ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಸೋಮನಹಳ್ಳಿ ವ್ಯಾಪ್ತಿಗೆ ಬರುವ ಜಂಬಿಗೆ ಮರದ ಹಳ್ಳಿ ಗ್ರಾಮದ ಸರ್ವೆ ನಂಬರ್ 130 ರಲ್ಲಿ ಸುಮಾರು 99 ಎಕರೆ ಜಮೀನಿನಲ್ಲಿ ಕೆಲವರಿಗೆ ಮಂಜೂರಾತಿಯಾಗಿರುವ ಜಮೀನು ಬಿಟ್ಟು ಉಳಿದ ಜಮೀನಿನಲ್ಲಿ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರ ಜಾನುವಾರುಗಳನ್ನು ಮೇಯಿಸಿಕೊಳ್ಳಲು ಬಳಸುತ್ತಿದ್ದಾರೆ.
ಇಂತಹ ಜಮೀನಿನಲ್ಲಿ ಗಣಿಗಾರಿಕೆ ಮಾಡಲು ಕೆಲವು ಭೂಗಳ್ಳರು ಜಮೀನು ಕಬಳಿಸಲು ಮುಂದಾಗಿದ್ದು ಈ ಜಮೀನನ್ನು ರಕ್ಷಿಸಲು ಕಂದಾಯ ಇಲಾಖೆ ಮುಂದಾಗ ಬೇಕೆಂದು ಜಂಬಿಗೆ ಮರದ ಹಳ್ಳಿ ಗ್ರಾಮಸ್ಥರು ಇಡೀ ತಾಲೂಕಿನಲ್ಲಿ ಎಲ್ಲಿ ನೋಡಿದರೂ ಕೆರೆಗಳನ್ನು ಒತ್ತುವರಿಯಾಗಿರುವುದು ಕಂಡುಬಂದಿದ್ದರೂ ಈ ಕಂದಾಯ ಇಲಾಖೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಖಂಡಿಸಿದರು ಇದೇ ಸಂದರ್ಭದಲ್ಲಿ ಮನವಿ ಪತ್ರ ಸಲ್ಲಿಸಿ ನಂತರ ಇದನ್ನು ನಿರಾಕರಿಸಿದ್ದಲ್ಲಿ ತಾಲೂಕು ಕಚೇರಿ ಮುಂದೆ ಸಂಬಂಧ ಪಟ್ಟ ಸುತ್ತಮುತ್ತಲಿನ ಗ್ರಾಮಸ್ಥರು ಅಹೋರಾತ್ರಿ ಧರಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಚ್ಚರಿಕೆ ನೀಡಿದರು ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಸುಬ್ಬರಾಯಪ್ಪ ಜೆಡಿಎಸ್ ಮುಖಂಡರಾದ ಶ್ರೀನಿವಾಸ್ ಗಾಂಧಿ ಬಿಜೆಪಿ ಮುಖಂಡರಾದ ಸಿ ಎಲ್ ಆರ್ ಗುಪ್ತ ಇನ್ನಿತರ ಮುಖಂಡರು ಹಾಜರಿದ್ದರು.
ವರದಿ-ಮಂಜುನಾಥ.ಎಸ್.




















