ಮಹತ್ತರವಾದ ಕಷ್ಟಗಳೊಡನೆ, ನಾನು ಈ ‘ವಿಮೋಚನಾ ರಥವನ್ನು ‘ ವನ್ನು ಇಂದು ನೀವು ಕಾಣುತ್ತಿರುವಲ್ಲಿಗೆ ಎಳೆದು ತಂದಿದ್ದೇನೆ. ಇದರ ದಾರಿಯಲ್ಲಿ ಅಡೆತಡೆಗಳು, ಅಪಾಯದ ಜಾಗಗಳು ಹಾಗೂ ಸಂಕಷ್ಟಗಳು ಬರಬಹುದಾದರೂ ಸಹ ಈ ‘ವಿಮೋಚನಾ ರಥ’ ವು ಮುಂದೆ ಸಾಗಲಿ ಮತ್ತು ಇನ್ನೂ ಮುಂದೆ ಸಾಗಲಿ. ಒಂದು ವೇಳೆ ನನ್ನ ಜನರು, ನನ್ನ ಅನುಯಾಯಿ ನಾಯಕರು ಈ ವಿಮೋಚನಾ ರಥವನ್ನು ಮುಂದೊಯ್ಯಲು ಶಕ್ತರಾಗದಿದ್ದರೆ ಅವರು ಅದನ್ನು ಈ ದಿನ ಎಲ್ಲಿ ಕಾಣುತ್ತಿದೆಯೋ ಅಲ್ಲಿಯೇ ಬಿಟ್ಟುಬಿಡಬೇಕು. ಆದರೆ ಯಾವುದೇ ಸಂದರ್ಭದಲ್ಲಿ ಅವರು ‘ವಿಮೋಚನಾ ರಥ’ ವು ಹಿಂದೆ ಹೋಗಲು ಬಿಡಬಾರದು. ಇದು ನನ್ನ ಎಲ್ಲಾ ಗಂಭೀರತೆಯಿಂದ, ನನ್ನ ಜನರಿಗೆ ನೀಡುತ್ತಿರುವ ನನ್ನ ಸಂದೇಶವಾಗಿದೆ, ಬಹುಶಃ ಕೊನೆಯ ಸಂದೇಶವಾಗಿದೆ. ನನ್ನ ಈ ಮಾತುಗಳನ್ನು ನನ್ನ ಜನ ಖಂಡಿತವಾಗಿಯೂ ಕಡೆಗಣಿಸುವುದಿಲ್ಲ ಎಂದು ನನಗನಿಸಿದೆ. ಹೋಗು ಅವರಿಗೆ ಹೇಳು ಹೋಗು ಅವರಿಗೆ ಹೇಳು ಹೋಗು ಅವರಿಗೆ ಹೇಳು ” ಎಂದು ಅವರು ಮೂರು ಬಾರಿ ಪುನರುಚ್ಚರಿಸಿದರು. ಹೀಗೆ ಹೇಳುತ್ತಾ ಕಣ್ಣೀರು ಸುರಿಸುತ್ತಾ ಬಿಕ್ಕಿ ಬಿಕ್ಕಳಿಸಿ ಅತ್ತರು. ಅವರು ಅಷ್ಟೊಂದು ಹತಾಶರಾಗಿದ್ದರು.
ಕೃತಿ : ಬಾಬಾಸಾಹೇಬರ ಕೊನೆಯ ದಿನಗಳು.
ಮೂಲ ಲೇಖಕ : ನಾನಕ ಚಂದ್ ರತ್ತು
ಕನ್ನಡಕ್ಕೆ : ಡಾ. ವಿಜಯ ನರಸಿಂಹ ಜೆ.
ಮರೆಯರಲಾರದ ರತ್ನ ಮರೆಯಾದ ದಿನ. ಭಾರತ ಭಾಗ್ಯ ವಿಧಾತನಿಗೆ ಶಿರಬಾಗಿ ನಮನಗಳು.🙏🏻
- ಚಿರಂಜೀವಿ ರೋಡಕರ್




















