ಚಿತ್ರದುರ್ಗ: ಕರ್ನಾಟಕ ರಾಜ್ಯ ಪತ್ರಿಕಾ ವಿತರಕಾರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಸಂಘದ ಸಂಯುಕ್ತಾಶ್ರಯದಲ್ಲಿ ಸೆ.೮ರ ಭಾನುವಾರದಂದು ನಾಲ್ಕನೇ ರಾಜ್ಯ ಸಮ್ಮೇಳನ ಅನುಭವ ಮಂಟಪ ಮುರುಘಾ ಮಠ ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ನೆರವೇರಿತು.
ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಮೂರು ಸಾವಿರ ಪತ್ರಿಕಾ ವಿತರಕರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಾನಿಹಳ್ಳಿ ಮಠದ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಶ್ವೇತಾ ಕೆ.ವಿ.ಪ್ರಭಾಕರ್, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹಾಗೂ ಶಾಸಕ ವೀರೇಂದ್ರ ಪಪ್ಪಿ, ಸಂಸದ ಗೋವಿಂದ ಕಾರಜೋಳ, ಕಾರ್ಯನಿರಂತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ್ ತಗಡೂರು, ವಿಆರ್ಎಲ್ ಸಮೂಹ ಸಂಸ್ಥೆಯ ಚೇರ್ ಮನ್ ವಿಜಯ ಸಂಕೇಶ್ವರ್, ಪ್ರಜಾ ಪ್ರಗತಿ ಪತ್ರಿಕೆಯ ಸಂಪಾದಕ ಎನ್.ನಾಗಣ್ಣ ಹಾಗೂ ಇನ್ನೂ ಅನೇಕ ಗಣ್ಯರು ಭಾಗವಹಿಸಿದ್ದರು.
ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದಲೂ ಈ ಕಾರ್ಯಕ್ರಮದಲ್ಲಿ ಸುಮಾರು ಮೂವತ್ತಕ್ಕಿಂತ ಅಧಿಕ ಪತ್ರಿಕಾ ವಿತರಿಕರು ಭಾಗವಹಿಸಿದ್ದರು. ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಮಾಲತೇಶ್ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಗೌರವಾಧ್ಯಕ್ಷರಾದ ಮುಕ್ತಾರ್ ಅಹಮದ್ (ನಜೀರ್) ಭದ್ರಾವತಿ ತಾಲೂಕ್ ಘಟಕದ ಅಧ್ಯಕ್ಷರಾದ u.I.ಮಲ್ಲಿಕಾರ್ಜುನ್ ಇವರುಗಳನ್ನು ಸನ್ಮಾನಿಸಲಾಯಿತು.




















