ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನೈಸರ್ಗಿಕ ತೈಲವರ್ಣ ಕಲಾಕೃತಿಯ ರಚನೆಯಲ್ಲಿ ನಾಡಿನಾದ್ಯಂತ ಪ್ರಸಿದ್ದಿ ಪಡೆದ ಸಿದ್ದು ಇಟಗಿ

ಶಿವಮೊಗ್ಗ: ಪುರಾತನ ಶೈಲಿಯ ನೈಸರ್ಗಿಕ ತೈಲವರ್ಣ ಕಲಾಕೃತಿಯ ರಚನೆಯಲ್ಲಿ ನಾಡಿನಾದ್ಯಂತ ಪ್ರಸಿದ್ದಿ ಪಡೆದಿರುವ ಬೆಳಗಾವಿ ಜಿಲ್ಲೆಯ ಗಿರಿಯಾಲ ಕೆಬಿ ಗ್ರಾಮದ ಸಿದ್ದು ಇಟಗಿಯವರು ಬೊರವೆಲ್ ರಾಮಯ್ಯ ಎಂದೇ ಪ್ರಖ್ಯಾತಿಯನ್ನು ಪಡೆದಿರುವ ಕರ್ನಾಟಕ ಸರಕಾರದ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವರಾದ ಬೇಗಾನೆ ರಾಮಯ್ಯನವರ ಮೇಲಿನ ಅಭಿಮಾನದಿಂದ ಬೇಗಾನೆ ರಾಮಯ್ಯನವರ ತೈಲವರ್ಣ ಕಲಾಕೃತಿಯನ್ನು ರಚಿಸಿ ಉಡುಗೊರೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ತಮ್ಮ ಆಗಿನ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾ ಆಗಿನ ಪ್ರಧಾನಿ ಉಕ್ಕಿನ ಮಹಿಳೆ ಎಂದೇ ಪ್ರಸಿದ್ದರಾಗಿದ್ದ ಇಂದಿರಾ ಗಾಂಧಿಯವರ ಜೊತೆಗಿನ ತಮ್ಮ ಒಡನಾಟವನ್ನು ಎಳೆ ಎಳೆಯಾಗಿ ವಿವರಿಸುತ್ತಾ ತಮ್ಮ ಅಧಿಕಾರವಧಿಯಲ್ಲಿನ ರಾಜಕೀಯ ವಿಚಾರಗಳನ್ನು ಮತ್ತು ತಮ್ಮಿಂದ ನೆರವೇರಲ್ಪಟ್ಟ ಸಾಮಾಜಿಕ ಕಾರ್ಯಗಳನ್ನು ನೆನಪಿಸಿಕೊಂಡು ಹರ್ಷಿತಾರಾದರು. ಸಾಹಿತ್ಯದ ಬಗೆಗಿನ ಅವರ ಆಸಕ್ತಿಯ ಕುರಿತು ಹೇಳುವಾಗ ಕುವೆಂಪುರವರ ಮಧುರ ಸಾಹಿತ್ತಿಕ ನುಡಿಗಳನ್ನು ನೆನಪುಮಾಡಿಕೊಂಡರು. ಇದರ ಮಧ್ಯ ಕಲಾವಿದರಾದ ಸಿದ್ಧು ಇಟಗಿಯವರ ಕುರಿತು ಕೇಳಿದಾಗ ಅವರು ತಮ್ಮ ಪುಟ್ಟ ಗ್ರಾಮವಾದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಿರಿಯಾಲ ಕೆಬಿ ಅನ್ನುವ ಗ್ರಾಮದ ಕುರಿತು ಹೇಳುವುದರ ಜೊತೆಗೆ ಆ ಗ್ರಾಮದಲ್ಲಿ ಒಂದು ಸರಕಾರಿ ಪ್ರೌಢಶಾಲೆ ಮತ್ತು ಒಂದು ಸರಕಾರಿ ಆಸ್ಪತ್ರೆ ಮತ್ತು ಸ್ವಂತ ಗ್ರಾಮ ಪಂಚಾಯಿತಿಯ ಅವಶ್ಯಕತೆ ಇದೆ ಎಂದು ಹೇಳಿದಾಗ ತಮ್ಮ ಮಗಳಾದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ ಮೇಡಮ್ ರವರನ್ನು ಕರೆದು ಇವರ ಸಮಸ್ಯೆಗೆ ಸ್ಪಂದಿಸು ಎಂದು ಮುಗುಳ್ನಗೆ ಬೀರುತ್ತಾ ಸೂಚಿಸಿದರು. ತಂದೆಯ ಸೂಚನೆಯಂತೆ ವಿನಂತಿ ಅರ್ಜಿಯನ್ನು ಸ್ವೀಕರಿಸಿ ಶಿಫರಾಸ್ಸು ಮಾಡುವುದರ ಜೊತೆಗೆ ತಮ್ಮಗ್ರಾಮಕ್ಕೆ ಬೇಕಾಗಿರುವ ಮೂಲ ಅವಶ್ಯಕತೆಗಳಾದ ಶಿಕ್ಷಣ ಹಾಗೂ ಆರೋಗ್ಯಕ್ಕೆ ಸಂಭಂಧಿಸಿದಂತೆ ಸರಕಾರಿ ಪ್ರೌಢಶಾಲೆ ಮತ್ತು ಸರಕಾರಿ ಆಸ್ಪತ್ರೆ ಮಂಜೂರಿ ಸಲುವಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆಯ ಮಾತುಗಳನ್ನಾಡಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!