ಯಲಬುರ್ಗಾ: ಶ್ರಾವಣ ಮಾಸದಲ್ಲಿ ಬರುವ ಹಬ್ಬ ,ನಾಗರ ಪಂಚಮಿ ಹಬ್ಬ ಈ ಹಬ್ಬದಲ್ಲಿ ಒಡಹುಟ್ಟಿದ ಅಣ್ಣ ತಂಗಿಯರು ಪ್ರೀತಿಯಿಂದ ನಗು ನಗುತಾ ಹಬ್ಬವನ್ನು ಆಚರಿಸುತ್ತಾರೆ.ಶ್ರೀ ಏಳು ಕೋಟಿ ಮಲ್ಲಯ್ಯ, ಶ್ರೀ ವಿಜಯ ದುರ್ಗಾ,ಶ್ರೀ ದ್ಯಾಮಮ್ಮ ದೇವಸ್ಥಾನಗಳ ಮುಂಭಾಗದಲ್ಲಿ,ಹಿಗೇ ವಿವಿಧ ದೇವಸ್ಥಾನದ ಹತ್ತಿರ ಮತ್ತು ತಮ್ಮ ಓಣಿಯ ಕಟ್ಟೆಯಲ್ಲಿ ಇರುವ ನಾಗ ದೇವತೆಯ ಕಲ್ಲಿನ ಮೂರ್ತಿಗಳಿಗೆ ಈ ಹಬ್ಬದಲ್ಲಿ ನಾಗಪ್ಪನಿಗೆ ಹಾಲು ಎರೆದು ,ತಮ್ಮ ಮನೆಯ ಎಲ್ಲಾ ದೇವರನ್ನು ನೆನೆದು,ತಮ್ಮ ಕುಟುಂಬದ ಬಂದು ಬಳಗದವರನ್ನು ನೆನಪಿಸಿಕೊಂಡು, ನನ್ನ ಪಾಲು ,ನಿನ್ನ ಪಾಲು,ಅವ್ವನ ಪಾಲು,ಅಪ್ಪನ ಪಾಲು ಸರ್ವರ ಪಾಲು ಎಂದು ಹಾಲು ಎರೆದು ,ಆರೋಗ್ಯ, ಸುಖ ಸಂಪತ್ತು ಲಭಿಸಲಿ ಎಂದು ಭಕ್ತರು ಭಕ್ತಿಯಿಂದ ಪೂಜಿಸಿ ಪ್ರಾರ್ಥನೆ ಸಲ್ಲಿಸಿದರು.
ಬರಹ-ಶರಣಬಸಪ್ಪ ದಾನಕೈ




















