ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪರೀಕ್ಷೆ ಯಶಸ್ವಿಗೆ 18 ಸೂತ್ರಗಳು.

ಇನ್ನೇನು SSLC ಮತ್ತು PUC ಪರೀಕ್ಷೆ ಮೂರ್ನಾಲ್ಕು ತಿಂಗಳಲ್ಲಿ ಪ್ರಾರಂಭವಾಗುತ್ತವೆ. ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಈ ಪರೀಕ್ಷೆಗಳು ಬಹು ಮುಖ್ಯವಾದವುಗಳು.
ಆದ್ದರಿಂದ ವಿದ್ಯಾರ್ಥಿಗಳು ಆಲಸ್ಯತನ ತೋರದೆ ಓದಬೇಕಾಗುತ್ತದೆ. ಸರಿಯಿಲ್ಲದ ಅಧ್ಯಯನ ವಿಧಾನ ಪರೀಕ್ಷೆಗೆ ಮಾರಕವಾದೀತು. ಆದ್ದರಿಂದ ಕೆಲವು ಅಧ್ಯಯನ ವಿಧಾನಗಳನ್ನು ಅನುಸರಿಸುವದರಿಂದ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬಹುದು.
ಅವುಗಳು…

🌹ನಿರ್ದಿಷ್ಟವಾದ ಓದಿನ ವೇಳಾಪಟ್ಟಿ ತಯಾರಿಸಿ.
🌹ಒಂದು ನಿರ್ದಿಷ್ಟ ಸಮಯದಲ್ಲಿ,ನಿರ್ದಿಷ್ಟ ಸ್ಥಳದಲ್ಲಿ ಆಕರ್ಷಣೆ, ವಿಕರ್ಷಣೆ ಇಲ್ಲದ ನಿಶ್ಯಬ್ದವಾದ ಪರಿಸರದಲ್ಲಿ ಓದಿ.
🌹ಎಲ್ಲೆಂದರಲ್ಲಿ ಓದಬೇಡಿ. ಸರಿಯಾದ ಗಾಳಿ, ಬೆಳಕು ಬರುವ ಕೊಠಡಿಯಲ್ಲಿ ಓದಿ.
🌹ಸುಮಾರು ಒಂದು ಗಂಟೆಯವರೆಗೆ ಓದಿ.
ಓದಿದ ನಂತರ ಅದನ್ನು ಸ್ಮರಣೆ ಮಾಡಿ, ಅದರ ಸಾರಾಂಶವನ್ನು ಬರೆಯಿರಿ.ಹಾಗೂ ವಿಮರ್ಶೆ ಮಾಡಿ.
🌹ಮರೆತದ್ದನ್ನು ಪುನಃ ಪುನಃ ಓದಿ. ಕಠಿಣವಾದ ವಿಷಯಕ್ಕೆ ಜಾಸ್ತಿ ಒತ್ತು ಕೊಡಿ.
🌹ಪಠ್ಯ ಪುಸ್ತಕಗಳಲ್ಲದೆ ಸಂಭಂದಿಸಿದ ಆಕರ ಕೋಶಗಳನ್ನು, Question Bankಗಳನ್ನು ಓದಿ. ಜೊತೆಗೆ ದಿನಪತ್ರಿಕೆಗಳು ಇರಲಿ.
🌹ಶಿಕ್ಷಕರು ಮತ್ತು ಸಹಪಾಠಿಗಳ ಜೊತೆ ಚರ್ಚಿಸಿ ವಿಷಯ ಮನನ ಮಾಡಿಕೊಳ್ಳಿ.
🌹ಈ ಹಿಂದೆ ಪಾಠ ಆಗಿ ಹೋದಲ್ಲಿ ನಿಮಗೆ ತಿಳಿಯದೇ ಹೋದಲ್ಲಿ ಸಂಭದಿಸಿದ ಶಿಕ್ಷಕರನ್ನು ಸಂಪರ್ಕಿಸಿ ಕೇಳಿ ತಿಳಿದುಕೊಳ್ಳಿ.
🌹ಅರ್ಥ ಮಾಡಿಕೊಳ್ಳದೇ ಬಾಯಿಪಾಠ ಮಾಡಬೇಡಿ, ಬಾಯಿಪಾಠ ಮಾಡುವ ಪ್ರಮೇಯ ಬಂದಲ್ಲಿ ಅರ್ಥ ಮಾಡಿಕೊಂಡು ಬಾಯಿಪಾಠ ಮಾಡಿರಿ.
🌹ಒಂದೇ ವಿಷಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡದೇ ಎಲ್ಲಾ ವಿಷಯಗಳಿಗೂ ಸಮಾನ ಪ್ರಾಶಸ್ತ್ಯ ನೀಡಿರಿ. ಹಾಗೂ ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ವಿಷಯ ಓದಿ.
🌹ಪ್ರಶ್ನೆಗಳಿಗೆ ಕಾಲಮಿತಿಯಲ್ಲಿ ಉತ್ತರ ಬರೆಯುವ ಅಭ್ಯಾಸ ಮಾಡಿರಿ.
🌹ಮೊಬೈಲ್‌, ಟಿವಿ, ಟ್ಯಾಬ್ಲೆಟ್ನಿಂದ ದೂರವಿರಿ.
🌹ಕ್ರಮಬದ್ಧವಾಗಿ ಸಮಯಕ್ಕೆ ಸರಿಯಾಗಿ ನಿದ್ದೆ ಹಾಗೂ ಊಟ ಮಾಡಿ.
🌹ದೈಹಿಕ ವ್ಯಾಯಾಮ ಮತ್ತು ಕ್ರೀಡೆಗಳು ಸಹ ಇರಲಿ.
🌹ಮಧ್ಯ ಮಧ್ಯ ಬಿಡುವು ಕೊಟ್ಟು ಓದಿ.
🌹ಪರೀಕ್ಷೆ ಹತ್ತಿರ ಬಂದಾಗ ಓದದೇ ಈಗಿನಿಂದಲೇ ಓದಿ.
🌹ಪರೀಕ್ಷೆಯ ಬಗ್ಗೆ ಭಯಬೇಡ.
🌹ಯಾವುದೇ ಗೊಂದಲಕ್ಕೆ ಒಳಗಾಗದೇ ನಿಮ್ಮ ಲಕ್ಷ್ಯ ನಿಮ್ಮ ಗುರಿ ಕಡೆ ಹಾಗೂ ಓದಿನ ಕಡೆ ಇರಲಿ.

👍ಒಳ್ಳೆಯದಾಗಲಿ…

✍ಚಿರಂಜೀವಿ ರೋಡಕರ್.(ಶಿಕ್ಷಕರು), ಸಾಹಿತಿಗಳು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!