಿಂದ ಮಕ್ಕಳು ಆರೋಗ್ಯದಲ್ಲಿ ಏರುಪೇರು ಲಕ್ಷಣಗಳು ಕಂಡುಬಂದಿದ್ದು ಕೂಡಲೇ ಬಾಗೇಪಲ್ಲಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಮಕ್ಕಳನ್ನು ಕರೆತರಲಾಗಿದೆ ಚಿಕಿತ್ಸೆ ನೀಡಲಾಗಿದೆ.ವಿಷಪೂರಿತ ಕೇಕ್ ಸೇವನೆಯಿಂದ ಮಕ್ಕಳ ಅಸ್ವಸ್ಥರಿಗೆ ಕಾರಣ ಎಂದು ವೈದ್ಯರು ತಿಳಿಸಿದರು.ಈ ವೇಳೆ ಕೇಕ್ ಅನ್ನು ಪರಿಶೀಲಿಸಿದಾಗ ಕೇಕ್ ಕುಸು-ಗುಸು ಮತ್ತು ಬೂಸ್ಟ್ ಸಹ ಬೆಳೆದಿದ್ದು ಕಂಡುಬಂದಿದೆ.

ದೂರುದಾಖಲು:ಗುಳೂರು ಸರ್ಕಲ್ ನ ಬಳಿ ಇರುವ ಕೇಕ್ ಬೇಕರಿಯ ಮಾಲೀಕನ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿ ಕೂಡಲೇ ಪುರಸಭೆ ಸದಸ್ಯರಾದಂತಹ ಗಡ್ಡಂ ರಮೇಶ್ ಬೇಕರಿ ಮಾಲೀಕನ ವಿರುದ್ಧ ಆರೋಗ್ಯ ಇಲಾಖೆ ದೂರು ಸಲ್ಲಿಸಿದರು.
ದೂರು ಸ್ವೀಕರಿಸಿದಂತಹ ತಾಲೂಕು ಆರೋಗ್ಯ ಅಧಿಕಾರಿ ಡಾ ಸಿ ಎನ್ ಸತ್ಯನಾರಾಯಣ ರೆಡ್ಡಿ ಪೊಲೀಸ್ ಸಿಬ್ಬಂದಿಯೊಂದಿಗೆ ಬೇಕರಿಗೆ ಭೇಟಿ ನೀಡಿ ಸಾಮಾಗ್ರಿಗಳನ್ನು ಮತ್ತು ಕೇಕ್ ತಯಾರಿಕೆಯ ಸಾಮಗ್ರಿಗಳನ್ನು ಪರಿಶೀಲನೆ ಮಾಡಿ ಕೇಕ್ ನ ಮಾಲಿಕನಿಗೆ ನೋಟಿಸ್ ಅನ್ನು ನೀಡಿದರು ತದನಂತರ ಮಕ್ಕಳ ತಿಂದಂತಹ ಕೇಕ್ ಅನ್ನು ಬೆಂಗಳೂರು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ ವರದಿ ಬಂದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ವರದಿಗಾರ:ಮಂಜುನಾಥ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!