ಬಾಗಲಕೋಟೆ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಾಗಲಕೋಟೆ ಜಿಲ್ಲಾ ಘಟಕ ಹಿರಿಯ ಪತ್ರಕರ್ತರಾದ ದಿ. ಶ್ರೀಶೈಲ ಅಂಗಡಿ ಸ್ಮರಣಾರ್ಥ ನೀಡುವ ಅತ್ಯುತ್ತಮ ಗ್ರಾಮೀಣ ಪತ್ರಕರ್ತ ಪ್ರಶಸ್ತಿಗೆ ಪ್ರಕಾಶ ಗುಳೇದಗುಡ್ಡ ಅವರು ಪುರಸ್ಕೃತರಾದ ಹಿನ್ನಲೆಯಲ್ಲಿ ಈಚೆಗೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿಗಳು, ಉಪನ್ಯಾಸಕ ಡಾ. ಚಂದ್ರಶೇಖರ ಕಾಳನ್ನವರ, ಸರ್ಕಾರಿ ಡಿಗ್ರಿ ಕಾಲೇಜ್ ಉಪನ್ಯಾಸಕ ಪ್ರೊ. ಸಂಗಮೇಶ ಬ್ಯಾಳಿ , ಪತ್ರಕರ್ತ ಮಿತ್ರ ಸಂಗಮೇಶ ಬಡಿಗೇರ ಅವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಹೊಸದಿಗಂತ ಪತ್ರಿಕೆಯ ಜಿಲ್ಲಾ ವರದಿಗಾರ ಜಗದೀಶ ಗಾಣಿಗೇರ, LIC ಏಜೆಂಟ್ ಭರತ್ ಭಾರಕೇರ ಇದ್ದರು.
- ಕರುನಾಡ ಕಂದ




















