ಕಲಬುರಗಿ:ವಿಭಿನ್ನ ಕಥಾ ಹಂದರದೊಂದಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕರ್ಷಕವಾದ ದೇವರು, ದೈವ ಆಧಾರಿತ ಅದ್ಬುತವಾದ ಚಿತ್ರ ‘ಕಾಂತಾರ ಒಂದು ದಂತಕಥೆ’ ಚಿತ್ರವನ್ನು ಕಲಬುರಗಿಯ ಐನಾಕ್ಸ್ ಚಿತ್ರಮಂದಿರದಲ್ಲಿ ಗ್ರಾಮೀಣ ಶಾಸಕರಾದ ಬಸವರಾಜ ಮತ್ತಿಮಡು ಅವರು ಕುಟುಂಬ ಸಮೇತ ಚಿತ್ರವನ್ನು ವೀಕ್ಷಿಸಿದರು. ಕನ್ನಡ ನೆಲದ ನಟ, ನಿರ್ದೇಶಕ ಶ್ರೀ ರಿಷಬ್ ಶೆಟ್ಟಿ ಅವರು ಭಾರತದ ಸಂಸ್ಕೃತಿ, ಸಂಪ್ರದಾಯ, ಆಚಾರ, ನಂಬಿಕೆಗಳನ್ನು ನೈಜವಾಗಿ ಬಿಂಬಿಸಿ, ಅದರ ಅಂತ:ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ ಪರಿ ಕನ್ನಡ ಮಾತ್ರವಲ್ಲ ಇಡೀ ಭಾರತದ ಚಿತ್ರರಂಗದಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಅದ್ಭುತವಾದ ಸಿನೆಮಾ ನಿರ್ಮಿಸಿದ ಹೊಂಬಾಳೆ ಸಂಸ್ಥೆಯ ನಿರ್ಮಾಪಕ ವಿಜಯ ಕಿರಂಗದೂರ, ವಿಭಿನ್ನ ನೆಲ ಮೂಲದ ವಿಷಯವನ್ನು ವಿಶ್ವದ ಎದುರು ಅದ್ಭುತವಾಗಿ ಕಟ್ಟಿಕೊಟ್ಟ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಶಾಸಕ ಬಸವರಾಜ ಮತ್ತಿಮಡು ಅವರು ಅಭಿನಂದನೆಗಳನ್ನು ಸಲ್ಲಿಸಿದರು.
- ಕರುನಾಡ ಕಂದ




















