
ಬಳ್ಳಾರಿ / ಕಂಪ್ಲಿ : ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದರ ಮೂಲಕ ದೇಶದ ಉತ್ತಮ ಪ್ರಜೆಗಳಾಗಿ ಜೀವನ ನಡೆಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನ ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಶೇಖರ ಹೇಳಿದರು.
ಪಟ್ಟಣದ ಸಾಂಗಾತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಧರ್ಮಸ್ಥಳ ಯೋಜನೆ ಬಿ. ಸಿ. ಟ್ರಸ್ಟ್, ಬೆಂಗಳೂರು ಕಾವೇರಿ ಹಾಸ್ಪಿಟಲ್, ಅಕ್ಕಮಹಾದೇವಿ ಮಹಿಳಾ ಮಂಡಳಿ, ಸಂಜೀವಿನಿ ಇನ್ಸಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಕಲುಷಿತ ಆಹಾರ, ನೀರು, ಗಾಳಿ ಹಾಗೂ ರಾಸಾಯನಿಕಯುಕ್ತ ಆಹಾರ ಸೇವನೆಯಿಂದ ರೋಗಗಳು ಹೆಚ್ಚಾಗುತ್ತಿವೆ. ಎಲ್ಲರೂ ಆರೋಗ್ಯದ ಕಡೆ ಗಮನ ಹರಿಸಬೇಕು’. ‘ಆರೋಗ್ಯಕ್ಕಿಂತ ಬಹುದೊಡ್ಡ ಸಂಪತ್ತು ಬೇರೊಂದಿಲ್ಲ. ಜಂಕ್‌ಫುಡ್ ತಿನ್ನುವುದನ್ನು ನಿಲ್ಲಿಸಿ. ಆರೋಗ್ಯದತ್ತ ಗಮನಹರಿಸಿ’ ಎಂದರು.
ನಂತರ ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ಶಾರದಾ ಜೆ.ಹಿರೇಮಠ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಅವಸರದ ಜೀವನ ನಡೆಸುತ್ತಿದ್ದು, ತಮ್ಮ ಆರೋಗ್ಯದ ಬಗ್ಗೆ ಹಾಗೂ ಸ್ವಚ್ಚತೆಯ ಬಗ್ಗೆ ಕಾಳಜಿಯನ್ನು ವಹಿಸದೆ ಇರುವುದರಿಂದ ಅನೇಕ ರೋಗ ರುಜಿನಗಳಿಗೆ ಒಳಗಾಗುತ್ತಿದ್ದು, ಇದರಿಂದ ಜನರು ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗದೊಂದಿಗೆ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದರು.
ಇಲ್ಲಿ ಇಸಿಜಿ, ಬಿ.ಪಿ, ಶುಗರ್, ಹೃದಯ, ಕೀಲು ಮತ್ತು ಮೂಳೆ ತಾಪಸಣೆ ಮಾಡಲಾಯಿತು. ಸುಮಾರು 380ಜನರ ನೋಂದಣಿಯಾಗಿದ್ದು, ಒಟ್ಟಾರೆಯಾಗಿ 480ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸದಸ್ಯ ಎನ್.ರಾಮಾಂಜನೇಯ, ಹಿರಿಯ ಸಲಹೆಗಾರ ಡಾ.ಪಿ.ಸಿ ಜಗದೀಶ, ಡಾ.ನಿಹಾನ್, ಜಿಲ್ಲಾ ಜನಜಾಗೃತಿ ಸದಸ್ಯ ಡಾ.ವೆಂಕಟೇಶ ಸಿ.ಭರಮಕ್ಕನವರ್, ಮುಖಂಡ ಪಿ.ಮೂಕಯ್ಯಸ್ವಾಮಿ, ಮಂಜುನಾಥ, ಕಂಪ್ಲಿ ಕ್ಷೇತ್ರ ಯೋಜನಾಧಿಕಾರಿ ರಾಘವೇಂದ್ರ ಎಲ್, ಸಿಬ್ಬಂದಿಗಳಾದ ಸಂಜೀವಕುಮಾರ, ರೇಖಾ, ಮಂಜುಳಾ, ಜಯಲಕ್ಶ್ಮೀ, ಶಿವು, ಬಸವರಾಜ, ಮಲ್ಲಿಕಾರ್ಜುನ, ಮಂಜಣ್ಣ, ಶ್ರೀಶೈಲ ಸೇರಿದಂತೆ ಇತರರು ಸೇವಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















