ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಂದೇ ಮಾತರಮ್’ಗೆ 150 ವರ್ಷ

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ‘ವಂದೇ ಮಾತರಮ್’ ಕುರಿತು ಭವ್ಯ ಪ್ರದರ್ಶನದ ಆಯೋಜನೆಯನ್ನು ಡಿಸೆಂಬರ್ 13 ರಿಂದ 15 ರವರೆಗೆ ಭಾರತ ಮಂಡಪಮ್, ನವದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದೆ.

‘ವಂದೇ ಮಾತರಮ್’ ಎಂಬ ರಾಷ್ಟ್ರ ಜಾಗೃತಿಯ ಈ ಪವಿತ್ರ ಗೀತೆಗೆ ಈ ವರ್ಷ 150 ವರ್ಷಗಳು ತುಂಬುತ್ತಿವೆ. ಈ ಐತಿಹಾಸಿಕ ಸಂದರ್ಭದಲ್ಲಿ ಮತ್ತು ಸನಾತನ ಸಂಸ್ಥೆಯ ರಾಷ್ಟ್ರ ಮತ್ತು ಧರ್ಮಕಾರ್ಯದ 25 ವರ್ಷಗಳು ಪೂರ್ಣಗೊಂಡಿರುವ ನಿಮಿತ್ತ, ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಯೋಗದೊಂದಿಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ದಲ್ಲಿ ‘ವಂದೇ ಮಾತರಮ್’ ಕುರಿತ ಭವ್ಯ ಪ್ರದರ್ಶನ ಮತ್ತು ವಿಶೇಷ ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ ಅಭಯ ವರ್ತಕ್ ಅವರು ಮಾಹಿತಿ ನೀಡಿದ್ದಾರೆ.
ಸಂಸ್ಥೆಯು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, “‘ವಂದೇ ಮಾತರಮ್’ ಸಂಪೂರ್ಣ ಭಾರತವನ್ನು ರಾಷ್ಟ್ರಭಾವನೆಯ ಸೂತ್ರದಲ್ಲಿ ಸೇರಿಸಿದೆ. ಈ ಗೀತೆಯು ಸ್ವಾತಂತ್ರ್ಯ ಸಂಗ್ರಾಮದ ಸ್ಫೂರ್ತಿಯ ಮೂಲವಾಗಿ, ತ್ಯಾಗ ಮತ್ತು ರಾಷ್ಟ್ರನಿಷ್ಠೆಯ ಭಾವನೆಯನ್ನು ಜನಮಾನಸದಲ್ಲಿ ಜಾಗೃತಗೊಳಿಸಿತು. ಈ ಸ್ಫೂರ್ತಿಯನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ” ಎಂದು ತಿಳಿಸಲಾಗಿದೆ.

ವಿಶೇಷ ಆಕರ್ಷಣೆಗಳು:

  • 1000 ಜನರ ಸಾಮೂಹಿಕ ಗಾಯನ: ‘ವಂದೇ ಮಾತರಮ್’ – ರಾಷ್ಟ್ರಭಾವನೆಯ ಮಹಾ ಅಭಿಯಾನ
  • ಐತಿಹಾಸಿಕ ಚಲನಚಿತ್ರ ಪ್ರದರ್ಶನ: ‘ವಂದೇ ಮಾತರಮ್’ನ ಉಗಮ, ಹೋರಾಟದ ಕಥೆ ಮತ್ತು ರಾಷ್ಟ್ರನಿರ್ಮಾಣದಲ್ಲಿ ಕೊಡುಗೆ
  • ಕೇಂದ್ರ ಸಂಸ್ಕೃತಿ ಸಚಿವರಾದ ಶ್ರೀ. ಗಜೇಂದ್ರ ಸಿಂಗ್ ಶೇಖಾವತ್ ಅವರ ಮಾರ್ಗದರ್ಶನ : ‘ವಂದೇ ಮಾತರಮ್’ನ ಸಾಂಸ್ಕೃತಿಕ, ಐತಿಹಾಸಿಕ ಮತ್ತು ರಾಷ್ಟ್ರೀಯ ಮಹತ್ವದ ಕುರಿತು ಉಪನ್ಯಾಸ
  • ಈ ಪ್ರದರ್ಶನದಲ್ಲಿ ಮಾತೃಭೂಮಿಯ ಮೇಲಿನ ಪ್ರೀತಿ, ರಾಷ್ಟ್ರಕ್ಕಾಗಿ ತ್ಯಾಗ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಭಾವನೆಯನ್ನು ಅನುಭವಾತ್ಮಕ ರೂಪದಲ್ಲಿ ಪ್ರಸ್ತುತಪಡಿಸಲಾಗುವುದು.

ಸಮಸ್ತ ನಾಗರಿಕರಿಗೆ ಆಹ್ವಾನ :
ಸನಾತನ ಸಂಸ್ಥೆಯ ವತಿಯಿಂದ ಸಮಸ್ತ ಹಿಂದೂ ಸಮಾಜ, ರಾಷ್ಟ್ರಭಕ್ತ ನಾಗರಿಕರು ಮತ್ತು ಯುವ ವರ್ಗಕ್ಕೆ ಈ ಸ್ಮರಣೀಯ ಪ್ರದರ್ಶನದಲ್ಲಿ ಭಾಗವಹಿಸಿ ‘ವಂದೇ ಮಾತರಮ್’ನ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಪರಂಪರೆಯನ್ನು ತಿಳಿದುಕೊಳ್ಳುವಂತೆ ಆಗ್ರಹಿಸಲಾಗಿದೆ. ಭಾಗವಹಿಸುವಾಗ ಸರ್ಕಾರಿ ಗುರುತಿನ ಚೀಟಿಯನ್ನು (ಐಡಿ ಪ್ರೂಫ್) ಜೊತೆಗೆ ತರುವುದು ಕಡ್ಡಾಯವಾಗಿದೆ.

ಸ್ಥಳ : ಭಾರತ ಮಂಡಪಮ್, ನವದೆಹಲಿ (ಇಂದ್ರಪ್ರಸ್ಥ)

ದಿನಾಂಕ : ಡಿಸೆಂಬರ್ 13 ರಿಂದ 15, 2025

ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ:

https://Sanatanrashtrashankhnad.in
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!