ಪಾವಗಡ :ಜನಸಾಮಾನ್ಯರು ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸಬೇಕು. ಅವರು ಅರೋಗ್ಯವಂತರಾಗಿರಲು ಶಿಬಿರದ ಮೂಲಕ ಹೆಲ್ಪ್ ಸೊಸೈಟಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿರುಮಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೇಶ್ ಚೌದರಿ ತಿಳಿಸಿದರು.
ಹೆಲ್ಪ್ ಸೊಸೈಟಿ ಪಾವಗಡ, ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ತಿರುಮಣಿ ಗ್ರಾಮದಲ್ಲಿ ಬೃಹತ್ ಉಚಿತ ಅರೋಗ್ಯ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಪಾವಗಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯದ್ಯಾತ ಹೆಲ್ಪ್ ಸೊಸೈಟಿ ತಂಡ ಉಚಿತ ಕಣ್ಣನ ತಪಾಸಣೆ, ಕಾನ್ಸರ್ ತಪಾಸಣೆ ಹಾಗೂ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ಕಾರ್ಯಕ್ರಮಗಳು ಯಶಶ್ವಿಯಾಗಿ ನಡೆಯುತ್ತಿವೆ.ಪ್ರಾಥಮಿಕ ಹಂತದಲ್ಲಿ ಆರೋಗ್ಯದ ಬಗ್ಗೆ ಜನರು ಹೆಚ್ಚು ಕಾಳಜಿ ವಹಿಸಿಕೊಳ್ಳಬೇಕು ಆಗ ಮುಂದಿನ ರೋಗಗಳು ಎದುರಾಗದಂತೆ ನೋಡಿಕೊಳ್ಳಬಹುದು ಎಂದು ಹೇಳಿದರು.
ಶಿಬಿರದಲ್ಲಿ ತಿರುಮಣಿ ಅರೋಗ್ಯ ನಿರೀಕ್ಷಕರು ರಮೇಶ್ ಮಾತನಾಡುತ್ತ ತಮ್ಮಲ್ಲಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯರೊಂದಿಗೆ ಸಮಾಲೋಚನೆ ಮಾಡಿದಾಗ ನಮ್ಮ ದೇಹದ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಹಮ್ಮಿಕೊಂಡಿರುವ ಇಂತಹ ಶಿಬಿರಗಳಿಂದ ಸಾಧ್ಯವಾಗಲಿವೆ ಎಂದರು. ಶಿಬಿರದ ಪ್ರಯೋಜಕರಾದ ಮಾನಂ ಶಶಿಕಿರಣ್ ಮಾತನಾಡುತ್ತಾ ರಾಜ್ಯಾದ್ಯಂತ ಡೆಂಗು ಜ್ವರ ಕಾಣಿಸಿಕೊಳ್ಳುತ್ತಿದ್ದೂ ಗ್ರಾಮಗಳಲ್ಲಿ ನಾಗರಿಕರು ತಮ್ಮ ಮನೆ ಸುತ್ತ ಮುತ್ತ ಸ್ವಚ್ಛತೆ ಕಾಪಾಡಬೇಕೆಂದು ಹಾಗೂ ತಾಲ್ಲೂಕು ಅರೋಗ್ಯ ಇಲಾಖೆ ಮುಖ್ಯಸ್ಥರೊಂದಿಗೆ ಚರ್ಚಿಸಿ ಡೆಂಗು ಕಾಯಿಲೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವಂತ ಕಾರ್ಯಕ್ರಮವನ್ನು ಹೆಲ್ಪ್ ಸೊಸೈಟಿ ಸಂಸ್ಥೆ ಮಾಡಲಿದೆ ಎಂದು ತಿಳಿಸಿದರು.ಶಿಬಿರದಲ್ಲಿ ಡಾ. ಶ್ರೀಕಾಂತ್,ಡಾಕ್ಟರ್ ಲಯ, ಡಾಕ್ಟರ್ ನವೀನ್ ಕುಮಾರ್, ಡಾಕ್ಟರ್ ನಂದಿನಿ, ಡಾಕ್ಟರ್ ಉಷಾ, ಮುಖಂಡರಾದ ನರಸಿಂಹಮೂರ್ತಿ, ಸುರೇಂದ್ರ, ನರೇಶ್ ಕುಮಾರ್, ಲೋಕೇಶ್, ಗೋಪಾಲ್, ರವಿಕುಮಾರ್, ಮಂಜುನಾಥ ಮತ್ತು ಈ ಶಿಬಿರಕ್ಕೆ ರಾಯಚೇರ್ಲು ಮುಖಂಡರಾದ R V ನಾಯ್ಡು ಇದ್ದರು.




















