ಬಳ್ಳಾರಿ / ಕಂಪ್ಲಿ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಅನ್ನಪೂರ್ಣ ಕ್ರಿಯೇಷನ್ಸ್ ಸಿರಿಗೇರಿರವರ ರಾಜ್ಯ ಪ್ರಶಸ್ತಿ ಪುರುಸ್ಕೃತ, ಚಲನಚಿತ್ರ ನಟಿ, ಬಿಗ್ ಬಾಸ್ 6ನೇ ಸೀಸನ್ ಖ್ಯಾತಿಯ ಅಕ್ಷತಾ ಪಾಂಡವಪುರರವರ ಏಕಪಾತ್ರ ಅಭಿನಯದ ನಾಟಕ ‘ಲೀಕ್ ಔಟ್’ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿನ ಅಂಕು-ಡೊಂಕು ತಿದ್ದುವ ಮೂಲಕ ನವ ಸಮಾಜ ನಿರ್ಮಾಣದಲ್ಲಿ ರಂಗಭೂಮಿ ಪಾತ್ರ ಅತ್ಯಂತ ಮಹತ್ತರವಾಗಿವೆ ಎಂದರು.
ಅಕ್ಷತಾ ಪಾಂಡವಪುರ ಅವರ ಏಕವ್ಯಕ್ತಿ ನಾಟಕ ‘ಲೀಕ್ ಔಟ್’ ಅತ್ಯುತ್ತಮವಾಗಿ ಪ್ರದರ್ಶನಗೊಂಡಿತು.
ಅಕ್ಷತಾ ನೋಡುಗರನ್ನು ಕೇಂದ್ರವಾಗಿರಿಸಿಕೊಂಡು ನಾಟಕವನ್ನು ವ್ಯಕ್ತಪಡಿಸಿದರು. ನೋಡುಗರ ಮನಸ್ಸನ್ನು ಮೀಟಿ ಅವರನ್ನು ಅವರೇ ಪ್ರಶ್ನಿಸಿಕೊಳ್ಳುವಂತೆ ಮಾಡುವ ಉದ್ದೇಶವನ್ನು ಹೊಂದಿದೆ. ತನ್ನೊಳಗಿನ ಪ್ರಶ್ನೆ ಅವರದೂ ಹೌದೇ? ಅಥವಾ ತನ್ನೊಳಗಿನ ಪ್ರಶ್ನೆ ಅವರದೂ ಆಗಿ ಪ್ರವೇಶ ಪಡೆದೀತೇ? ಎಂಬುದು ಅವರ ಪ್ರಯತ್ನ. ಮತ್ತು ಹಾಗೆ ಆಗಬೇಕು ಎಂಬುದು ಅವರ ಆಶಯವಾಗಿತ್ತು.
ಟ್ರೋಲ್ ಯುಗದಲ್ಲಿ ಹೀಗೆ ತನಗೆ ಪರಿಚಯವೇ ಇಲ್ಲದ ಪ್ರೇಕ್ಷಕರ ನಡುವೆ ಆತ್ಮವಿಶ್ವಾಸದಿಂದ ಮುನ್ನುಗ್ಗುವುದು ಮತ್ತು ಊಹಾತೀತ ಪ್ರತಿಕ್ರಿಯೆಗಳನ್ನು ತನ್ನೊಡನೆ ಕ್ಯಾರಿ ಮಾಡ್ಕೊಂಡು ತಾನು ಏನು ಹೇಳ ಹೊರಟಿದ್ದೇನೋ ಅದನ್ನು ತಲುಪಿಸಲು ಮುನ್ನಡೆಯುವುದು ಇಲ್ಲಿನ ಕ್ರಿಯೆಯಾಗಿದೆ. ಇದನ್ನವರು ಪ್ರೇಕ್ಷಕರನ್ನೇ ಪಾತ್ರಧಾರಿಗಳನ್ನಾಗಿಸಿಕೊಂಡರು.
ಈ ನಾಟಕ ನೋಡುವ ಪ್ರೇಕ್ಷಕರು ಅಲ್ಲಿ ನಾಟಕವನ್ನು ಅರಸುತ್ತಿದ್ದರು ಎಂಬುದನ್ನು ಮರೆಯುವಂತಿಲ್ಲ. ಈ ನಾಟಕವು ಪ್ರದರ್ಶನವಾಗುವ ಪ್ರದೇಶ, ಪ್ರೇಕ್ಷಕರ ವೈವಿಧ್ಯ ಇತ್ಯಾದಿಗಳಿಗೆ ತಕ್ಕಂತೆ ಪರಿಣಾಮವನ್ನು ಬೀರಿತು. ಹೀಗಾಗಿ ಕೆಲವೆಡೆ ಇದು ಭಾವನೆಗಳನ್ನು ಮೀಟಬಹುದು, ಕೆಲವೊಮ್ಮೆ ಸ್ಪರ್ಶಿಸಿ ದಾಟಬಹುದು, ಒಮ್ಮೊಮ್ಮೆ ಇನ್ನೇನೋ ನಿರೀಕ್ಷೆಯನ್ನು ಅನ್ನಿಸಬಹುದು. ಉತ್ತಮವಾಗಿ ನಾಟಕ ಪ್ರದರ್ಶನಗೊಂಡಿತು.
ಉಪನ್ಯಾಸಕರುಗಳಾದ ಬಾಲಾಜಿ ಎಂ. ಪಿ., ರಾಜ್ಮಾ ಟಿ.ಎಮ್.ಆರ್., ಕೆ. ಮಹೇಶ., ಡಾ. ಅನ್ನಪೂರ್ಣ ಗುಡುದೂರು., ಖಲಿಲ್ ಗ್ರಂಥಪಾಲಕರಾದ ಶ್ರೀ ಎ.ಜಿ.ವೀರಭದ್ರಪ್ಪ., ಅಧೀಕ್ಷಕರಾದ ನಾಗಮ್ಮ ಬಿ. ಸಹಾಯಕರಾದ ಸಿದ್ದಾರೂಢ, ಇತರೆ ಬೋಧಕ್ಕೇತರ ಸಿಬ್ಬಂದಿ ಹಾಗೂ ಪ್ರಮುಖರಾದ ಅಂಬಣ್ಣ, ಅಶೋಕ ಕುಕುನೂರು, ಬಿ. ಎಂ. ರುದ್ರಯ್ಯ, ಚಂದ್ರಶೇಖರ ಗೌಡ, ಕಲ್ಗುಡಿ ರತ್ನ, ಡಾ. ಜಗನಾಥ್ ಹಿರೇಮಠ್, ಮತ್ತು ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















