ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಪಿಡಿ ಸಂಸ್ಥೆಯ ಸೀಡ್ ಫಂಡ್ ಯೋಜನೆಯಡಿ ಹೊಲಿಗೆ ಯಂತ್ರ ವಿತರಣೆ.

ದಿವ್ಯಾಂಗರ ಏಳ್ಗೆಗೆ ಶ್ರಮಿಸಲು ಶತಸಿದ್ಧ – ಶರಣಪ್ಪ ಮಡಿವಾಳ ಭರವಸೆ.

ಯಾದಗಿರಿ/ಗುರುಮಠಕಲ್: ಡಿ.12 ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎ.ಪಿ.ಡಿ) ಸಂಸ್ಥೆ ಗುರುಮಠಕಲ್ ವತಿಯಿಂದ ತಾಲೂಕಿನ ವಿವಿಧ ಗ್ರಾಮಗಳಿಂದ ಆಯ್ದೆಯಾದ 7 ಜನ ವಿಕಲಚೇತನರಿಗೆ ಸೀಡ್ ಫಂಡ್ ಯೋಜನೆಯಡಿ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದ ಶ್ರೀ ಶರಣಪ್ಪ ಮಡಿವಾಳ ಪುರಸಭೆಯ ಮುಖ್ಯಧಿಕಾರಿಗಳು ಗುರುಮಠಕಲ್ ರವರು ನಗರದಲ್ಲಿರುವ ವಿಕಲಚೇತನರ ಸರ್ವಾಂಗಣ ಪ್ರಗತಿಗೆ ವಿವಿಧ ಇಲಾಖೆಗಳ ಸಹಕಾರರೊಂದಿಗೆ ಪುರಸಭೆ ವತಿಯಿಂದ ಶ್ರಮಿಸಲು ಶತಸಿದ್ಧ ಎಂಬದಾಗಿ ಭರವಸೆ ನೀಡಿದರು.

ನೂತನವಾಗಿ ಪುರಸಭೆಯ ಮುಖ್ಯಾಧಿಕಾರಿಯಾಗಿ ಜವಾಬ್ದಾರಿ ಸ್ವೀಕರಿಸಿರುವ ಶರಣಪ್ಪ ಮಡಿವಾಳ ಅವರಿಗೆ ಎಪಿಡಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಪುರಸಭೆಯ ಕಾರ್ಯಾಲಯದ ವತಿಯಿಂದ ವಿಕಲಚೇತನರಿಗೆ ಇರುವ 5% ಅನುದಾನದ ಸಮರ್ಪಕ ಸದ್ಬಳಕೆ, ಹಾಗೂ ಬಹುದಿನಗಳಿಂದ ಖಾಲಿ ಇರುವ ನಗರ ಪುರ್ನವಸತಿ ಕಾರ್ಯಕರ್ತರ ನೇಮಕಾತಿಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು, ಡಿಸೆಂಬರ್ 3 ರಂದು ವಿಶ್ವ ವಿಕಲಚೇತನರ ದಿನಾಚರಣೆಯನ್ನು ಆಚರಣೆ ಮಾಡುವಂತೆ ಒತ್ತಾಯಿಸಿ ತಾಲೂಕ ಆರ್.ಪಿ.ಡಿ ಟಾಸ್ಕ್ ಪೊರ್ಸ್ ಆಧ್ಯಕ್ಷರಾದ ಸಿದ್ದನಗೌಡ ನಜರಪೂರ ಸಮ್ಮಖದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನಗರದ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಧಿಕಾರಿಗಾಳದ ಶ್ರೀ ಡಾ. ಮಹೇಶ ಕುಮಾರ್ ಸಜ್ಜನ, ಹಾಗೂ ಎಪಿಡಿ ಸಂಸ್ಥೆಯ ಹುಲಿಯಪ್ಪ, ಶಿವಯೋಗಪ್ಪ, ವಿರುಪಾಕ್ಷಪ್ಪ ಮಾ.ಪಾ. ಶಿಲ್ಪಾ ಎಸ್.ಶಿಲ್ಪಾ ಎಂ, ಅಂಬಿಕಾ, ರೇಷ್ಮಾ,ನಾಗಮಣಿ, ನಾಗರಾಜ,ಆರ್.ಪಿ.ಡಿ ಟಾಸ್ಕ ಪೊರ್ಸ ಪದಾಧಿಕಾರಿಗಳು, ಹಾಗೂ ವಿವಿಧ ಗ್ರಾಮಗಳಿಂದ ಬಂದಂತಹ ವಿಕಲಚೇತನರು ಉಪಸ್ಥಿತರಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!