ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜನಕ

ಜೀವವ ಕೊಟ್ಟ ದೈವ ಜನಕ
ತಿದ್ದಿ ಬುದ್ಧಿಯ ಹೇಳಿದ ಶಿಕ್ಷಕ
ಸಂಸಾರ ನೊಗ ಹೊತ್ತ ರಕ್ಷಕ
ಕಷ್ಟ ನಷ್ಟಗಳ ಗೆದ್ಧಿಹ ಸಾಧಕ.

ಹೆಗಲ ಮೇಲೆ ಹೊತ್ತು ಮೆರೆದ
ಜಗದ ಅಂದ ಚೆಂದ ತೋರಿದ
ಖುಷಿ ನೋಡಿ ಸಂತಸ ಪಡೆದ
ಬೆವರ ಹನಿ ಮರೆತು ಹೋದ.

ಇದ್ದರೂ ನೂರಾರು ತರದ ವೇದನೆ
ಹೇಳಿ ಕೊಟ್ಟನು ತಾಳ್ಮೆಯ ಸಹನೆ
ಮಾಡನೆಂದೂ ಸ್ವಾರ್ಥ ಯೋಚನೆ
ಪದಕೆ ಸಿಗದು ಅವನೊಳ ಭಾವನೆ.

ತೋರಲಿಲ್ಲ ಎಂದೂ ತಳುಕು ಬಳುಕು
ಕಿಂಚಿತ್ತೂ ಇರದು ಒಳಗಿನ ಹುಳುಕು
ನೀಡಿ ನಡೆದರು ನಿತ್ಯ ನಮಗೆ ಬೆಳಕು
ಬಾಳಿ ತೋರಿದರು ಶಿಸ್ತು ಬದ್ಧ ಬದುಕು.

ಹೆತ್ತಮ್ಮನ ಬಾಳ ಪ್ರೀತಿಯ ಜೊತೆಗಾರ
ಕುಟುಂಬಕ್ಕೆ ಇವನೇ ಮೂಲ ಆಧಾರ
ಸದಾ ಹಸನ್ಮುಖಿಯ ಭಾವದ ನಗೆಗಾರ
ಮಕ್ಕಳ ಭವಿಷ್ಯವನ್ನು ಕೆತ್ತುವ ಚಿತ್ರಗಾರ.

  • ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
    (ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
    ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
    ದೂರವಾಣಿ ಸಂಖ್ಯೆ : 9740199896.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!